ಮೂಡಲಗಿ: ಯುಗಾವತಾರಿ ಭಗವಾನ ಶ್ರೀ ಸತ್ಯಸಾಯಿಬಾಬಾರವರ ಪರಮಪಾವನ ಸಾನಿಧ್ಯದಲ್ಲಿ 14 ನೇ ವಾರ್ಷಿಕೋತ್ಸವ ಸಮಾರಂಭವು ಮಾ. 14 ರವಿವಾರದಂದು ಆರ್.ಡಿ.ಎಸ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಜರುಗಲಿದೆ ಎಂದು ಸಾಯಿ ಸೇವಾ ಸಮಿತಿಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಮಹಾಸ್ವಾಮಿಗಳಾದ ಶ್ರೀ ಶ್ರೀ ದತ್ತಾತ್ರಯ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಮ.ನಿ.ಪ್ರ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಬೆಳಗಾವಿ …
Read More »Monthly Archives: ಮಾರ್ಚ್ 2021
ಮಾ. 14ರಂದು ಲಯನ್ಸ್ ಕ್ಲಬ್ ರೀಜನ್ ಮೀಟ್
ಮಾ. 14ರಂದು ಲಯನ್ಸ್ ಕ್ಲಬ್ ರೀಜನ್ ಮೀಟ್ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆತಿಥ್ಯದಲ್ಲಿ ಲಯನ್ಸ್ ಕ್ಲಬ್‍ನ ಜಿಲ್ಲಾ 317-ಬಿ ಅಡಿಯ, ರೀಜನ್ 5ರ ವ್ಯಾಪ್ತಿಯಲ್ಲಿ ಬರುವ ಲಯನ್ಸ್ ಕ್ಲಬ್‍ಗಳ ‘ರೀಜನ್ ಮೀಟ್ 2020-21’ ಕಾರ್ಯಕ್ರಮವನ್ನು ಮಾ. 14ರಂದು ಸಂಜೆ 4ಕ್ಕೆ ಸ್ಥಳೀಯ ಸಾಯಿ ಹಾಸ್ಟೇಲ್ ಆವರಣದಲ್ಲಿ ಆಯೋಜಿಸಿರುವರು. ಸಮಾವೇಶದ ನೇತೃತ್ವವನ್ನು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ವಹಿಸಿದ್ದು, ಉದ್ಘಾಟನೆಯನ್ನು ಜಿಲ್ಲಾ ಎರಡನೇ ವೈಸ್ ಗವರ್ನರ್ …
Read More »ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ
ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ ಅಭಿಯಾನಕ್ಕೆ ಚಾಲನೆ ‘ಅಂಚೆ ಇಲಾಖೆಯಲ್ಲಿ ಮಾಡುವ ಉಳಿತಾಯ ಹೆಚ್ಚು ಭದ್ರತೆ’ ಮೂಡಲಗಿ: ಭಾರತೀಯ ಅಂಚೆ ಇಲಾಖೆಯಲ್ಲಿ ಹಣ ಉಳಿತಾಯದ ಹಲವಾರು ಉಪಯುಕ್ತ ಯೋಜನೆಗಳು ಇದ್ದು ಜನರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಗೋಕಾಕ ಅಂಚೆ ವಿಭಾಗ ಅಧೀಕ್ಷಕ ಸಿ.ಜಿ. ಕಾಂಬಳೆ ಅವರು ಹೇಳಿದರು. ಭಾರತೀಯ ಅಂಚೆ ಇಲಾಖೆಯ ಗೋಕಾಕ ವಿಭಾಗದಿಂದ ಮೂಡಲಗಿಯ ಅಂಚೆ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಚೆ ಇಲಾಖೆಯ ‘ಆಪ್ ಕೆ ಸಾಥ್’ …
Read More »ಕುಲಗೋಡ 54 ಗುಂಪು ಶೌಚಾಲಯ ನಿರ್ಮಾಣ, ಬಯಲು ಶೌಚ್ಚಕ್ಕೆ ಮುಕ್ತಿ.
ಕುಲಗೋಡ 54 ಗುಂಪು ಶೌಚಾಲಯ ನಿರ್ಮಾಣ, ಬಯಲು ಶೌಚ್ಚಕ್ಕೆ ಮುಕ್ತಿ. ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಹಾಗೂ ಆರ್.ಎಮ್ ಯಡಹಳ್ಳಿ ಫೌಂಡೇಶನ್ ಇವರ ಅಶ್ರಯದಲ್ಲಿ ಗ್ರಾಮದ ವ್ಯಾಪ್ತಿಯ ಅಂಗಡಿ ಕಟ್ಟಿ ಓಣಿಯ ಜನರಿಗಾಗಿ ಗುಂಪು ಒಡೆತನದ ವಯಕ್ತಿಕ 54 ಹೈಟೇಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕುಲಗೋಡ ಗ್ರಾಮದ ಅಂಗಡಿಕಟ್ಟಿ ಓಣಿಯ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಳ್ಳಲು ಅಸಮರ್ಥರಾಗಿರುದ್ದರು. ಗ್ರಾಮದಲ್ಲಿ ಇಕ್ಕÀಟ್ಟಾದ ಓಣಿ ಇದಾಗಿದ್ದು ಮತ್ತು ಚಿಕ್ಕ ಪುಟ್ಟ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗದೆ …
Read More »ಮಹಾ ಶಿವರಾತ್ರಿಯಂದು ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಚಿತ್ರ
ಮೂಡಲಗಿ: ಇಲ್ಲಿನ ಶ್ರೀ ವೆಂಕಟೇಶ್ ಚಿತ್ರ ಮಂದಿರದಲ್ಲಿ ಮಹಾ ಶಿವರಾತ್ರಿಯಂದು ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಚಿತ್ರವನ್ನು ವೀಕ್ಷಿಸಲು ದರ್ಶನ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಜಮಾಯಿಸಿ ದರ್ಶನ ಕಟೌಟ್ಗೆ ಹೂ ಮಾಲೆ ಹಾಕಿ ಸೃಂಗರಿಸಿ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿತ್ರ ಮಂದಿರ ಪೂರ್ತಿ ಭರ್ತಿಯಾಗಿತ್ತು. ಪ್ರೇಕ್ಷಕ ಅಭಿಮಾನಿಗಳು ದರ್ಶನ ಫೈಟ್ ಹಾಗೂ ಗೀತೆಗಳ ಸನ್ನಿವೇಶಗಳಲ್ಲಿ ಶಿಳ್ಳೆ ,ಸ್ಟೆಪ್ ಹಾಕಿ …
Read More »ಶಿವರಾತ್ರಿ ಪ್ರಯುತ್ತ ಶಿವಲಿಂಗಕ್ಕೆ ವಿಶೇಷ ಗುತ್ತಿ ಪೂಜಾ ಅಂಲಕಾರ
ಶಿವರಾತ್ರಿ ಪ್ರಯುತ್ತ ಶಿವಲಿಂಗಕ್ಕೆ ವಿಶೇಷ ಗುತ್ತಿ ಪೂಜಾ ಅಂಲಕಾರ ಮೂಡಲಗಿ : ನಾಡಿನಾದ್ಯಂತ ಆಚರಿಸಲ್ಪಡುವ ಮಹಾ ಶಿವರಾತ್ರಿಯ ಪ್ರಯುಕ್ತ ಸಮೀಪದ ಹಳ್ಳೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷವಾಗಿ ಶಿವಲಿಂಗಕ್ಕೆ ಗುತ್ತಿ ಪೂಜೆಯೊಂದಿಗೆ ವಿವಿಧ ಬಣ್ಣಗಳಲ್ಲಿ ಭಕ್ತಾಧಿಗಳಿಗೆ ಶಿವನ ಸ್ಮರಣೆ ಮಾಡುವಂತೆ ಆಕರ್ಷವಾಗಿ ಶಿವಲಿಂಗ ಕಂಡು ಬಂದಿತು. ಗ್ರಾಮದ ಜನ ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ಇಷ್ಠಾರ್ಥ ಸಿದ್ಧಿಗಾಗಿ ಉಪವಾಸ ಹಾಗೂ ಸಂಕಲ್ಪ ಕಾರ್ಯಗಳನ್ನು ಮಾಡುವ ಮೂಲಕ ಶಿವನ ಕೃಪೆಗೆ …
Read More »ಜಾರಕಿಹೊಳಿ ಅವರ ವಿರುದ್ದ ಷಡ್ಯಂತ್ರ ಖಂಡಿಸಿ ಖಾನಟ್ಟಿಯಲ್ಲಿ ಪ್ರತಿಭಟನೆ
ಜಾರಕಿಹೊಳಿ ಅವರ ವಿರುದ್ದ ಷಡ್ಯಂತ್ರ ಖಂಡಿಸಿ ಖಾನಟ್ಟಿಯಲ್ಲಿ ಪ್ರತಿಭಟನೆ ಮೂಡಲಗಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಷಡ್ಯಂತ್ರ ಖಂಡಿಸಿ ತಾಲೂಕಿನ ಖಾನಟ್ಟಿ ಗ್ರಾಮದಲ್ಲಿ ಗುರುವಾರದಂದು ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ರಮೇಶ ಜಾರಕಿಹೊಳಿ ಅವರನ್ನು ಕೂಡಲೇ ಸಚಿವರನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗ್ರಾ.ಪಂ ಪಿಡಿಒ ಹಣಮಂತ ಬಸಗುಂದಿ ಅವರ ಮೂಲಕ ಸರಕಾರಕ್ಕೆ ಮನವಿಸಲ್ಲಿಸಿದರು. ಈ ಸಂಧರ್ಭದಲ್ಲಿ ಶಿವನಪ್ಪ ಗುದಗನ್ನವರ, ವೆಂಕನಗೌಡ ಪಾಟೀಲ, ಬಸಲಿಂಗ ನಿಂಗನ್ನೂರ, ಚೇತನ ರಡ್ಡೇರಹಟ್ಟಿ, ಸುಭಾಸ …
Read More »ಕಲ್ಲೋಳಿ ವೀರಭದ್ರೇಶ್ವರ ಮಹಾರಥೋತ್ಸವ ಜರುಗಿತು
ಕಲ್ಲೋಳಿ : ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರ ಆರಾಧ್ಯ ದೈವ ಹಾಗೂ ಜಾಗೃತ ಕ್ಷೇತ್ರವೆಂದು ಪ್ರಸಿದ್ಧಿ ಪಡೆದ ತಾಲೂಕಿನ ಸುಕ್ಷೇತ್ರ ಕಲ್ಲೋಳಿ ವೀರಭದ್ರೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ನೂರಾರು ಭಕ್ತರ ಹರ್ಷೋದ್ಗಾರದ ಮಧ್ಯ ಅತ್ಯಂತ ವೈಭವದಿಂದ ಜರುಗಿತು. ಸಂಜೆ 5 ಗಂಟೆಗೆ ಜರುಗಿದ ರಥೋತ್ಸವದಲ್ಲಿ ಪಾದಯಾತ್ರೆಯ ಮೂಲಕ ಅಪಾರ ಜನಸ್ತೋಮ ಸೇರಿ ಜಾತ್ರಾ ಉತ್ಸವಕ್ಕೆ ಮೆರುಗು ನೀಡಿದರು. ನಂದಿಕೋಲು, ವೀರಗಾಸೆ, ಸಂಬಾಳ, ವೀರ ಪುರವಂತರು, ಸಕಲ ಮಂಗಲ ವಾದ್ಯಮೇಳಗಳೊಂದಿಗೆ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ …
Read More »ಸೈನಿಕರು ಹಾಗೂ ಪತ್ರಿಕಾರಂಗದವರು ಪ್ರತಿ ಕ್ಷಣವು ದೈನಂದಿನ ಬದುಕಿನಲ್ಲಿ ನಿರಂತರವಾಗಿ ಸೇವೆಯಲ್ಲಿ ನಿರತರಾಗಿರುತ್ತಾರೆ
ಮೂಡಲಗಿ: ದೇಶ ಸೇವೆಯಲ್ಲಿ ಸೈನಿಕರು ಹಾಗೂ ಪತ್ರಿಕಾರಂಗದವರು ಪ್ರತಿ ಕ್ಷಣವು ದೈನಂದಿನ ಬದುಕಿನಲ್ಲಿ ನಿರಂತರವಾಗಿ ಸೇವೆಯಲ್ಲಿ ನಿರತರಾಗಿರುತ್ತಾರೆ. ದೇಶದ ಭದ್ರ ಬುನಾಧಿಯಾಗಿ ಕಾರ್ಯ ನಿರ್ವಹಿಸಿ ದೇಶದ ಜನತೆಯ ಹಾಗೂ ಅತಿವೃಷ್ಠಿ ಅನಾವೃಷ್ಠಿಗಳು ಸಂಭವಿಸಿದಾಗ ಪ್ರಾಣದ ಹಂಗನ್ನು ತೊರೆದು ಹೋರಾಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರದಲ್ಲಿ ಜರುಗಿದ ನಿವೃತ್ತ ಯೋಧರಿಗೆ ಸತ್ಕಾರ ಹಾಗೂ ನೂತನ ಬಸವ ಕ್ರಾಂತಿ ದಿನಪತ್ರಿಕೆ …
Read More »ಸ್ತ್ರೀ ಶಕ್ತಿ, ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ
ಬೆಟಗೇರಿ: ಸಹನಶೀಲತೆಗೆ ಮತ್ತೊಂದು ಹೆಸರು ಮಹಿಳೆಯಾಗಿದ್ದು, ಎಲ್ಲಾ ರಂಗದಲ್ಲಿ ಪುರುಷ ಪ್ರಧಾನಕ್ಕೆ ಸ್ತ್ರೀ ಸಮಾನಳಾಗಿದ್ದಾಳೆ ಎಂದು ಮಸಗುಪ್ಪಿ ವಲಯದ ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಗುಡದರಿ ಹೇಳಿದರು. ಸಮೀಪದ ಮಸಗುಪ್ಪಿ ಗ್ರಾಮದ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿ, ಮಹಿಳೆ ಯಾವಾಗಲೂ ಅಬಲೆ ಅಲ್ಲಾ, ಸಬಲೆಯಾಗಿದ್ದಾಳೆ ಎಂದರು. ಮಸಗುಪ್ಪಿ ಗ್ರಾಪಂ ಅಧ್ಯಕ್ಷೆ ಶಾಂತಾ ತಿಗಡಿ ಜ್ಯೋತಿ ಪ್ರಜ್ವಲಿಸಿದರು. ಸೈರಾಭಾನು …
Read More »