Breaking News

Spread the love

ಮೂಡಲಗಿ- ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿದ್ದು, ಅದರಲ್ಲೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ವಸತಿ ಶಾಲೆಗಳನ್ನು ಆರಂಭಿಸಿದ್ದು, ಇದರಿಂದ ಶಿಕ್ಷಣದ ಗುಣಮಟ್ಟವು ದಿನದಿಂದ ದಿನಕ್ಕೆ ಸುಧಾರಣೆಗೊಳ್ಳುತ್ತಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪ್ರಶಂಸೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಸುಣಧೋಳಿ (ಬಳೋಲ ಮಡ್ಡಿ) ಗ್ರಾಮದಲ್ಲಿ ಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಿರುವ ಅಲ್ಪ ಸಂಖ್ಯಾತರ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣದ ಬಗ್ಗೆ ಪ್ರತಿ ಗ್ರಾಮದಲ್ಲೂ ಸಾರ್ವಜನಿಕರಿಗೆ  ಅರಿವು ಮೂಡುತ್ತಿರುವುದರಿಂದ  ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಸುಣಧೋಳಿ ಗ್ರಾಮದ ಪ್ರಗತಿಗೆ ಸರ್ಕಾರದಿಂದ ಸಾಕಷ್ಟು ಅನುದಾನವನ್ನು ವ್ಯಯಿಸಲಾಗಿದೆ. ಅದರಲ್ಲೂ ನಮ್ಮ ಬಿಜೆಪಿ ಸರ್ಕಾರವಿದ್ದಾಗ ಕೋಟ್ಯಾಂತರ ರೂಪಾಯಿ ಅನುದಾನವು ನಮ್ಮ ಕ್ಷೇತ್ರಕ್ಕೆ ಹರಿದು ಬಂದಿದ್ದು, ಈಗೀನ ಸಂದರ್ಭದಲ್ಲಿ ಅದು ಕಷ್ಟಕರವಾಗಿದೆ ಎಂದು ಹೇಳಿದರು.
ಹಿಂದುಳಿದ, ಅಲ್ಪ ಸಂಖ್ಯಾತರು,  ಪ.ಜಾ.ಪ.ಪಂ. ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಉದ್ದೇಶದಿಂದ ಅರಭಾವಿ ಕ್ಷೇತ್ರದಲ್ಲಿ ಸುಮಾರು‌ 13 ವಿವಿಧ ವಸತಿ ಶಾಲೆಗಳನ್ನು ಮಂಜೂರು ಮಾಡಿಸಲಾಗಿದೆ. ಈ ವಸತಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಭವಿಷ್ಯದ ವ್ಯಕ್ತಿಗಳಾಗಿ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತಾರೆ. ಪಾಲಕರು, ಕಲಿತ ಶಾಲೆ ಮತ್ತು ತಮ್ಮೂರಿಗೆ ಒಳ್ಳೆಯ ಹೆಸರನ್ನು ತರುವ ಆದರ್ಶ ವ್ಯಕ್ತಿಯಾಗಲಿದ್ದಾರೆ. ಇದು ನಮ್ಮ ಶಿಕ್ಷಣದ ಶಕ್ತಿಯಾಗಿದೆ ಎಂದವರು ಹೇಳಿದರು.
ನವೆಂಬರ್ ತಿಂಗಳಲ್ಲಿ ನಮ್ಮ ನೆರೆ- ಹೊರೆಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿದ್ದು, ಅದಕ್ಕಾಗಿ ರೈತರ ರಸ್ತೆಗಳನ್ನು ಸುಧಾರಣೆ ಮಾಡಲಾಗುವುದು. ಕ್ಷೇತ್ರದಲ್ಲಿ ಇರುವ ಎಲ್ಲ ರೈತಾಪಿ ವರ್ಗದ ಅನುಕೂಲಕ್ಕಾಗಿ ರಸ್ತೆಗಳ ಸುಧಾರಿಸಲು ಈಗಾಗಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುಣಧೋಳಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಅಲ್ಪ ಸಂಖ್ಯಾತರ ಮೋರಾರ್ಜಿ ವಸತಿ ಶಾಲೆಗೆ ಅಲ್ಪ ಸಂಖ್ಯಾತರ ಇಲಾಖೆಯ ಅನುದಾನದಡಿ ಮಂಜೂರು ಪಡೆಯಲಾಗಿದೆ ಎಂದವರು ತಿಳಿಸಿದರು.
ಸುಣಧೋಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಪ್ಪ ಅಮಣಿ,ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಫಕೀರಪ್ಪ ಪೂಜೇರಿ, ತಾಲ್ಲೂಕು ಅಧಿಕಾರಿ ಹಿರೇಮಠ, ಬಿಇಓ ಪಿ.ಬಿ.ಹಿರೇಮಠ, ಸುಣಧೋಳಿ- ಲಕ್ಷ್ಮೇಶ್ವರ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

About inmudalgi

Check Also

ಅ. 21ರಂದು ಅರಭಾವಿ ಮಠದಲ್ಲಿ ಶಿವಾನುಭವ ಗೋಷ್ಠಿ

Spread the loveಮೂಡಲಗಿ: ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ಅ. 21ರಂದು ಸಂಜೆ 6.30ಕ್ಕೆ ಅಮವಾಸ್ಯೆಯ ಶಿವಾನುಭವ ಗೋಷ್ಠಿಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ