ಬೆಟಗೇರಿ:ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದರೂ ಸಹ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ರವಿವಾರ ಸೇರುವ ಸಂತೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಶನಿವಾರದಂದು ಅಪಾರ ಜನಸಂದಣಿಯೊoದಿಗೆ ಸಂತೆ ನಡೆದು, ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾದ ಘಟನೆ ಆ.8 ರಂದು ನಡೆದಿದೆ. ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಜನರ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಇಲ್ಲಿಗೆ ಬಂದು …
Read More »Daily Archives: ಆಗಷ್ಟ್ 8, 2020
ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ
ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ ಗೋಕಾಕ- ಅಗಷ್ಟ್ ೮: ಚಂದ್ರಶೇಖರ ಕಂಬಾರರ ಕಾವ್ಯ, ಕಥೆ, ಕಾದಂಬರಿ ನಾಟಕ ಕೃತಿಗಳಲ್ಲಿ ಅಡ್ಡಾಡಿದರೆ ದೇಶಿಯ ನೆಲದಲ್ಲೇ ಎಡವಿದಂತೆ, ಎಬ್ಬಿಸಿದಂತೆ, ಕೆಣಕಿದಂತೆ, ಭಾಸವಾಗುತ್ತದೆ. ಅದೇ ವಾಸನೆ ನೀಡುವ “ಸಿರಿಸಂಪಿಗೆ ” ಜಾನಪದ ನೆಲದ ಸುವಾಸನೆ ಬೀರುವ ಹೂವಾಗಿದೆ ಎಂದು ಹೇಳಿದರು. ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ …
Read More »ಪ್ರಕಟಣೆ
ಮೂಡಲಗಿ 08/08/2020 – ಸುಹಾಸಿನಿ ಬಾಳಪ್ಪ ಬಕರೆ(ಭಸ್ಮೆ) ನಾನು ದಿನಾಂಕ 28/೦7/2020 ರಂದು ಸಿದ್ದಾಪುರ ಮತ್ತು ರಾಣೇಬೆನ್ನೂರ್ ಗೆ ಪ್ರಯಾಣಿಸುವಾಗ ನನ್ನ ಬ್ಯಾಗ್ ನಲ್ಲಿದ್ದ ಚೆಕ್, ಖಾಲಿ ಹಾಳೆಗಳು ಮತ್ತು ಪಾಸ್ಬೂಕ್ ಮಾರ್ಗ ಮಾಧ್ಯದಲ್ಲಿ ಬ್ಯಾಗ್ ಹರಿದ ಕಾರಣ ಎಲ್ಲೊ ಕಳೆದುಹೋಗಿವೆ. ಆದ ಕಾರಣ ದಯವಿಟ್ಟು ಯಾರಿಗಾದರೂ ಸಿಕ್ಕರೆ ನನ್ನ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ. ( ಸುಹಾಸಿನಿ ಬಾಳಪ್ಪ ಬಕರೆ @ಭಸ್ಮೆ, ಲಕ್ಶ್ಮಿ ನಗರ ಮೂಡಲಗಿ 591312 ಜಿಲ್ಲೆ- ಬೆಳಗಾವಿ …
Read More »ಮೂಡಲಗಿ ಪಟ್ಟಣದಲ್ಲಿ ಇಂದು ಮತ್ತೆ ಕೊರೋನಾ ಕೇಸ್ ಪತ್ತೆ;
ಮೂಡಲಗಿ ಪಟ್ಟಣದಲ್ಲಿ ಇಂದು 1 ಕೊರೋನಾ ಕೇಸ್ ಪತ್ತೆ; ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಲಕ್ಷ್ಮಿ ನಗರದ ಮಹಿಳೆಗೆ ಸೋಂಕು ದೃಢಪಟ್ಟಿದ್ದುನ್ನು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ. ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ …
Read More »ಸೊಂಕಿತರ ಸುರಕ್ಷತೆ ಮತ್ತು ಆರೈಕೆಗಾಗಿ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣವನ್ನು ಇದಕ್ಕಾಗಿ ವ್ಯಯಿಸುತ್ತಿದ್ದಾರೆ
ಘಟಪ್ರಭಾ : ಕೊರೋನಾ ರೋಗಿಗಳ ಆರೈಕೆಗಾಗಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಘಟಕಗಳನ್ನು ಪ್ರಾರಂಭಿಸಿದ್ದಾರೆಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು. ಇತ್ತೀಚೆಗೆ ಇಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೋನಾ ಸೊಂಕಿತರಿಗಾಗಿ ಆರಂಭಿಸಲಾದ ಕೇಂದ್ರಿಕೃತ ಆಮ್ಲಜನಕ ಘಟಕದ ಆರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೊಂಕಿತರ ಸುರಕ್ಷತೆ ಮತ್ತು ಆರೈಕೆಗಾಗಿ ಬಾಲಚಂದ್ರ …
Read More »
IN MUDALGI Latest Kannada News