Breaking News
Home / 2022 / ಜುಲೈ (page 3)

Monthly Archives: ಜುಲೈ 2022

ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು – ಚಿದಾನಂದ ಹೂಗಾರ

  ಮೂಡಲಗಿ : ಮಕ್ಕಳು ಸಂಸ್ಕಾರ ರೂಪಿಸುವ ಶಿಕ್ಷಣದ ತತ್ವಗಳನ್ನು ಬೆಳಸಿಕೊಳ್ಳಬೇಕು ಕೇವಲ ಪಠ್ಯವಿಷಯಗಳನ್ನು ಮಾತ್ರ ಕಲಿಯದೇ ಪಠ್ಯೇತರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳಸುವ ಜ್ಞಾನವನ್ನು ನಿರಂತರವಾಗಿ ಸಂಪಾಧಿಸಿ ಸರಳ ಸಜ್ಜನಿಕೆಯ ವಕ್ತಿತ್ವ ರೂಪಿಸಿಕೊಳ್ಳಬೇಕು. ಸಂಸ್ಕಾರಯುತವಾದ ಶಿಕ್ಷಣ ಆದರ್ಶ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತದೆ ಅಂತಹ ಶಿಕ್ಷಣ ಪಡೆದುಕೊಂಡು ತಂದೆ ತಾಯಿ ಮತ್ತು ಗುರುಗಳ ಹೆಸರನ್ನು ತರುವಂತಹ ಸಾಧನೆ ಮಾಡಿದಾಗ ಮನುಷ್ಯನ ಜೀವನ ಸ್ವಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಶಿವಾಪೂರ (ಹ) ಅಡವಿಸಿದ್ದೇಶ್ವರ …

Read More »

ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ 2021-22ನೇ ಸಾಲಿನಲ್ಲಿ 7,17,020 ಫಲಾನುಭವಿಗಳಿಗೆ 56,176 ಕೋಟಿ ರೂ ಬಿಡುಗಡೆಗೆ ಅನುಮೋದನೆ

ಮೂಡಲಗಿ: ಸಾಂಪ್ರದಾಯಿಕ ಕೈಗಾರಿಕೆಗಳ ಉನ್ನತೀಕರಣ ಮತ್ತು ಪುನಶ್ಚೇತನ ನಿಧಿ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 365 ಕ್ಲಸ್ಟರ್‍ಗಳನ್ನು ಅನುಮೋದಿಸಲಾಗಿದೆ ಮತ್ತು ಸುಮಾರು ರೂ.2,09,741 ಕುಶಲಕರ್ಮಿ ಫಲಾನುಭವಿಗಳಿಗೆ 1,025 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಸೋಮವಾರ ಜು-18 …

Read More »

ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಅನ್ನದಾಸೋಹ

‘ಅನ್ನಸಾಸೋಹವು ಪುಣ್ಯ ಕಾರ್ಯವಾಗಿದೆ’ ಮೂಡಲಗಿ: ಇಲ್ಲಿಯ ಶ್ರೀ ಸತ್ಯ ಸಾಯಿ ಸೇವಾ ಸಮಿತಿಯಿಂದ ಪುರಸಭೆಯ ಆವರಣದಲ್ಲಿ ಅನ್ನದಾಸೋಹ ಮಾಡುವ ಮೂಲಕ ಮಾಸಿಕ ನಾರಾಯಣ ಸೇವಾ ಕಾರ್ಯಕ್ರಮವನ್ನು ಮಾಡಿದರು. ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಅನ್ನದಾಸೋಹವು ಪವಿತ್ರವಾದ ಕಾರ್ಯವಾಗಿದೆ. ದಾಸೋಹ ಸೇವೆ ಮತ್ತು ದಾಸೋಹದಲ್ಲಿ ಭಾಗವಹಿಸುವುದು ಎರಡೂ ಪುಣ್ಯದ ಕಾರ್ಯವಾಗಿದೆ’ ಎಂದರು. ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಚಂದ್ರು ಪಾಟೀಲ, ಹಿರಿಯ ಆರೋಗ್ಯ …

Read More »

ಪರಿಸರವನ್ನು ಕಾಳಜಿಯಿಂದ ನೋಡಬೇಕು ಅಂದಾಗ ಮಾತ್ರ ಸಕಲ ಜೀವ ರಾಶಿಗಳು ಬಾಳಿ ಬದುಕಲು ಸಾಧ್ಯ – ಜ್ಯೋತಿ ಪಾಟೀಲ

ಮೂಡಲಗಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರವನ್ನು ಕಾಳಜಿಯಿಂದ ನೋಡಬೇಕು ಅಂದಾಗ ಮಾತ್ರ ಸಕಲ ಜೀವ ರಾಶಿಗಳು ಬಾಳಿ ಬದುಕಲು ಸಾಧ್ಯ ಎಂದು ಮೂಡಲಗಿ ಜೆ.ಎನ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಸರಕಾರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಹಾಗೂ ಮೌಲಾನಾ ಅಬ್ದುಲ ಕಲಾಂ ಶಾಲಾವರಣದಲ್ಲಿ ಗೋಕಾಕನ ಸ್ಪಂದನ ಗೆಳೆಯರ ಬಳಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ ಸಸಿ ನೇಡುವ …

Read More »

ಹಡಪದ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ಧಿ ಸಂಘವು ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಹಡಪದ ಅಪ್ಪಣ್ಣನವರು …

Read More »

ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣ, ಬಡ ಕುಟುಂಬದ ಯುವಕನ ಸಾಧನ.

  ಮೂಡಲಗಿ: ಕಠಿನ ಪರೀಕ್ಷೆಗಳಲ್ಲಿ ಒಂದಾದ ಚಾರ್ಟೆಡ್ ಅಕೌಂಟೆಂಟ್ ಆಪ್ ಇಂಡಿಯಾ ಪರೀಕ್ಷೆಯಲ್ಲಿ ತಾಲೂಕಿನ ಪಟಗುಂದಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಬಾಹುಬಲಿ ಅಣ್ಣಪ್ಪ ಹೊಸಮನಿ ಅವರು ಉತ್ತಮ ದರ್ಜೆಯಲ್ಲಿ ಉತ್ತೀರ್ಣವಾಗಿ ಗ್ರಾಮದ ಕೀರ್ತಿ ತಂದಿದ್ದಾರೆ.ಪ್ರೌಡ ಹಾಗೂ ಬಿ ಕಾಮ್ ಪದವಿ ಶಿಕ್ಷಣವನ್ನು ಮೂಡಲಗಿಯ ಎಮ್ ಇ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪೊರೈಸಿ ಯಾವುದೇ ತರಬೇತಿ ಪಡೆಯದೇ ನಾಲ್ಕು ವರ್ಷ ಕಠಿನ ಪರಿಶ್ರಮದಿಂದ ಸತತ ಅದ್ಯಯನದಲ್ಲಿ ತೊಡಗಿ ಅಂತಿಮ ಪರೀಕ್ಷೆಯಲ್ಲಿ …

Read More »

ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಮ್ಯಾಟ್‍ಗಳನ್ನು ವಿತರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರಾಸು ವಿಮೆ ಸೇರಿ ಒಟ್ಟು 7.35 ಲಕ್ಷ ರೂ.ಗಳ ಚೆಕ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

  ಗೋಕಾಕ: ಕೆಎಂಎಫ್‍ನಿಂದ ರೈತ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ವೃಂದಕ್ಕೆ ಕರೆ ನೀಡಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ನಡೆದ ರಾಸು ವಿಮೆಗಳ ಚೆಕ್ ವಿತರಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಅಭಿವೃದ್ಧಿಗಾಗಿಯೇ ಕೆಎಂಎಫ್ ಬದ್ಧವಿದ್ದು ರೈತರಿಗೆ ಬೇಕಾಗಿರುವ ಎಲ್ಲ ಸೌಲತ್ತುಗಳನ್ನು ನೀಡುತ್ತಿದೆ ಎಂದು ಹೇಳಿದರು. ರೈತರಿಗೆ …

Read More »

ಕಿನ್ನಾಳ ಕಲೆ ಎಂಬುದು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಂದಿನವರೆಗೂ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿದ್ದೆ

ಕೊಪ್ಪಳ : ಕಿನ್ನಾಳ ಕಲೆ ಎಂಬುದು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಂದಿನವರೆಗೂ ಕೊಂಚವೂ ಬದಲಾಗದೇ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಇದೊಂದು ಅಪರೂಪದ ಕಲೆಯಾಗಿದ್ದು ಜಗತ್ಪಪ್ರಸಿದ್ಧವಾದುದಾಗಿದೆ.ವಿಜಯನಗರ ಸಾಮ್ರಾಜ್ಯ ಅಳಿದಮೇಲೆ ಅಲ್ಲಿಂದ ಪಲಾಯನ ಮಾಡಿದ ಹಲವರಲ್ಲಿ ಕೆಲ ಕಲಾವಿದರು ಕಿನ್ನಾಳಿಗೆ ವಲಸೆ ಬಂದರು. ಹಾಗೆ ಬಂದವರಲ್ಲಿ ಸಂಜೀವಪ್ಪರೆಂಬುವರು ಒಬ್ಬರು. ಇಲ್ಲಿಯ ದೇಸಾಯಿಯವರ ಆಶ್ರಯ ದೊರೆತು ಇಲ್ಲಿಯೇ ನೆಲೆ ನಿಂತರು. ಹೀಗೆ ಕಿನ್ನಾಳಿಗೆ ಬಂದ ಈ ಕಲಾವಿದರು ಅಂದಿನಿoದ …

Read More »

*ಅಮೃತ ಸ್ವ ಸಹಾಯ ಕಿರು ಉದ್ದಿಮೆಗಳಿಗೆ 45 ಲಕ್ಷ ರೂ ಬೀಜ ಧನದ ಚೆಕ್ ವಿತರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು : ಶಾಸಕ ಬಾಲಚಂದ್ರ ಜಾರಕಿಹೊಳಿ.*

ಮೂಡಲಗಿ: ಮಹಿಳಾ ಸಂಘಗಳ ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸಿ ಅವರ ಸ್ವಾವಲಂಬಿ ಬದುಕನ್ನು ಉತ್ತೇಜಿಸಿ, ಸ್ವ-ಸಹಾಯ ಸಂಘಗಳನ್ನು ಕಿರು ಉದ್ಯಮಿಗಳನ್ನಾಗಿಸುವ ಅಮೃತ ಯೋಜನೆ ಅಡಿ 45 ಸಂಘಗಳಿಗೆ ತಲಾ ಒಂದು ಲಕ್ಷ ರೂ ಗಳಂತೆ ಸಹಾಯ ಧನವನ್ನು ನೀಡಲಾಗುತ್ತಿದ್ದು, ಈ ಸಹಾಯ ಧನವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವಂತೆ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಿಳಾ ಸಂಘಗಳಿಗೆ ಕರೆ ನೀಡಿದರು. ಬುಧವಾರದಂದು ಪಟ್ಟಣದ ಗುಡ್ಲಮಡ್ಡಿ …

Read More »

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಪದಗ್ರಹಣ

ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಶರಣ ಐ.ಆರ್. ಮಠಪತಿ ಹೇಳಿದರು. ಇಲ್ಲಿಯ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2022-23ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜ ಸೇವೆಗೆ ನಿತ್ಯ ಸಾಕಷ್ಟು ಅವಕಾಶಗಳಿದ್ದು, ಪ್ರತಿಯೊಬ್ಬರಲ್ಲಿ ಸಮಾಜ ಸೇವೆ ಮಾಡುವ ಇಚ್ಛಾಶಕ್ತಿ ಇರಬೇಕು …

Read More »