ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ 9.60 ಕೋಟಿ ರೂ.: ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ : ಸಾರ್ವಜನಿಕರ ಸುಗಮ ಸಂಚಾರಕ್ಕೆ ತುಕ್ಕಾನಟ್ಟಿಯಿಂದ ಕಲ್ಲೋಳಿವರೆಗಿನ ರಸ್ತೆ ಸುಧಾರಣಾ ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ಎರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದರು. ಗುರುವಾರದಂದು ಲೋಕೋಪಯೋಗಿ ಇಲಾಖೆಯಿಂದ 9.60 ಕೋಟಿ ರೂ. ವೆಚ್ಚದ ತುಕ್ಕಾನಟ್ಟಿ-ಕಲ್ಲೋಳಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ …
Read More »Daily Archives: ನವೆಂಬರ್ 4, 2022
ಮೂಡಲಗಿಯಲ್ಲಿ ನಾಮದೇವ ಮಹಾರಾಜರ ಜಯಂತಿ ಆಚರಣೆ.
ಮೂಡಲಗಿಯಲ್ಲಿ ನಾಮದೇವ ಮಹಾರಾಜರ ಜಯಂತಿ ಆಚರಣೆ. ಮೂಡಲಗಿಯಲ್ಲಿ ಶುಕ್ರವಾರ ಮಂದ್ರೋಳಿ ಅವರ ಗಿರಣಿಯಲ್ಲಿ ಸ್ಥಳೀಯ ನಾಮದೇವ ಶಿಂಪಿ ಸಮಾಜದ ವತಿಯಿಂದ ಸಂತ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 752 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀರಂಗ ಮಂದ್ರೋಳಿ, ಜಗದೀಶ್ ಮಂದ್ರೋಳಿ, ಶಂಕರ ಕೊಂಕಣಿ, ಶ್ರೀಪಂತ ಹಾವಳ, ಪುಂಡಲೀಕ ರೇಳೆಕರ, ಪ್ರಕಾಶ ಮಂದ್ರೋಳಿ, ಅಶೋಕ ಇತಾಪಿ, ಗಂಗಾರಾಮ ರೇಳೆಕರ, ಪಾಂಡು ಮಂದ್ರೋಳಿ, ಪಾಂಡು ಮಹೇಂದ್ರಕರ ಮತ್ತು ಯುವಕರು ಉಪಸ್ಥಿತರಿದ್ದರು.
Read More »ನಾಳೆ ಸಂಪಿಗೆ ಕವನ ಸಂಕಲನ ಬಿಡುಗಡೆ
ನಾಳೆ ಸಂಪಿಗೆ ಕವನ ಸಂಕಲನ ಬಿಡುಗಡೆ ಮುಡಲಗಿ: ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಕನ್ನಡ ಸಾಹಿತ್ಯ ಪರಿಷತ್ ಮತ್ತು ಚೈತನ್ಯ ಆಶ್ರಮ ವಸತಿ ಶಾಲೆ ಆಶ್ರಯದಲ್ಲಿ ನ.6 ರಂದು ಮುಂಜಾನೆ 10ಗಂಟೆಗೆ ಕವಿಗೋಷ್ಠಿ ಹಾಗೂ ಅಪ್ಪಣ್ಣ ಮೂಗಳಖೋಡ ಅವರು ರಚಿಸಿದ ಸಂಪಿಗೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ವಹಿಸುವರು. …
Read More »ದಿ. 5 ರಿಂದ ಪೀರ ಮೆಹಬೂಬ ಸುಭಾನಿ ಉರಸ್
ನಾಳೆ ಪೀರ ಮೆಹಬೂಬ ಸುಭಾನಿ ಉರಸ್ ಮುಡಲಗಿ: ಇಲ್ಲಿಯ ಕಲ್ಮೇಶ್ವರ ವೃತ್ತದ ಹತ್ತಿರದ ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮವುನ. 5 ರಿಂದ ಜರುಗಲಿದೆ. ನ.5 ರಂದು ಸಂಜೆ ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಹಾಗೂ ಶ್ರೀ ಶ್ರೀಧರಬೋಧ ಸ್ವಾಮಿಜಿ ಅವರು ಗಂಧ ಏರಿಸುವ ಮೂಲಕ ಉರಸ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನ.6 ರಂದು ಪೀರ ಮೆಹಬೂಬ ಸುಭಾನಿ ಉರಸ್ ಕಾರ್ಯಕ್ರಮ ನಡೆಯಲಿದೆ ಎಂದು …
Read More »