Breaking News
Home / 2022 / ಜುಲೈ (page 5)

Monthly Archives: ಜುಲೈ 2022

ಮಕ್ಕಳ ಕಲಿಕೆಗೆ ಯಾವುದೇ ರೀತಿಯಾಗಿ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು – ಬಿಇಒ ಅಜಿತ ಮನ್ನಿಕೇರಿ

ಮೂಡಲಗಿ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾದರೆ ಇಲಾಖೆಯ, ಮಾರ್ಗದರ್ಶಕರ, ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಸ್ಥಳೀಯವಾಗಿ ಲಭ್ಯವಾಗುವ ಶಿಕ್ಷಣಕ್ಕೆ ಉಪಯುಕ್ತ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಕಲಿಕೆಗೆ ಯಾವುದೇ ರೀತಿಯಾಗಿ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಶನಿವಾರ ಮೇಘಾ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ, ಶಿವಾಪೂರ(ಹ), ಹಳ್ಳೂರ, ನಾಗನೂರ, ಕಲ್ಲೋಳ್ಳಿ ಸಮೂಹ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಮಾತನಾಡಿದರು. ಮಳೆಗಾಲ …

Read More »

ಶರಣ ಶಾಬುಜಿ ಮತ್ತು ಅವಬಾಯಿ ಐಹೊಳೆ ಪುಣ್ಯಸ್ಮರಣೆ; ಸಂಗೀತ, ಭಜನಾ ಗೋಷ್ಠಿ

ಮೂಡಲಗಿ: ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ಅವರ 35ನೇ ಪುಣ್ಯಸ್ಮರಣೆ ಹಾಗೂ ಮಾತೋಶ್ರೀ ಅವಬಾಯಿ ಶಾಬುಜಿ ಐಹೊಳಿ ಅವರ 18ನೇ ಪುಣ್ಯಸ್ಮರಣೆ ಅಂಗವಾಗಿ ಭಾನುವಾರ ಜು.10ರಂದು ಬೆಳಿಗ್ಗೆ 9ಕ್ಕೆ ಇಟ್ನಾಳ ಗ್ರಾಮದಲ್ಲಿ ಜರುಗಲಿದೆ. ಸಾನ್ನಿಧ್ಯವನ್ನು ಇಟನಾಳದ ಶ್ರೀಸಿದ್ಧಶ್ವರ ಶರಣು ವಹಿಸುವರು. ಎಸ್.ಕೆ. ಕೊಪ್ಪದ ಹಿರಿಯ ಕಲಾವಿದ ರಾಮನಗೌಡ ವಜ್ರಮಟ್ಟಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಡಿವೈಎಸ್‍ಪಿ ಗಿರೀಶ ಕಾಂಬಳೆ, ಜಮಖಂಡಿಯ ಕಲಾವಿದ ಡಾ. ಗೋಪಾಲಕೃಷ್ಣ ಹವಾಲ್ದಾರ, ಸಾಹಿತಿ ಬಾಲಶೇಖರ …

Read More »

ನರೇಂದ್ರ ಮೋದಿ ವಿಶ್ವಮಾನ್ಯ ನಾಯಕ : ಲಕ್ಷ್ಮಣ ತಪಸಿ ಅರಭಾವಿ ಕ್ಷೇತ್ರದ ಎಲ್ಲ ಕುಟುಂಬಗಳಿಗೂ ಕೋವಿಡ್-19 ಸಮಯದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಶ್ಲಾಘನೆ ಗೋಕಾಕದಲ್ಲಿ ಶುಕ್ರವಾರದಂದು ಜರುಗಿದ ಬಿಜೆಪಿ ಅರಭಾವಿ ಮಂಡಲ ಕಾರ್ಯಕಾರಿಣಿ ಸಭೆ

ಗೋಕಾಕ : ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರೀಯ ಆಡಳಿತವೇ ಕಾರಣ. ಹೀಗಾಗಿ ಮೋದಿ ಅವರು ವಿಶ್ವಮಾನ್ಯ ನಾಯಕರು ಎಂದು ಬಿಜೆಪಿ ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ ಹೇಳಿದರು. ಇಲ್ಲಿಯ ಎನ್‍ಎಸ್‍ಎಫ್ ದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರೀಯ ಯೋಜನೆಗಳನ್ನು ಜನರ ಬಳಿ ಮುಂದಿಡುವಂತೆ ಕಾರ್ಯಕರ್ತರಿಗೆ …

Read More »

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಮೂಡಲಗಿ ಘಟಕದ ೨೦೨೨-೨೭ ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ

ಮೂಡಲಗಿ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಮೂಡಲಗಿ ಘಟಕದ ೨೦೨೨-೨೭ ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಟಿ ಯರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಾಧಿಕಾರಿಗಳ ವಿವರ: ರವಿಚಂದ್ರ ಹೊಸಟ್ಟಿ ( ಅಧ್ಯಕ್ಷರು), ಪರಸಪ್ಪ ಕುಲಕರ್ಣಿ (ಕಾರ್ಯದರ್ಶಿ), ಶ್ರೀಕಾಂತ ನ್ಯಾಮಗೌಡ(ರಾಜ್ಯ ಪರಿಷತ್ ಸದಸ್ಯರು), ಗುರವ್ವ ನರಗುಂದ (ಖಜಾಂಚಿ), ನಿರ್ದೇಶಕರುಗಳಾಗಿ ಉಮೇಶ ನುಗ್ಗಾನಟ್ಟಿ, ಶಿವಲಿಂಗ ಪೂಜೇರಿ, ಲತೀಪಸಾಬ ಕೊಕಟನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಿರುವ …

Read More »

ಮಾನಸಿಕವಾಗಿ ಸದೃಢರಾಗಬೇಕಾದರೆ ಶಾರೀರಿಕ ಸದೃಢತೆ ಅವಶ್ಯಕವಾಗಿದೆ- ಬಿಇಒ ಅಜಿತ ಮನ್ನಿಕೇರಿ

ಮೂಡಲಗಿ: ಪ್ರಾಮಾಣಿಕವಾಗಿ ಪಾರದರ್ಶಕತೆಯಿಂದ ನಿರ್ಣಾಯಕರು ನಿರ್ಣಯ ಕೈಗೊಳ್ಳುವ ಮೂಲಕ ಭವಿಷ್ಯತ್ತಿನ ಕ್ರೀಡಾಪಟುಗಳ ಜೀವನ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಬೇಕು ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಸಮೂಹ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮಾನಸಿಕವಾಗಿ ಸದೃಢರಾಗಬೇಕಾದರೆ ಶಾರೀರಿಕ ಸದೃಢತೆ ಅವಶ್ಯಕವಾಗಿದೆ. ಕ್ರೀಡೆಗಳು ಹಾಗೂ ದೈನಂದಿನ ದೈಹಿಕ ಕಸರತ್ತುಗಳಿಂದಾಗಿ ಸದೃಢ ಕಾಯದಂತಹ ಶರೀರ ನಮ್ಮದಾಗುತ್ತದೆ. ಕ್ರೀಡೆಗಳಲ್ಲಿ ಸೋಲು ಗೆಲವು ಸಹಜ, ಇವುಗಳನ್ನು ಸಮರ್ಪಕವಾಗಿ …

Read More »

ಪ್ರತಿಭಾ ಪುರಸ್ಕಾರಕ್ಕೆ ಸರಕಾರಿ ನೌಕರರ ಸಂಘದಿಂದ ಮನವಿ

  ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜಾಗೋಳ ತಿಳಿಸಿದ್ದಾರೆ, ಆನಲೈನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಕ್ಕಳ ತಂದೆ ಅಥವಾ ತಾಯಿ ಕಡ್ಡಾಯವಾಗಿ ಸರ್ಕಾರಿ ನೌಕರಾಗಿರಬೇಕು ಹಾಗೂ ಅರ್ಜಿಯ ಜೊತೆಗೆ ಸೇವಾ ದೃಡಿಕರಣ …

Read More »

ಲಯನ್ಸ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಎಸ್.ಎಸ್. ಪಾಟೀಲ, ಜು.9ಕ್ಕೆ ನೂತನ ಪದಾಧಿಕಾರಿಗಳ ಪದಗ್ರಹಣ

ಡಾ. ಸಿದ್ದನಗೌಡ ಎಸ್. ಪಾಟೀಲ ಅಧ್ಯಕ್ಷ ಸಂಗಮೇಶ ಕೌಜಲಗಿ ಕಾರ್ಯದರ್ಶಿ ಶಿವಬೋಧ ಯರಜರವಿ. ಖಜಾಂಚಿ ನೂತನ ಪದಾಧಿಕಾರಿಗಳ ಪದಗ್ರಹಣ ಜು.9ಕ್ಕೆ ಲಯನ್ಸ್  ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಎಸ್.ಎಸ್. ಪಾಟೀಲ ಮೂಡಲಗಿ: 2022-23ನೇ ಸಾಲಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಸಿದ್ದನಗೌಡ ಎಸ್. ಪಾಟೀಲ, ಕಾರ್ಯದರ್ಶಿಯಾಗಿ ಸಂಗಮೇಶ ಕೌಜಲಗಿ, ಖಜಾಂಚಿಯಾಗಿ ಶಿವಬೋಧ ಯರಜರವಿ ಅವರು ಆಯ್ಕೆಯಾಗಿರುವರು. ಪದಗ್ರಹಣ: ಇದೇ ಜೂ. 9ರಂದು ಸಂಜೆ 6.30ಕ್ಕೆ ಬಸವೇಶ್ವರ ನಗರದ …

Read More »

ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ

ಮೂಡಲಗಿ: ಕೇಂದ್ರ ಸರ್ಕಾರದಿಂದ ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ, ತಮಿಳುನಾಡಿನಿಂದ ಸಂಗೀತ ನಿರ್ದೇಶಕರಾದ ಇಳಯರಾಜ, ಕೇರಳದಿಂದ ಪ್ರಸಿದ್ಧ ಕ್ರೀಡಾಪಟು ಪಿ.ಟಿ ಉಷಾ ಹಾಗೂ ಆಂಧ್ರಪ್ರದೇಶದಿಂದ ಖ್ಯಾತ ಕಥೆಗಾರರಾದ ವಿಜಯೇಂದ್ರ ಪ್ರಸಾದ್ ಅವರನ್ನು ಆಯ್ಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದರು. ಹಲವು ದಶಕಗಳಿಂದ ಧಾರ್ಮಿಕ, ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಮಹಿಳಾ …

Read More »

ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹಾಮಂಡಳಕ್ಕೆ ಅವಿರೋಧ ಆಯ್ಕೆ , ಹಿಡಕಲ್ ಡ್ಯಾಂ ನೀರು ಬಳಕೆದಾರರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಖಂಡ್ರಟ್ಟಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹುಂಡೇಕರ

ಗೋಕಾಕ : ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಅಶೋಕ ಶಿವಪುತ್ರ ಖಂಡ್ರಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಪರಮಾನಂದ ಹುಂಡೇಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಹಿಡಕಲ್ ಡ್ಯಾಂನ ಮಹಾಮಂಡಳದ ಪ್ರಧಾನ ಕಛೇರಿಯಲ್ಲಿ ಜರುಗಿದ ಮಹಾಮಂಡಳದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ …

Read More »

ಬೆಟಗೇರಿ-ನಿಂಗಾಪೂರ-ಕಪರಟ್ಟಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಅನುದಾನ

ಬೆಟಗೇರಿ:ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಬೆಟಗೇರಿ-ನಿಂಗಾಪೂರ-ಕಪರಟ್ಟಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಅನುದಾನ ಬಿಡುಗಡೆಗೊಂಡಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು. ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಬುಧವಾರದಂದು 2021-22 ನೇ ಸಾಲಿನ ರಾಜ್ಯ ಹೆದ್ದಾರಿ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 6 ಕೋಟಿ ರೂ.ಮೊತ್ತದ ಬೆಟಗೇರಿ-ನಿಂಗಾಪೂರ-ಕಪರಟ್ಟಿ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಹದೆಗೆಟ್ಟ …

Read More »