ಕೊರೋನಾ ಪಾಸಿಟಿವ್ ಕೇಸುಗಳು ಬೆಳಗಾವಿಯಲ್ಲಿ ಮುಂಜಾನೆ ಎರಡು ಪ್ರಕರಣಗಳು ಕಂಡು ಬಂದಿವೆ. ಸಂಜೆ ಯಾವ ಪ್ರಕರಣಗಳು ವರದಿಯಾಗಿಲ್ಲ. ಕರ್ನಾಟಕದಲ್ಲಿ ಇವತ್ತು ಒಂದೇ ದಿನ 99 ಕೇಸು ಬಂದಿದೆ. ಮುಂಜಾನೆ 84 ಕೇಸುಗಳು ಪತ್ತೆಯಾದರೆ ಸಂಜೆ 15 ಪ್ರಕರಣಗಳು ಪತ್ತೆಯಾಗಿವೆ. ಅಂತಾರಾಜ್ಯದಿಂದ ಬಂದವರಿಂದ ಕರ್ನಾಟಕಕ್ಕೆ ಕಂಟಕ ಕಾಡುತ್ತಿದೆ.
Read More »Daily Archives: ಮೇ 18, 2020
ಗಟ್ಟಿ ಬಸವಣ್ಣ ಕುಡಿಯುವ ನೀರು ಮತ್ತು ಜಲವಿದ್ಯುತ್ ಯೋಜನೆ ಅನುಷ್ಠಾನ ಕುರಿತು ಚರ್ಚೆ
ಬೆಳಗಾವಿ: ಗೋಕಾಕ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲು ಗೋಕಾಕ ನಗರದ ಬಳಿ ಗಟ್ಟಿ ಬಸವಣ್ಣ ಜಲಾಶಯ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾದಿಂದ ಎಲ್ಲ ರೀತಿಯ ಅನುಮತಿ ಮತ್ತು ನೆರವು ನೀಡಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ …
Read More »ಲಾಕ್ಡೌನ್ 4.0; ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು
ಬೆಂಗಳೂರು: ನಿನ್ನೆ ತಾನೆ ಲಾಕ್ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಕ್ಯಾಬಿನೇಟ್ ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಿಎಂ ತೆಗೆದುಕೊಂಡು ನಿರ್ಧಾರಗಳು ಹೀಗಿವೆ: ಕಂಟೈನ್ಮೆಂಟ್ ಝೋನ್ನಲ್ಲಿ ಬಿಗಿ ಭದ್ರತೆ. ಕಾನೂನು ಮೀರಿದರೆ ಕ್ರಿಮಿನಲ್ ಮೊಕದ್ದಮೆ ಜನರ ಓಡಾಟಕ್ಕಾಗಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲ ಬಸ್ಗಳ ಓಡಾಟಕ್ಕೆ ಅನುಮತಿ ಒಂದು ಬಸ್ನಲ್ಲಿ ಕೇವಲ …
Read More »ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು
ಬೆಳಗಾವಿ:ಸೋಮವಾರದ ಕೊರೋನಾ ಬುಲೆಟಿನ್ ಬಿಡುಗಡೆಗೊಂಡಿದೆ. ಬೆಳಗಾವಿಯಲ್ಲಿ ಇಂದು ಓರ್ವ ಮಹಿಳೆ ಹಾಗೂ ಪುರುಷನಿಗೆ ಕೊರೋನಾ ಕಂಡು ಬಂದಿದೆ.ಒಟ್ಟು ಇಬ್ಬರಿಗೆ ಕೊರೋನಾ ಇಂದು ಕಂಡು ಬಂದಿದೆ. ಕೊರೋನ ಪಾಸಿಟಿವ್ ಕೇಸುಗಳು ಇಂದು 1231 ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇವತ್ತು ಒಂದೇ ದಿನ 84ಕೇಸು ಬಂದಿದೆ. ಚಿಕ್ಕ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು, ಇಂದು 10 ವರ್ಷದ ಒಳಗಿನ 10 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ
Read More »