ಮೂಡಲಗಿ : ಜಿಲ್ಲೆಯಲ್ಲಿ ಮತ್ತೇ ಕೊರೋನಾ ರುದ್ರ ನರ್ತನವನ್ನು ನಡೆಸಿದ್ದು, ತಾಲ್ಲೂಕಿನಿಂದ ತಾಲ್ಲೂಕಿಗೆ ತನ್ನ ಪಸರಿಸುವಿಕೆಯನ್ನು ಶುರು ಮಾಡಿಕೊಡಿದೆ.
ಇಂದು ಗೋಕಾಕ ತಾಲೂಕಿನ ಎಂಟು ವರ್ಷದ ಓರ್ವ ಬಾಲಕಿಗೆ ಕೊರೋನಾ ತಗುಲಿದ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಗೋಕಾಕ ನಗರದ ಕೊಳಚೆ ಪ್ರದೇಶದ ಸುಮಾರು ಐವತ್ತಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಿದಾಗ ಈ ಓರ್ವ ಬಾಲಕಿಗೆ ಕೋರೊನಾ ದೃಢವಾಗಿದೆ.ಯಾವುದೇ ಟ್ರಾವೆಲ್ಲಿಂಗ್ ಹಿಸ್ಟರಿ ಇಲ್ಲ .
ಆ ಬಾಲಕಿ ಕೆಳದ ಎರಡು ದಿನಗಳ ಹಿಂದೆ ತನ್ನ ತಾಯಿಯ ತವರು ಮನೆಗೆ ಕೌಜಲಗಿ ಗ್ರಾಮಕ್ಕೆ ಬಂದಿದ್ದಳು ಆದರೆ ಇಂದು ಪಾಸಿಟಿವ್ ಬಂದ ಕಾರಣ ಆ ಬಾಲಕಿಯನ್ನು ಬೆಳಗಾವಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.