
ಮೂಡಲಗಿ: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಕಾಶಲ್ಯ ಮತ್ತು ಜ್ಞಾನ ನೀಡುವದರ ಜೊತೆಗೆ ಉದ್ಯೋಗ ನೀಡುವ ದಾಲ್ಮಿಯಾ ಭಾರತ ಪೌಂಡೇಶನದ ಮುಖ್ಯ ಉದ್ದೇಶವಾಗಿದೆ ಎಂದು ದಾಲ್ಮಿಯಾ ಭಾರತ ಪೌಂಡೇಶನದ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಘಟಕದ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್ ಹೇಳಿದರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಾಲ್ಮಿಯಾ ಭಾರತ ಫೌಂಡೇಶನದ ದಾಲ್ಮಿಯಾ ಜ್ಞಾನ ಮತ್ತು ಕಾಶಲ್ಯ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸಹಾಯಕ ಇಲೇಕ್ಟಿçÃಷಿಯನ್ ವೃತ್ತಿಯ ತರಬೇತಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ದಾಲ್ಮಿಯಾ ಪೌಂಡೇಶನದಿAದ ದೇಶ ವಿವಿಧ ಭಾಗಗಳಲ್ಲಿ ೧೪ ಕೇಂದ್ರಗಳಲ್ಲಿ ಯುವಕ-ಯುವತಿಯರಿಗೆ ಸ್ವ-ಉದ್ಯಗಕ್ಕಾಗಿ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಬೆಳಗಾವಿಯಯಲ್ಲಿ ಈಗಾಗಲೇ ಮಹಿಳೆಯರಿಗಾಗಿಯೇ ಬ್ಯೂಟಿಸಿಯನ್ ತರಬೇತಿ ಕೇಂದ್ರ ಆರಂಭವಾಗಿದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕೇವಲ ಓದು-ಬರಹಗಾಗಿಯೇ ಸಿಮೀತಿವಾಗಬಾರದು ನಮ್ಮ ದೇಶಕ್ಕೆ ಕೌಶಲ್ಯವನ್ನು ಹೊಂದಿದ ಯುವಕರ ಅತ್ಯಾವಶ್ಯಕ ಹೆಚ್ಚಾಗಿದೆ ಎಂದರು.
ಯುವಕ-ಯುವಕರಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಹೊರಗೆ ತರುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ ಎಂದ ಅವರು ಮೂಡಲಗಿಯಲ್ಲಿ ಆರಂಭವಾದ ಜ್ಞಾನ ಮತ್ತು ಕೌಶಲ್ಯ ಕೇಂದ್ರವನ್ನು ಮೂಡಲಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಯುವಕ-ಯುವತಿಯರು ಸದುಪಯೋಗ ಪಡಿಸಿಕೊಂಡು ತಂದೆ-ತಾಯಿಗಳಿಗೆ ಮತ್ತು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳಿ ಬೆಳಗಬೇಕೆಂದರು.
ಮೂಡಲಗಿಶಿಕ್ಷಣ ಸಂಸ್ಥೆಯ ಅಧ್ಯಕ್ಷವೆಂಕಟೇಶ ಸೋನವಾಲಕರ ಮಾತನಾಡಿ,ಇಂದಿನ ದಿನಮಾಣಗಳಲ್ಲಿ ಎಲ್ಲರಿಗೂ ಸರಕಾರಿ ಉದ್ಯೋಗ ಸಿಗುವುದು ದುರ್ಲಬವಾಗಿದ್ದು ಅಂತಹದರಲ್ಲಿ ದಾಲ್ಮೀಯಾ ಪೌಂಡೇಶನ ಸಂಸ್ಥೆಯವರು ವೃತಿ ಕೌಶಲ್ಯ ತರಬೇತಿ ನೀಡಿ ಯುವ ಜನಂಗಕ್ಕೆ ಸ್ವಾವಲಂಬಿ ಜೀವನ ಮಾಡಲು ಶ್ರಮಿಸುತ್ತಿರುವದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬೆಳಗಾವಿ ಸ್ಪೂರ್ತಿ ಮಹಿಳಾ ಸಂಘದ ಅಧ್ಯಕ್ಷೆ ವಂದನಾ ಸಿಂಗ್ ಮಾತನಾಡಿ, ಯುವಕ-ಯುವತಿಯರ ಭವ್ಯ ಭವಿಷ್ಯದ ಒಳ್ಳಿತಿಗಾಗಿ ದಾಲ್ಮಿಯಾ ಸಂಸ್ಥೆಯು ಸಮಾಜಮುಖಿಯಾಗಿ ಧಾರ್ಮಿಕ, ಶೈಕ್ಷಣಿ, ಸಾಮಾಜಿಕ ಕಾರ್ಯ ಮಾಡುತ್ತಿದೆ. ಯುವಕರು ಒಂದರಲ್ಲಿ ಕೌಶಲ್ಯವನ್ನು ಪಡೆದುಕೊಂಡು ಸ್ವಾವಲಿಂಬಿಯಾಘಬೇಕು. ದೇಶಕ್ಕೆ ಹೊರೆಯಾಗಬಾರದು, ಪ್ರತಿಯೊಬ್ಬರ ಜೀವನದಲ್ಲಿ ಪರಿÀ್ರಮಕ್ಕೆ ಯಾವುದೇ ಹೊಲಿಕೆ ಇಲ್ಲ ಯುವಕರು ಪರಿಶ್ರಮಿಗಳಾಗಬೇಕು ಎಂದರು.
ಯಾದವಾಡ ದಾಲ್ಮಿಯಾ ಕಾರ್ಖಾನೆಯ ಕಾರ್ಯಕ್ರಮಾಧಿಕಾರಿ ರಾಮನಗೌಡ ಬಿ||ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಾಂತ ನಡೆಯುತ್ತಿರು ದಾಲ್ಮಿಯಾ ತರಬೇತಿ ಕೇಂದ್ರದಲ್ಲಿ ೬೭೦೦ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಸಂಸ್ಥೆ ತರಬೇತಿ ಪಡೆದ ಯುವಕರು ಒಳ್ಳೆಯ ಉದ್ಯೋಗದಲ್ಲಿ ತೋಡಗಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮ ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ವಿವಿಧ ಘಟಕದ ಮುಖ್ಯಸ್ಥರಾದ ಮನಿಷ ಮಹೇಶ್ವರಿ, ಅನೀಲ ಕಾವಳೆ, ಅರಬಿಂದಕುಮಾರ ಸಿಂಗ್, ಆನಂದಕುಮಾರ ತಿವಾರಿ, ಉಮೇಶ ದೇಶಾಯಿ, ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳಾದ ಈರಸಂಗಯ್ಯ ಭಾಗೋಜಿಮಠ, ಶಶಿಕಾಂತ ಹಿರೇಕೊಡಿ, ಅಮಿತಕುಮಾರ ಪಾಂಡೆ, ರಾಮನಗೌಡ ಬಿರಾದಾರ, ಶ್ರೀಧರ ಪಾಟೀಲ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪವನಕುಮಾರ ಕೆ.ಎಸ್, ಪಿಯು ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಪಾಟೀಲ, ಗ್ರಂಥಪಾಲಕ ಡಾ.ಬಸವಂತ ಬರಗಾಲಿ ಮತ್ತು ಉಪನ್ಯಾಸಕರು ಮತ್ತಿತರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ಎಮ್.ಎಸ್.ಕುಂದರಗಿ ಸ್ವಾಗತಿಸಿದರು, ಲೋಕೆಶ ಹಿಡಕಲ್ ನಿರೂಪಿದರು, ಪ್ರಕಾಶ ಚೌಡಕಿ ವಂದಿಸಿದರು.
IN MUDALGI Latest Kannada News