ಮೂಡಲಗಿ: ಒಂದನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯ ಪ್ರಯುಕ್ತ ಮೂಡಲಗಿ, ಗುರ್ಲಾಪೂರ ಹಾಗೂ ವಿವಿಧ ಪ್ರದೇಶಗಳಲ್ಲಿ ಗುರುವಾರ ಜೂ23 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಮ್. ಎಸ್. ನಾಗನ್ನವರ ಹಾಗೂ ಶಾಖಾಧಿಕಾರಿ ಪಿ. ಆರ್. ಯಡಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »Daily Archives: ಜೂನ್ 22, 2022
ಬೆಟಗೇರಿ ಗ್ರಾಮದ ವಿದ್ಯಾರ್ಥಿ ಶಾಹೀದ ಮಿರ್ಜಾನಾಯ್ಕಗೆ ಶೇ.90ಅಂಕ
ಬೆಟಗೇರಿ:ಧಾರವಾಡ ಪೂರ್ಣಾ ಪಿಯು ಕಾಲೇಜಿನ ವಿದ್ಯಾರ್ಥಿ, ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಾಹೀದ ರಫೀಕ್ ಮಿರ್ಜಾನಾಯ್ಕ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ.90.16 ರಷ್ಟು (541) ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಶಾಹೀದ ಮಿರ್ಜಾನಾಯ್ಕ ಸಾಧನೆಗೆ ಸ್ಥಳೀಯ ಶಿಕ್ಷಣಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Read More »ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಯೋಗ ದಿನಾಚರಣೆ
ಮೂಡಲಗಿ: ಇಂದಿನ ಅವಸರದ ಜೀವನದಲ್ಲಿ ಕೆಲಸದ ಜೊತೆಗೆ ನಮ್ಮ ಆರೋಗ್ಯವನ್ನು ಯೋಗ ಮತ್ತು ದ್ಯಾನದಿಂದ ಕಾಪಾಡಿಕೊಳ್ಳಲು ಸಾಧ್ಯ ಎಂದು ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ಮುಖ್ಯಸ್ಥ ಪ್ರಭಾತ್‍ಕುಮಾರ್ ಸಿಂಗ್ ಹೇಳಿದರು. ಅವರು ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಅರಳಿಕಟ್ಟಿ ಫೌಂಡೇಶನ್ ಆವರಣದಲ್ಲಿ ಆಯೋಜಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಅರಳಿಕಟ್ಟಿ ಫೌಂಡೇಶನ್ ಚೇರ್ಮನ್ ಡಾ. ಟಿ.ವ್ಹಿ.ಅರಳಿಕಟ್ಟಿ ಅವರು ಯೋಗ ದಿನಾಚರಣೆ ಆಚರಣೆ ಆಗಿರದೆ ವರ್ಷದ 365 ದಿನವೂ …
Read More »*ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಇಡೀ ಕ್ಷೇತ್ರ ಅಭಿವೃದ್ಧಿ ಪಥದತ್ತ* *ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ ಕಾಮಗಾರಿಗೆ 4 ಕೋಟಿ ರೂ. ಅನುದಾನ : ಬಾಳಪ್ಪ ಗೌಡರ*
ಗೋಕಾಕ- ಕಳ್ಳಿಗುದ್ದಿ, ರಡ್ಡೇರಹಟ್ಟಿ ಮತ್ತು ಮನ್ನಿಕೇರಿ ಗ್ರಾಮಗಳ ಅಭಿವೃದ್ಧಿಗಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರದ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಸಾಕಾರಗೊಳಿಸಿದ್ದು, ಕಳ್ಳಿಗುದ್ದಿಯಿಂದ ಕೌಜಲಗಿವರೆಗಿನ ರಸ್ತೆ ಕಾಮಗಾರಿಗೆ 4 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದಾರೆಂದು ಕಳ್ಳಿಗುದ್ದಿ ಗ್ರಾಪಂ ಅಧ್ಯಕ್ಷ ಬಾಳಪ್ಪ ಗೌಡರ ತಿಳಿಸಿದರು. ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯ ಎಸ್‍ಎಚ್‍ಡಿಪಿ ಯೋಜನೆಯಡಿ ಮಂಜೂರಾದ 4 ಕೋಟಿ ರೂ. ವೆಚ್ಚದ ಕಳ್ಳಿಗುದ್ದಿ-ಕೌಜಲಗಿ ರಸ್ತೆ ಸುಧಾರಣಾ …
Read More »ವಿಶ್ವಕ್ಕೆ ಯೋಗದ ಅನ್ಯನ್ಯ ಕೊಡುಗೆಯನ್ನು ಭಾರತ ದೇಶ ನೀಡಿದೆ: ಕಮಲಾಕ್ಷಿ ನಾಯ್ಕ
ಬೆಟಗೇರಿ:ಮನುಷ್ಯ ಪ್ರತಿದಿನ ಯೋಗ ಮಾಡುವುದರಿಂದ ರೋಗ ಬರುವುದಿಲ್ಲಾ. ಯೋಗ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ವರದಾನವಾಗಿದೆ ಎಂದು ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಕ್ಷಿ ನಾಯ್ಕ ಹೇಳಿದರು. ಬೆಟಗೇರಿ ಗ್ರಾಮದ ಚೈತನ್ಯ ಗ್ರಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜೂ.21ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕ್ಕೆ ಯೋಗದ …
Read More »ಪ್ರಾಥಮಿಕ ಆರೋಗ್ಯ ಕೇಂದ್ರದ ಕೌಂಪೌಂಡ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ-ಸಂಸದ ಈರಣ್ಣ ಕಡಾಡಿ
ಮೂಡಲಗಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಅಗತ್ಯ ಆರೋಗ್ಯ ಸೇವೆಗಳು ದೊರೆಯುವಂತಾಗಲು ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿರಬೇಕಾದ ಅಗತ್ಯವಿದೆ. ಆ ಮೂಲಕ ಬಡಜನತೆ ಒಳ್ಳೆಯ ಸೇವೆ ನೀಡಲು ಸಾಧ್ಯವಾಗುವುದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಬುಧವಾರ ಜೂ-22 ರಂದು 2022-23ನೇ ಸಾಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಕಲ್ಲೋಳಿ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಕೌಂಪೌಂಡ ವಾಲ್ ನಿರ್ಮಾಣ …
Read More »