Breaking News

Spread the love

ವಿದ್ಯಾರ್ಥಿಗಳು ತಂದೆ ತಾಯಿಗಳ ಮತ್ತು ಗುರುವಿನ ಕನಸ್ಸಿಗೆ ಸ್ಪೂರ್ತಿ ತುಂಬಬೇಕು
_ ಪ್ರೋ ಸಂಜಯ ಖೋತ
ಮೂಡಲಗಿ : ವಿದ್ಯಾರ್ಥಿಗಳ ತಂದೆ ತಾಯಿಗಳು ತಮ್ಮ ಮಕ್ಕಳ ಜೀವನದ ಬಗ್ಗೆ ವಿಶೇಷವಾದ ಮತ್ತು ಆನಂದದಾಯಿಕ ಕನಸ್ಸುಗಳನ್ನು ಹೊಂದಿರುತ್ತಾರೆ ಅಂತಹ ಕನಸ್ಸುಗಳಿಗೆ ಗುರುವಿನ ಪ್ರೇರಣೆ ಸಿಕ್ಕಾಗ ಅದೊಂದು ಅದ್ಬುತ ಕ್ರೀಯಾಶೀಲ ಬದುಕನ್ನು ಮಕ್ಕಳಲ್ಲಿ ಸೃಷ್ಠಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಂದೆ ತಾಯಿಗಳ ಮತ್ತು ಗುರುವಿನ ಪ್ರೀತಿ ಹಾಗೂ ಉತ್ತಮ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮ ಉಜ್ವಲವಾದ ಬದುಕನ್ನು ಅಮೂಲ್ಯವಾದ ಗುರಿಯೊಂದಿಗೆ ಸಾಕಾರಗೊಳಿಸಿಕೊಳ್ಳಬೇಕೆಂದು ಮೂಡಲಗಿಯ ಎಂಇಎಸ್ ಪದವಿ ಕಾಲೇಜಿನ ನಿವೃತ್ತ ಉಪನ್ಯಾಸಕ ಸಂಜಯ ಖೋತ ತಿಳಿಹೇಳಿದರು.
ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅತಿಥಿ ಸ್ಥಾನವನ್ನು ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳಿಗೆ ತಂದೆ ತಾಯಿಗಳೇ ನಿಜವಾದ ದೇವರುಗಳು ಗುರುಗಳೇ ಪೂಜಾರಿಗಳಾಗಿದ್ದು ದೇವರ ಭಕ್ತಿಯಂತೆ ಅಧ್ಯಯನ ಮತ್ತು ಗುರಿ ಕಡೆಗೆ ಗಮನ ಹರಿಸಿದಾಗ ಸಾದಕರಾಗುವದು ಸಾಧ್ಯ ಇಂದು ಪ್ರಪಂಚದ ದೊಡ್ಡ ದೊಡ್ಡ ಸಿರಿವಂತರು ಮೊದಲು ಚಿಕ್ಕಪುಟ್ಟ ಉದ್ಯೋಗಗಳನ್ನು ಮಾಡಿ ಕಾಯಕ ನಿಷ್ಠೆಯೊಂದಿಗೆ ಸಿರಿವಂತರಾಗಿದ್ದು ಅವರಂತೆ ನೀವುಗಳಾಗಿ ಎಂದು ಮಾರ್ಗದರ್ಶನ ನೀಡಿದರು.
ಅತಿಥಿ ಆರ್.ಡಿ.ಎಸ್. ಸಿ.ಬಿ.ಎಸ್.ಇ ಶಾಲೆಯ ಮೆಂಟರ್ ಇಂದಿರಾ ಸಾತನೂರ ಮಾತನಾಡಿ ಸಾಧನೆ ಮಾಡುವವನಿಗೆ ಹಠ ಇರಬೇಕು ಸಾಧಿಸುವ ಛಲ ಇರಬೇಕು ಕೇವಲ ಬೇರೆಯವರನ್ನು ನೋಡಿ ನನಗೆ ಅದು ಬರಲ್ಲ ನನಗೆ ಅದು ಸಿಗಲ್ಲ ಅಂದು ಕೊಳ್ಳದೇ ಅದು ನನ್ನಿಂದ ಸಾಧ್ಯ ಎಂದರೆ ಇಡೀ ಪ್ರಪಂಚವನ್ನು ಗೆಲ್ಲಬಹುದು ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಶಕ್ತಿ ಕಡಿಮೆ ಮಾಡಿಕೊಂಡು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸಬೇಕೆಂದರು.
ಅತಿಥಿ ಮೂಡಲಗಿ ಜಾನಪದ ಗಾಯಕ ಶಬ್ಬಿರ ಡಾಂಗೆ ಮಾತನಾಡಿ ಬಡತನದಲ್ಲಿ ನಮ್ಮ ತಂದೆ ತಾಯಿಗಳು ಸಾಕಿ ಬೆಳಿಸಿದ ನೋವು ನಮಗಿದೆ ನಮ್ಮ ನೋವು ಮಕ್ಕಳಿಗೆ ಆಗಬಾರದು ಎಂಬ ಉದ್ದೇಶ ಪ್ರತಿಯೊಬ್ಬ ತಾಯಿ ತಂದೆಯದಾಗಿರುತ್ತದೆ ಅಂತಹ ತಂದೆ ತಾಯಿಗಳ ಕನಸು ನನಸು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ ಎಂದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಧನೆಯ ಛಲವಿರಬೇಕು ಶಿಕ್ಷಣ ಕೇವಲ ಆಟಿಕೆಯ ವಸ್ತುವಾಗದೆ ಬದುಕಿನ ಸಾರ್ಥಕತೆಯನ್ನು ಜಗತ್ತಿಗೆ ತೋರ್ಪಡಿಸುವಂತೆ ಸಾಧನೆ ನಮ್ಮದಾಗಿರಬೇಕೆಂದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಮಾತನಾಡಿ ಜೀವನ ನಾವು ಅಂದುಕೊಂಡಷ್ಟು ಸುಲಭದಾಯಿಕವಾಗಿಲ್ಲ ವಿದ್ಯಾರ್ಥಿ ಹಂತದಿಂದಲ್ಲೆ ಸಾಧನೆಯ ಗುರಿ ಇದ್ದಾಗ ಮತ್ತು ಒಳ್ಳೆಯ ಗುರುವಿನ ಮಾರ್ಗದರ್ಶನ ಸಿಕ್ಕಾಗ ವ್ಯಕ್ತಿಯ ಬದುಕು ಸಾಧನೆಯ ಸಾರ್ಥಕತೆ ಪಡೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಕ್ರೀಡೆ, ಸಾಂಸ್ಕøತಿಕ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಉತ್ತಮ ಫಲಿತಾಂಶ ಸಾಧಕರಿಗೆ ಸತ್ಕರಿಸಲಾಯಿತು
ಕಾರ್ಯಕ್ರಮದಲ್ಲಿ ಪೂಜಾ ಪಾರ್ಶಿ, ರಮೇಶ ಪಾಟೀಲ, ಅಜಯ ಕದಂ, ಸಿದ್ದಣ್ಣ ದುರದುಂಡಿ, ಜಯಶ್ರೀ ಮುರಗೋಡ, ಪರಶುರಾಮ ಕುಲಕರ್ಣಿ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿ ಸದಾಶಿವ ಬ್ಯಾಳಿ ಪೂಜಾ ನಾಯಿಕ ನಿರೂಪಿಸಿದರು ಉಪನ್ಯಾಸಕ ಸಂಜೀವ ವಾಲಿ ಸ್ವಾಗತಿಸಿದರು ಉಪನ್ಯಾಸಕ ಮಲ್ಲಪ್ಪಾ ಜಾಡರ ವಂದಿಸಿದರು.


Spread the love

About inmudalgi

Check Also

*ದೇಶದಲ್ಲಿ ಆಹಾರ ಕೊರತೆ ಇಲ್ಲ; ಅಗತ್ಯವಿರುವಷ್ಟು ಇದೆ-ಸಂಸದ ಈರಣ್ಣ ಕಡಾಡಿ*

Spread the love *ದೇಶದಲ್ಲಿ ಆಹಾರ ಕೊರತೆ ಇಲ್ಲ; ಅಗತ್ಯವಿರುವಷ್ಟು ಇದೆ-ಸಂಸದ ಈರಣ್ಣ ಕಡಾಡಿ* ಮೈಸೂರು: ರಾಜ್ಯದ 5 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ