ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುವ ಮದುವೆ, ಮುಂಜೆ, ಮನೆಗಳಲ್ಲಿ ಜರುಗುವ ವಿವಿಧ ಸಭೆ, ಸಮಾರಂಭಗಳಲ್ಲಿ ತಪ್ಪದೇ ಹಾಜರಾಗಿ ಜನಪದ ಹಾಡುಗಳನ್ನು ಹಾಡುತ್ತಾ, ನಾಡಿನ ಜನಪದ, ಕಲೆ, ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಇಂದಿನ ಪೀಳಿಗೆಗಳಲ್ಲಿ ಜನಪದ ಹಾಡುಗಳನ್ನು ಪರಿಚಯಿಸುತ್ತಾ ಬಂದಿರುವ ಬೆಟಗೇರಿ ಗ್ರಾಮದ ಕ್ಷತ್ರೀಯ ಸಮಾಜದ ಹಿರಿಯ ಜೀವಿ, ಸೋಬಾನ ಪದಗಳ ಹಾಡುಗಾರ್ತಿ, ಸ್ಥಳೀಯ ಜನಪದ ಹಾಡುಗಳ ಗಾನಕೋಗಿಲೆ ಕಾಶವ್ವ ಭರಮಪ್ಪ ಪೂಜೇರಿ(90)ಅವರು ಆ.21ರಂದು ನಿಧನರಾದರು. ಮೃತರು …
Read More »Daily Archives: ಆಗಷ್ಟ್ 22, 2022
ಬೆಟಗೇರಿಯಲ್ಲಿ ಜರುಗಲಿರುವ 38ನೇ ಸತ್ಸಂಗ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಆ.29 ರಿಂದ ಸೆ.2ರ ವರೆಗೆ ನಡೆಯಲಿರುವ 38ನೇ ಸತ್ಸಂಗ ಸಮ್ಮೇಳನದ ಆಯೋಜನೆಯ ಹಿನ್ನಲೆಯಲ್ಲಿ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಇಚೆಗೆ ಸತ್ಸಂಗ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ಇದೇ ಆ.29ರಿಂದ ಸೆ.2ರವರೆಗೆ ನಡೆಯಲಿರುವ 38ನೇ ಸತ್ಸಂಗ ಸಮೇಳನದ ಸಮಗ್ರ ಯಶಸ್ವಿಗೆ ಇಲ್ಲಿಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, …
Read More »ಬೆಟಗೇರಿ ಪ್ರೌಢ ಶಾಲೆಯಲ್ಲಿ ಸದ್ಭಾವನಾ ದಿನ ಆಚರಣೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸದ್ಭಾವನಾ ದಿನ ಆಚರಣೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಸದ್ಭಾವನಾ ದಿ, ಪ್ರತಿಜ್ಞಾ ವಿಧಿ ಸ್ವೀಕಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಸಿಬ್ಬಂದಿಗೆ ಜಾತಿ, ಮತ, ಧರ್ಮ, ಪ್ರದೇಶ ಹಾಗೂ ಭಾಷೆಯಬೇಧ ಭಾವವಿಲ್ಲದೇ ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮೋಹನ ತುಪ್ಪದ, …
Read More »‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ – ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ
ಸಿಎ ಪಾಸು ಮಾಡಿರುವ ಬಾಹುಬಲಿಗೆ ಅಭಿನಂದನಾ ಸಮಾರಂಭ ಮೂಡಲಗಿ: ‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು. ಸಮೀಪದ ಪಟಗುಂದಿ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಾಹುಬಲಿ ಹೊಸಮನಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಛಲ ಇರಬೇಕು ಅದರೊಂದಿಗೆ ಪ್ರಯತ್ನ ಇರಬೇಕು ಎಂದರು. ಪಟಗುಂದಿ ಗ್ರಾಮದ ಬಾಹುಬಲಿ …
Read More »