ಮೂಡಲಗಿ – ನಗರದ ಬಾಜಿ ಮಾರ್ಕೆಟ್ ನಲ್ಲಿ ಆಯ್ ಡಿ ಎಸ್ ಎಮ್ ಟಿ ಯೋಜನೆಯ ವ್ಯಾಪಾರಿ ಮಳಿಗೆಗಳ ಕೊನೆಯ ಮಳಿಗೆಯ ಹತ್ತಿರ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸಮಾಜ ಸೇವಕ ಮಹಾಲಿಂಗಯ್ಯ ನಂದಗಾಂವಿಮಠ ಆಗ್ರಹಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಈ ಟಿ ಸಿ ಇದ್ದು ಯಾವುದೇ ಸಮಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಆದ್ದರಿಂದ ಕೂಡಲೇ ಟಿ ಸಿ ಯನ್ನು ಬೇರೆ ಕಡೆಗೆ …
Read More »Monthly Archives: ಜುಲೈ 2022
ನವೋದಯ ವಿದ್ಯಾಲಯಕ್ಕೆ ಆಯ್ಕೆ
ಮೂಡಲಗಿ ತಾಲೂಕಿನ ಕುಲಗೋಡ ಸರಸ್ವತಿ ನವೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಾದ ಕಾರ್ತಿಕ ವಿಠ್ಠಲ ಹಾದಿಮನಿ. ಸ್ಫೂರ್ತಿ ಸಂಜೀವ ಬಾಗಿಮನಿ. ಚಿಕ್ಕೋಡಿ ತಾಲೂಕಿನ ಕೊಥಳಿ ಕುಪ್ಪನವಾಡಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೂಖ್ಯೋಪಾಧ್ಯಾಯ ಹಣಮಂತ ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.
Read More »ಬೆಳಗಾವಿ ನೂತನ ಡಿಎಚ್‍ಒ ಡಾ.ಮಹೇಶ ಕೋಣಿ ಅವರಿಗೆ ಬೆಟಗೇರಿ ಗ್ರಾಮಸ್ಥರಿಂದ ಸತ್ಕಾರ
ಬೆಟಗೇರಿ:ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಡಿಎಚ್‍ಒ ಡಾ.ಮಹೇಶ ಕೋಣಿ ಅವರನ್ನು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಪರವಾಗಿ ಜುಲೈ.12 ರಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಸತ್ಕರಿಸಲಾಯಿತು. ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಮಾತನಾಡಿ, ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಡಾ.ಮಹೇಶ ಕೋಣಿ ಅವರು ಹಲವು ವರ್ಷಗಳ ಕಾಲ ಸಲ್ಲಿಸಿದ ಅವಿಸ್ಮರಣೀಯ ಸೇವೆಯನ್ನು ಸ್ಮರಿಸಿ …
Read More »ಪ್ರವಾಹ ಭೀತಿ ಎದುರಿಸಲು ಈಗಿನಿಂದಲೇ ಸನ್ನದ್ಧರಾಗಿ : ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ*
ಗೋಕಾಕ: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ …
Read More »ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಸೊಸೈಟಿಗೆ ಚಂದ್ರಶೇಖರ ಗಾಣಿಗೇರ ಅಧ್ಯಕ್ಷರಾಗಿ ಆಯ್ಕೆ
ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಸೊಸೈಟಿಗೆ ಚಂದ್ರಶೇಖರ ಗಾಣಿಗೇರ ಅಧ್ಯಕ್ಷರಾಗಿ ಆಯ್ಕೆ ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಶ್ರೀ ಜಡಿಸಿದ್ಧೇಶ್ವರ ಅರ್ಬನ್ ಕೋ. ಆಪ್ ಕ್ರೆಡಿಟ್ ಸೊಸೈಗೆ ಉಳಿದ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಅದೃಶಪ್ಪ ಗಾಣಿಗೇರ ಅವರು ಅವಿರೋಧವಾಗಿ ಆಯ್ಕೆಯಾಗಿರುವರು. ಬೈಲಹೊಂಗಲ ಉಪವಿಭಾಗದ ಎ ಆರ್ ಸಿ ಎಸ್ ಶಾಹೀನ್ ಅಖ್ತರ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿವರ್ಹಹಿಸಿ ಚಂದ್ರಶೇಖರ ಗಾಣಿಗೇರ ಅವರ ಆಯ್ಕೆಯನ್ನು ಘೋಷಣೆ ಮಾಡಿರುವರು. ಸೊಸೈಟಿಯ ನಿರ್ದೇಶಕರಾದ ಕಲ್ಲಪ್ಪ …
Read More »ಆಷಾಢ ಏಕಾದಶಿ ನಿಮಿತ್ಯ ವಿಠ್ಠಲನ ಭಕ್ತನಾಗಿ ಕ್ಯಾಮರಕ್ಕೆ ಪೋಸ್.
ಮೂಡಲಗಿ: ಆಷಾಢ ಏಕಾದಶಿ ನಿಮಿತ್ಯ ಭಾನುವಾರ ತಾಲೂಕಿನ ಪತ್ರಕರ್ತ ಸುಭಾಸ ಗೊಡ್ಯಾಗೋಳ ಅವರ ಪುತ್ರ ಶ್ರೀನಿವಾಸ್ ಗೊಡ್ಯಾಗೋಳ ಪಾಡುರಂಗ ವಿಠ್ಠಲನ ಭಕ್ತನಾಗಿ ಕ್ಯಾಮರಕ್ಕೆ ಪೋಸ್.
Read More »ಶಿಕ್ಷಕರಷ್ಟೇ ಜವಾಬ್ದಾರಿ ಶಾಲಾ ವಾಹನ ಚಾಲಕ ಮತ್ತು ನಿರ್ವಾಹಕನದ್ದು ಇರುತ್ತದೆ- ಅಜಿತ ಮನ್ನಿಕೇರಿ
ಮೂಡಲಗಿ : ಶೈಕ್ಷಣಿಕ ಕಾರ್ಯಚಟುವಟಿಕೆಗಳು ಸುಗಮವಾಗಿ ಸಾಗುವಲ್ಲಿ ಸಮಯಕ್ಕೆ ಸರಿಯಾಗಿ ವಾಹನಗಳ ಲಭ್ಯತೆ ಅತ್ಯಾವಶ್ಯಕವಾಗಿದೆ. ಖಾಸಗಿ ಶಾಲೆಗಳ ವಾಹನ ಸೌಕರ್ಯಗಳು ಸುಲಭ ಹಾಗೂ ಸರಕ್ಷೀತವಾಗಿದ್ದರೆ ಪಾಲಕರಿಗೆ ಹಾಗೂ ಕಲಿಕೆಯಲ್ಲಿ ಶಿಕ್ಷಕರಿಗೆ ಅನುಕೂಲವಾಗುವದು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ರವಿವಾರ ಪಟ್ಟಣದ ಆರ್.ಡಿ. ಪದವಿ ಪೂರ್ವ ಕಾಲೇಜಿನಲ್ಲಿ ಬಿಇಒ ಕಾರ್ಯಾಲಯದಿಂದ ಆಯೋಜಿಸಿದ್ದ ತಾಲೂಕಾ ಮಟ್ಟದ ಖಾಸಗಿ ಶಾಲಾ ವಾಹನ ಚಾಲಕರ ಮತ್ತು ನಿರ್ವಾಹಕರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ವಾಹನ …
Read More »18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿ.ವಿ.ಪಿ ನೌಕರರಿಗೆ ಮೀಟರ್ ರೀಡರ್ (ಎಮ್.ಆರ್) ನೇಮಕ ಮಾಡದಿದ್ದಲ್ಲಿ ವಿಧಾಸೌದದ ಮುಂದೆ ರಾಜ್ಯದಾದ್ಯಂತ ಜಿ.ವಿ.ಪಿ ನೌಕರರು ಸೇರಿ ಉಗ್ರವಾದ ಪ್ರತಿಭಟನೆ- ಭೀಮಪ್ಪ ಗಡಾಡ
ಮೂಡಲಗಿ: ಕರ್ನಾಟಕ ಸರ್ಕಾರದ ಒಡೆತನಕ್ಕೆ ಸೇರಿರುವ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಿ.ವಿ.ಪಿ ನೌಕರರಿಗೆ ಮುಂಬರುವ ಅಧಿವೇಶದ ಒಳಗಾಗಿ ಮೀಟರ್ ರೀಡರ್ (ಎಮ್.ಆರ್) ನೇಮಕ ಮಾಡದಿದ್ದಲ್ಲಿ ವಿಧಾಸೌದದ ಮುಂದೆ ರಾಜ್ಯದಾದ್ಯಂತ ಜಿ.ವಿ.ಪಿ ನೌಕರರು ಸೇರಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾಡ ಹೇಳಿದರು. ಶನಿವಾರದಂದು ಪಟ್ಟಣದ ಸಮರ್ಥ ಶಾಲಾ ಸಭಾಂಗಣದಲ್ಲಿ ಗ್ರಾಮ ವಿದ್ಯುತ್ …
Read More »ಪ್ರತಿಯೊಬ್ಬ ವ್ಯಕ್ತಿಯು ಕೂಡಾ ತನಗೆ ವಹಿಸಿರುವ ಹುದ್ದೆಗೆ ಅನುಸಾರವಾಗಿ ಕೆಲಸ ನಿರ್ವಹಿಸಬೇಕಿದೆ- ಬೀರಪ್ಪ ಅಂಡಗಿ
ಕೊಪ್ಪಳ: ಪ್ರತಿಯೊಬ್ಬ ವ್ಯಕ್ತಿಯು ಕೂಡಾ ತನಗೆ ವಹಿಸಿರುವ ಹುದ್ದೆಗೆ ಅನುಸಾರವಾಗಿ ಕೆಲಸ ನಿರ್ವಹಿಸಬೇಕಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಹೇಳಿದರು. ಅವರು ನಗರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾದ ಶ್ರೀನಿವಾಸ ಚಿತ್ರಗಾರ ಅವರಿಗೆ ಶಾಲೆಯ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಅಥಿಗಳಾಗಿ ಆಗಮಿಸಿ ಮಾತನಾಡುತ್ತಾ,ಪ್ರತಿಯೊಬ್ಬರು ತಮಗೆ ವಹಿಸಲಾದ ಹುದ್ದೆಗೆ ಅನುಗುಣವಾಗಿ ಕೆಲಸ ಮಾಡಿದಾಗ ಮಾತ್ರ …
Read More »ಬಕ್ರೀದ್ ಹಬ್ಬದ ಪ್ರಯುಕ್ತ ಅಲೆಮಾರಿ ಜನಾಂಗಕ್ಕೆ ದಿನಸಿ ಕಿಟ್ ವಿತರಣೆ
ಮೂಡಲಗಿ: ಬಕ್ರೀದ್ ಹಬ್ಬವು ತ್ಯಾಗ ಬಲಿದಾನಗಳ ಸಂಕೇತವಾಗಿದ್ದು ಬಡ ನಿರ್ಗತಿಕರು ಹಸಿವಿನಿಂದ ಬಳಲಬಾದೆಂದು ದಿನ ಬಳಕೆಯ ದಿನಸಿ ಕಿಟ್ ನೀಡಿ ನೆರವಾಗುತ್ತಿದ್ದೇನೆ ಎಂದು ಸಮಾಜ ಸೇವಕ ಇಜಾಜ ಕೊಟ್ಟಲಗಿ ಹೇಳಿದರು ಪಟ್ಟಣದ ಹೊರ ವಲಯದಲ್ಲಿ ತಂಗಿದ 13 ಕುಟುಂಬದ 40 ಸದಸ್ಯರಿರುವ ಸಂಚಾರಿ ಅಲೆಮಾರಿ ಜನಾಂಗಕ್ಕೆ ಬಕ್ರೀದ್ ಹಬ್ಬದ ಪ್ರಯುಕ್ತ ಅವರಿಗೆ ಅಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿ, ಹೊಟ್ಟೆ ಪಾಡಿಗಾಗಿ ಈ ಅಲೆಮಾರಿಗಳು ಇಲ್ಲಿ ತಂಗಿರುವ ವಿಷಯ ತಿಳಿದು …
Read More »