ಪೇರಲ ಬೆಳೆಯಲ್ಲಿ ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ಆನ್ ಲೈನ್ ತರಬೇತಿ ಮೂಡಲಗಿ: ಪೇರಲ ಬೆಳೆಯಲ್ಲಿ ಅಧಿಕ ಸಾಂದ್ರ ಬೇಸಾಯ ಪದ್ದತಿಯಡಿ ಸಾಲಿನಿಂದ ಸಾಲಿಗೆ ಹತ್ತು ಅಡಿ ಮತ್ತು ಗಿಡದಿಂದ ಗಿಡಕ್ಕೆ ಆರು ಅಡಿ ಅಂತರದಲ್ಲಿ, ಆರುನೂರಾ ಅರವತ್ತು ಗಿಡಗಳನ್ನು ನಾಟಿ ಮಾಡಬಹುದಾಗಿದ್ದು, ಮೊದಲನೇ ವರ್ಷದಲ್ಲಿ ಎರಡರಿಂದ ಮೂರು ಟನ್ ಇಳುವರಿ ಪಡೆಯಬಹುದೆಂದು ಹಣ್ಣು ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನೀಲ ಈ.ಸಬರದ ಹೇಳಿದರು. ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ …
Read More »Monthly Archives: ಅಕ್ಟೋಬರ್ 2020
ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವದು ಬೆಳಗಾವಿ ಜಿಲ್ಲೆ -ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ
ಮೂಡಲಗಿ : “ರಾಜ್ಯದಲ್ಲಿಯೇ ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ದೇಶ ಸೇವೆಗೆ ತಮ್ಮ ಕರುಳ ಕುಡಿಗಳನ್ನು ಧೈರ್ಯದಿಂದ ಕಳುಹಿಸುವ ಗಟ್ಟಿ ಗುಂಡಿಗೆಯ ತಾಯಿಂದಿರು ಇಲ್ಲಿದ್ದಾರೆ. ಇಂತಹ ವೀರ ನಾಡಿನಲ್ಲಿ ಹುಟ್ಟಿ ೨೦/0೯/೨೦೦೩ ರಲ್ಲಿ ಭಾರತೀಯ ಸೇನೆಗೆ ಸೇರಿ ಸುಮಾರು ೧೭ ವರ್ಷಗಳ ಕಾಲ ೪ನೇ ಮದ್ರಾಸ್ ರೆಜಿಮೆಂಟ್ ಬಟಾಲಿಯನ್ ನಲ್ಲಿ ಎಲ್.ಎನ್.ಕೆ ಹುದ್ದೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವವರು ಮೂಡಲಗಿಯ …
Read More »ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತ-ರೋಗ/ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳಿಂದ ಸಲಹೆಗಳು.
ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತ-ರೋಗ/ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳಿಂದ ಸಲಹೆಗಳು. ಮೂಡಲಗಿ: ಜಿಲ್ಲೆಯಲ್ಲಿ ಸೆಪ್ಟೆಂಬರ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು ಇದರಿಂದ ಕಬ್ಬು, ಗೋವಿನ ಜೋಳ,ಹತ್ತಿ, ಮತ್ತು ತರಕಾರಿಗಳ ಇಳುವರಿ ಕುಂಠಿತ ವಾಗುವ ಸಂಭವವಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ.ನದಾಫ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಗುರುವಾರದಂದು ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಜೋತೆ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಅವರು ತೇವಾಂಶದಿಂದ ಬೆಳೆ ಕುಂಠಿತಗೊಳ್ಳುತ್ತಿರುವುದರಿಂದ ರೈತರು …
Read More »ರೈತರಿಗೆ ತ್ವರಿತಗತಿಯಲ್ಲಿ ಬಿಲ್ ಸಂದಾಯ-ಶಾಸಕ ಬಾಲಚಂದ್ರ ಜಾರಕಿಹೊಳಿ, ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಸಿದ್ದಲಿಂಗ ಮಹಾಸ್ವಾಮಿಗಳು
ರೈತರಿಗೆ ತ್ವರಿತಗತಿಯಲ್ಲಿ ಬಿಲ್ ಸಂದಾಯ-ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಸಿದ್ದಲಿಂಗ ಮಹಾಸ್ವಾಮಿಗಳು ಗೋಕಾಕ: ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಸಹಕಾರದಿಂದ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಅಶೋಕ್ ಪಾಟೀಲ ಹೇಳಿದರು. ಶುಕ್ರವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸನ್ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮು …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿ ಗಾಂಧಿಜೀ, ಶಾಸ್ತ್ರಿಜೀ ಜಯಂತಿ ಆಚರಣೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯಾಲಯದಲ್ಲಿ ಗಾಂಧಿಜೀ, ಶಾಸ್ತ್ರಿಜೀ ಜಯಂತಿ ಆಚರಣೆ ಗೋಕಾಕ: ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಬಿಜೆಪಿ ಅರಭಾಂವಿ ಮಂಡಲದಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಮತ್ತು ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿಯನ್ನು ಶುಕ್ರವಾರದಂದು ಆಚರಿಸಲಾಯಿತು. ಅರಭಾಂವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಗಾಂಧಿಜೀ ಅವರು ಸ್ವತಂತ್ರ ಸಂಗ್ರಾಮದಲ್ಲಿ ಅವಿರತವಾಗಿ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಗಾಂಧಿಜೀ ಅವರ …
Read More »ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಮೂಡಲಗಿ: ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ ಬಹದ್ದೂರ ಶಾಸ್ತ್ರಿಜೀ ಅವರ ಜನ್ಮ ದಿನಾಚರಣೆಯನ್ನು ಶುಕ್ರವಾರ ಅ-02 ರಂದು ಕಲ್ಲೋಳಿ ಪಟ್ಟಣದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪ್ರಮುಖ ಬಸವರಾಜ ಕಡಾಡಿ ಮಾತನಾಡಿ ಭಾರತದ ಭಾಗ್ಯವಿಧಾತ ಮತ್ತು ರಾಷ್ಟ್ರಪೀತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಹಾತ್ಮ ಗಾಂಧಿಜೀ ಅವರು ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ದೃಷ್ಠಿಯಲ್ಲಿ ಒಬ್ಬ ಅಸಾಮಾನ್ಯ ಮಹಾಪುರಷರೆನಿಸಿಕೊಂಡಿದ್ದಾರೆ. ಶಾಸ್ತ್ರಿಜೀ ಅವರು …
Read More »‘ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾದಿಂದ ಕಂಡಿತ ಜಯ’ – ಸಂಗಪ್ಪ ಸೂರಣ್ಣವರ
ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ’ ದ 14ನೇ ದಿನದ ಕಾರ್ಯಕ್ರಮದಲ್ಲಿ ಸಂಗಪ್ಪ ಸೂರಣ್ಣವರ ಮಾತನಾಡಿದರು ಅಧಿಕ ಮಾಸದ 14ದಿನದ ಆಧ್ಯಾತ್ಮಿಕ ಪ್ರವಚನ ‘ಆತ್ಮವಿಶ್ವಾಸ, ಧೈರ್ಯವಿದ್ದರೆ ಕೊರೊನಾದಿಂದ ಕಂಡಿತ ಜಯ’ ಮೂಡಲಗಿ: ‘ಕೆಮ್ಮು, ನೆಗಡಿ ಜೊತೆಗೆ ಒಂದಿಷ್ಟು ಜ್ವರ ಬಂದಿದ್ದರಿಂದ ಕೂಡಲೇ ವೈದ್ಯಕೀಯ ಚಿಕಿತ್ಸೆ ಮಾಡಿಕೊಂಡಿದ್ದರಿಂದ ಕೊರೊನಾ ಸೋಂಕಿನ ತೀವ್ರತೆ ಮತ್ತು ಅಪಯಾದಿಂದ ತಪ್ಪಿಸಿಕೊಂಡಿರುವೆನು’ ಎಂದು ಕೊರೊನಾ ಸೋಂಕಿನಿಂದ …
Read More »ಅರಭಾಂವಿ ವಿಧಾನ ಸಭಾ ಕ್ಷೇತ್ರದ ಅರಭಾಂವಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ ಫೈರ್ ಬ್ರಾಂಡ್ ಎಂದೇ ಪ್ರಸಿದ್ದಿಯಾಗಿರುವ ಗುರುನಾಥ ಗಂಗನ್ನವರ
ಮೂಡಲಗಿ: ಅರಭಾಂವಿ ವಿಧಾನ ಸಭಾ ಕ್ಷೇತ್ರದ ಅರಭಾಂವಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ ಗುಜನಟ್ಟಿ ಗ್ರಾಮದ ಕಾಂಗ್ರೇಸ್ ಫೈರ್ ಬ್ರಾಂಡ್ ಎಂದೇ ಪ್ರಸಿದ್ದಿಯಾಗಿರುವ ಸಂಘಟನಾ ಚತುರ ಗುರುನಾಥ ಗಂಗನ್ನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಅರಭಾಂವಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಗುರುರಾಜ ಪೂಜೇರಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಾರ್ಮಿಕ ಮುಖಂಡ ಲಕ್ಕಣ್ಣ ಸವಸುದ್ದಿ ಮಾತನಾಡಿ, ಗುರುನಾಥ ಗಂಗನ್ನವರ ಅವರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾಗಿ ಪ್ರಮಾಣಿಕವಾಗಿ …
Read More »ಭೂ ಸುಧಾರಣೆ ತಿದ್ದುಪಡೆ ಕಾನೂನು ಮತ್ತು ಎಪಿಎಂಸಿ ತಿದ್ದುಪಡೆ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನ ಮಾಡಿವೆ
ಮೂಡಲಗಿ: ಕೇಂದ್ರ ಸರಕಾರದ ಕೃಷಿ ಮಸೂದೆಗಳು ರಾಜ್ಯ ಸರಕಾರದ ಭೂ ಸುಧಾರಣೆ ತಿದ್ದುಪಡೆ ಕಾನೂನು ಮತ್ತು ಎಪಿಎಂಸಿ ತಿದ್ದುಪಡೆ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನ ಮಾಡಿವೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ಹೇಳಿದರು. ಗುರುವಾರ ಅ 1 ರಂದು ಬೆಂಗಳೂರಿನಲ್ಲಿ ರಾಜ್ಯ ಸರಕಾರದ ಕೃಷಿ ಸಚಿವರಾದ ಬಿ ಸಿ …
Read More »ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಅಕಾಲಿಕ ನಿಧನರಾದ ಪ್ರಕಾಶ ಬಾಗೇವಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಶ್ರದ್ಧಾಂಜಲಿ
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಅಕಾಲಿಕ ನಿಧನರಾದ ಪ್ರಕಾಶ ಬಾಗೇವಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಶ್ರದ್ಧಾಂಜಲಿ ‘ಶಿಸ್ತು, ಕಾಯಕಶ್ರದ್ಧೆಗೆ ಮಾದರಿ ಪ್ರಕಾಶ ಬಾಗೇವಾಡಿ’ ಮೂಡಲಗಿ: ‘ಪ್ರಕಾಶ ಬಾಗೇವಾಡಿ ಅವರಲ್ಲಿದ್ದ ಶಿಸ್ತು, ಒಳ್ಳೆಯ ಸಂಘಟನೆಯ ಚಾತುರ್ಯತೆ ಹಾಗೂ ಕಾಯಕ ಶ್ರದ್ಧೆಯ ವ್ಯಕ್ತಿತ್ವವು ಎಲ್ಲರಿಗೂ ಮಾದರಿಯಾಗಿತ್ತು’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು. ಅಕಾಲಿಕ ನಿಧನರಾದ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾಗಿದ್ದ …
Read More »