ಬೆಟಗೇರಿ:ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಬೆಟಗೇರಿ-ನಿಂಗಾಪೂರ-ಕಪರಟ್ಟಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಅನುದಾನ ಬಿಡುಗಡೆಗೊಂಡಿದೆ ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಬುಧವಾರದಂದು 2021-22 ನೇ ಸಾಲಿನ ರಾಜ್ಯ ಹೆದ್ದಾರಿ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 6 ಕೋಟಿ ರೂ.ಮೊತ್ತದ ಬೆಟಗೇರಿ-ನಿಂಗಾಪೂರ-ಕಪರಟ್ಟಿ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಹದೆಗೆಟ್ಟ ರಸ್ತೆಗಳನ್ನು ಬರುವ ಡಿಸೆಂಬರ್ ತಿಂಗಳೊಳಗೆ ಅಭಿವೃದ್ಧಿ ಪಡಿಸಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ಕಳೆದೆರಡು ದಶಕದಿಂದ ಅರಭಾಂವಿ ಮತಕ್ಷೇತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ. ಕ್ಷೇತ್ರದ ಇಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ಆಧುನಿಕ ಬಸವಣ್ಣ ಎಂದೆನಿಸಿಕೊಂಡಿದ್ದಾರೆ. ಹೀಗಾಗಿ ಅರಭಾಂವಿ ಮತಕ್ಷೇತ್ರದ ಜನರು ಸಮನ್ವಯತೆ ಭಾವನೆಯಿಂದ ಬದುಕುತ್ತಿದ್ದಾರೆ. ಮತಕ್ಷೇತ್ರದ ಅಭ್ಯುದಯ ಹಾಗೂ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಬೆಟಗೇರಿ ಗ್ರಾಪಂ ಅಧ್ಯಕ್ಷೆ ಬಸವ್ವ ದೇಯಣ್ಣವರ, ಉಪಾಧ್ಯಕ್ಷ ಬಿ.ಎಂ.ಕೋಣಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಸ್ಥಳೀಯ ಈರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಈ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಸಿ.ಪಿ.ಯಕ್ಸಂಬಿ, ಗೋಕಾಕ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರು ಎಸ್.ಎಸ್.ಗಸ್ತಿ, ತಾಪಂ ಮಾಜಿ ಸದಸ್ಯ ಲಕ್ಷ್ಮಣ ನಿಲನ್ನನವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಗುತ್ತಿಗೆದಾರ ಪಾಂಡು ಪಾಟೀಲ, ಈಶ್ವರ ಬಳಿಗಾರ, ಎಂ.ಐ.ನೀಲಣ್ಣವರ, ರಾಮಲಿಂಗ ಹಳ್ಳಿ, ಪರಮಾನಂದ ಕೋಣಿ, ಬಸು ನಾಯ್ಕ, ಸಿದ್ದಪ್ಪ ಖಾನಟ್ಟಿ, ಎಂ.ಎಲ್.ವಗ್ಗರ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಸುಭಾಷ ಕರೆಣ್ಣವರ, ಸುಭಾಷ ಜಂಭಗಿ, ಶ್ರೀಧರ ದೇಯಣ್ಣವರ, ಲಕ್ಕಪ್ಪ ಚಂದರಗಿ, ಅಶೋಕ ಕೋಣಿ, ಬಸವರಾಜ ಪಣದಿ, ಸಿದ್ದಪ್ಪ ಬಾಣಸಿ, ಮುತ್ತೆಪ್ಪ ಕುರುಬರ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಯುವಕರು, ಸ್ಥಳೀಯರು ಇದ್ದರು.
