ಪತ್ರಿಕೆ ವಿತರಕರ ಜೊತೆಗೆ ಹುಟ್ಟು ಹಬ್ಬ ಆಚರಣೆ ಮೂಡಲಗಿ: ಇಲ್ಲಿಯ ಯುವ ವಕೀಲ ವಿನೋದ ಪಾಟೀಲ ತಮ್ಮ ಮಗ ಆರ್ಯನ್‍ನ 5ನೇ ಹುಟ್ಟುಹಬ್ಬವನ್ನು ದಿನಪತ್ರಿಕೆಗಳನ್ನು ವಿತರಿಸುವವರಿಗೆ ಉಪಹಾರದ ವ್ಯವಸ್ಥೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ವಿನೋದ ಮಾತನಾಡಿ ‘ಕೊರೊನಾದ ಆತಂಕ ಮತ್ತು ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸುದ್ದಿ ಪತ್ರಿಕೆಗಳನ್ನು ನಸುಕಿನಲ್ಲಿ ಮನೆಗಳಿಗೆ ತಲುಪಿಸುವ ವಿತರಣಾ ಕಾರ್ಯವು ಅನನ್ಯವಾಗಿದೆ. ಅವರಿಗೆ ಉಪಹಾರದ ವ್ಯವಸ್ಥೆ ಮಾಡುವುದು ನನ್ನ ಅಳಿಲು ಸೇವೆಯಾಗಿದೆ’ ಎಂದರು. …
Read More »Daily Archives: ಮೇ 2, 2020
ಚಿಕ್ಕೋಡಿ ವಿಭಾಗದ ಉಪಕೃಷಿ ನಿರ್ದೇಶಕ ಎಲ್.ಐ.ರೂಡಗಿ ಮೂಡಲಗಿಯ ಕೃಷಿ ಪರಿಕರ ಮಾರಾಟ ಮಳಿಗೆಗೆ ಬೇಟಿ ನೀಡಿದರು.
ಮೂಡಲಗಿ: ಮುಂಗಾರು ಹಂಗಾಮು ಮಳೆ ಬೇಗ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿರುವ ಹಿನ್ನಲೆಯಲ್ಲಿ ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೋಬ್ಬರ ಹಾಗೂ ಕೀಟನಾಶಕಗಳನ್ನು ಸರ್ಮಪಕವಾಗಿ ದಾಸ್ತಾನು ಮಾಡಿಕೊಂಡು ಸಕಾಲಕ್ಕೆ ರೈತರಿಗೆ ನಿಗದಿತ ದರಕ್ಕೆ ಮುಟ್ಟುವಂತೆ ಏರ್ಪಾಟು ಮಾಡಿಕೊಳ್ಳಲು ಕೃಷಿ ಇಲಾಖೆಯ ಚಿಕ್ಕೋಡಿ ವಿಭಾಗದ ಉಪಕೃಷಿ ನಿರ್ದೇಶಕ ಎಲ್.ಐ.ರೂಡಗಿ ಅವರು ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು. ಶನಿವಾರದಂದು ಘಟಪ್ರಭಾ, ರಾಜಾಪೂರ, ನಾಗನೂರ, ಹಾಗೂ ಮೂಡಲಗಿ ಪಟ್ಟಣ ಕೃಷಿ …
Read More »ಒಂದು ಕೋಟಿ ರೂಪಾಯಿ ಚೆಕ್ ಮುಖ್ಯಮಂತ್ರಿಗಳ ನಿಧಿಗೆ ಹಸ್ತಾಂತರ
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರ ಕೃಷ್ಣಾ ಕಚೇರಿಯಲ್ಲಿ ಬೆಳಗಾವಿಯ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂಪಾಯಿಗಳ ಚೆಕ್‌ನ್ನು ಮಾಜಿ ಸಚಿವರಾದ ಹಾಗೂ ಶಾಸಕರಾದ ಉಮೇಶ ಕತ್ತಿ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಹನುಮಂತ ಕೊಟಬಾಗಿ ಹಾಗೂ ರಾಜೇಂದ್ರ ದೇಸಾಯಿ ನೇತೃತ್ವದಲ್ಲಿ ವಿತರಿಸಲಾಯಿತು.
Read More »ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ,73 ಕ್ಕೇರಿದ ಸೊಂಕಿತರ ಸಂಖ್ಯೆ
ಬೆಳಗಾವಿ- ಶನಿವಾರ ಬೆಳಗಿನ ರಾಜ್ಯದ ಹೆಲ್ತ್ ಬುಲಿಟೀನ್ ಬಿಡುಗಡೆ ಆಗಿದೆ ,ಜಿಲ್ಲೆಯಲ್ಲಿ ಇಂದು ಮೊತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 73 ಕ್ಕೇರಿದೆ ಹಿರೇಬಾಗೇವಾಡಿಯ ಶಂಕಿತನಿಗೆ ಸೊಂಕು ಇರುವದು ದೃಡವಾಗಿದ್ದು,ಹಿರೇಬಾಗೇವಾಡಿ ಗ್ರಾಮದಲ್ಲಿ ಸೊಂಕಿತರ ಸಂಖ್ಯೆ 37 ಕ್ಕೇರಿದಂತಾಗಿದೆ .
Read More »