Breaking News
Home / ಬೆಳಗಾವಿ / ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರಿಂದ ಸವದತ್ತಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ

ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರಿಂದ ಸವದತ್ತಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ

Spread the love

ಊಧೋ..ಊಧೋ..ಊಧೋ..ಯಲ್ಲಮ್ಮ ನಿನ್ನ ಹಾಲು ಕೂಧೋ…

ಬೆಟಗೇರಿ ಗ್ರಾಮದ ಯಲ್ಲಮ್ಮದೇವಿ ಭಕ್ತರಿಂದ
ಸವದತ್ತಿ ದೇವಸ್ಥಾನಕ್ಕೆ ಪಾದಯಾತ್ರೆಯ ಪ್ರಯಾಣ

ವರದಿ: ಅಡಿವೇಶ ಮುಧೋಳ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸವದತ್ತಿ ಯಲ್ಲಮ್ಮ ದೇವಿ ನೂರಾರು ಜನ ಭಕ್ತರು ಎತ್ತಿನ ಗಾಡಿ(ಚಕ್ಕಡಿ) ಹೊಡಿಕೊಂಡು ಪಾದಯಾತ್ರೆ ಮೂಲಕ ಸವದತ್ತಿಯ ದೇವಸ್ಥಾನದ ಯಲ್ಲಮ್ಮ ದೇವಿ ದರ್ಶನಕ್ಕಾಗಿ ತೆರಳುವ ಕಾರ್ಯಕ್ರಮ ಫೆ.4ರಂದು ಸಡಗರದಿಂದ ನಡೆಯಿತು.
ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಕೂಡಾ ಊರಿನ ಹಲವು ಕುಟುಂಬಗಳು ಚಕ್ಕಡಿ, ಎತ್ತುಗಳನ್ನು ಶೃಂಗರಿಸಿ,
ಯಲ್ಲಮ್ಮ ದೇವಿ ಕೃರ್ತ ಗದ್ಗುಗೆಯನ್ನು ಇಲ್ಲಿಯ ಯಲ್ಲಮ್ಮ ದೇವಿಯ ಅರ್ಚಕರ, ಆರಾಧಕ ಮಹಿಳೆಯರು
ತಲೆಯ ಮೇಲೆ ಶ್ರೀದೇವಿಯ ಜಗಹೊತ್ತು ಊಧೋ.. ಊಧೋ.. ಊಧೋ.. ಯಲ್ಲಮ್ಮ…ನಿನ್ನ ಹಾಲು… ಕೂಧೋ… ಎನ್ನುತ್ತಾ ಸಕಲ ವಾದ್ಯ ಮೇಳಗಳೊಂದಿಗೆ ಶ್ರೀದೇವಿಯ ದರ್ಶನಕ್ಕೆ ಕಾಲ್ನಡಿಗೆ ಮೂಲಕ ಫೆ.4 ರಂದು ಬುಧವಾರ ಸಂಜೆ ಪ್ರಯಾಣ ಬೆಳಸಿದರು.
ಫೆ.4ರಂದು ಬೆಟಗೇರಿ ಗ್ರಾಮದಿಂದ ಪಾದಯಾತ್ರೆ ಮೂಲಕ ಹೊರಟು ಫೆ.5ರಂದು ಸಂಜೆ ಹೊತ್ತಿಗೆ ಸವದತ್ತಿ ಏಳುಕೊಳ್ಳದ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತಲುಪಿ, ಫೆ.6ರಂದು ಬೆಳಗ್ಗೆ ಶ್ರೀ ಯಲ್ಲಮ್ಮದೇವಿ ದರ್ಶನ ಪೂಜೆ, ಉಡಿ ತುಂಬುವ, ಶ್ರೀದೇವಿಯ ಆರಾಧಕರಿಂದ ಹಡಲಗಿ ತುಂಬುವ, ನೈವೇದ್ಯ ಸಮರ್ಪಿಸುವ ಹಾಗೂ ಹರಕೆ ಸಮರ್ಪಿಸುವ,
ವಿವಿಧ ಧಾರ್ಮೀಕ ಕಾರ್ಯಕ್ರಮ ನಡೆಯಲಿವೆ. ಸವದತ್ತಿ ಯಲ್ಲಮ್ಮ ದೇವಸ್ಥಾನದಿಂದ ಫೆ.7ರಂದು ಹೊರಟು, ಫೆ.8 ರಂದು ಸಂಜೆ ಹೊತ್ತು ಸ್ವ ಗ್ರಾಮ ಬೆಟಗೇರಿಗೆ ಮರಳಿ ಬರಲಾಗುವುದು ಎಂದು ಗ್ರಾಮದ ಪಾದಯಾತ್ರಿಕರ ಆಯೋಜಕ ಸಮಿತಿ ಸಂಚಾಲಕ ಮುತ್ತೆಪ್ಪ ಮಾಕಾಳಿ ತಿಳಿಸಿದರು.
ಸ್ಥಳೀಯ ಹಿರಿಯರಾದ ಮುದಕಪ್ಪ ರಾಮಗೇರಿ, ಲಕ್ಷ್ಮಣ ಚಿನ್ನನ್ನವರ, ವೀರಭದ್ರಪ್ಪ ನೀಲಣ್ಣವರ, ಬಸಪ್ಪ ಮುರಗೋಡ, ರಾಮಣ್ಣ ಚಿನ್ನನ್ನವರ, ಮುತ್ತೆಪ್ಪ ಮಾಕಾಳಿ ನೇತೃತ್ವದಲ್ಲಿ ಮಹಿಳೆಯರು, ಮಕ್ಕಳು, ಪುರುಷರು, 13 ಎತ್ತಿನ ಚಕ್ಕಡಿ, ಟ್ಯಾಕ್ಟರ್, ಟಂ ಟಂ., ದ್ವಿಚಕ್ರ ವಾಹನÀಗಳು ಸೇರಿದಂತೆ ಸುಮಾರು ನೂರಾರು ಜನ ಇಲ್ಲಿಯ ಭಕ್ತರು ಪಾದ ಯಾತ್ರೆ ಮೂಲಕ ಯಲ್ಲಮ್ಮದೇವಿ ದರ್ಶನಕ್ಕಾಗಿ ಪ್ರಯಾಣ ಮಾಡಿದರು.


Spread the love

About inmudalgi

Check Also

‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

Spread the loveಮೂಡಲಗಿ: ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ