Breaking News
Home / 2023 / ಮಾರ್ಚ್ (page 4)

Monthly Archives: ಮಾರ್ಚ್ 2023

ಕೌಜಲಗಿಯಲ್ಲಿ ಬೃಹತ್ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿದ ಸಿಎಮ್ ಚವ್ಹಾಣ

*ಇಡೀ ವಿಶ್ವವೇ ನರೇಂದ್ರ ಮೋದಿಯವರ ಜಪ ಮಾಡುತ್ತಿದೆ-ಎಮ್.ಪಿ. ಸಿ.ಎಮ್. ಶಿವರಾಜಸಿಂಗ್ ಚವ್ಹಾಣ* *ಕೌಜಲಗಿಯಲ್ಲಿ ಬೃಹತ್ ಹಿಂದುಳಿದ ವರ್ಗಗಳ ಸಮಾವೇಶವನ್ನು ಉದ್ಘಾಟಿಸಿದ ಸಿಎಮ್ ಚವ್ಹಾಣ.* *ನಮ್ಮ ವ್ಯಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.* *ಗೋಕಾಕ*: ಪ್ರಧಾನಿ ನರೇಂದ್ರ ಮೋದಿಯವರ ರೂಪದಲ್ಲಿ ಸಾಕ್ಷಾತ್ ದೇವರು ಬಂದಿದ್ದು, ರಾಷ್ಟ್ರದ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸಂಕಲ್ಪ ಮಾಡಿದ್ದು, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ಮಧ್ಯಪ್ರದೇಶ ಮುಖ್ಯಮಂತ್ರಿ …

Read More »

ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಕಾರ್ಯಕ್ರಮ

ಮೂಡಲಗಿ : ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಗುರ್ಲಾಪೂರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಬುಧವಾರ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಮತಗಟ್ಟೆಯೊಳಗೆ ಪ್ರವೇಶ ಪಡೆದ ನಂತರ ಮತಯಂತ್ರ ಸಿದ್ಧವಾಗಿರುವುದಕ್ಕೆ ಹಸಿರು ದೀಪ ಉರಿಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ನಿಮಗೆ ಸೂಕ್ತ ಎನ್ನಿಸಿದ ಅಭ್ಯರ್ಥಿಗೆ ಮತದಾನ ಮಾಡಿ ಎಂದು ಸಾರ್ವಜನಿಕರಿಗೆ ಸಿಡಿಪಿಒ ಹಾಗೂ ಮೂಡಲಗಿ ವಲಯದ ಚುನಾವಣಾಧಿಕಾರಿ ಯಲ್ಲಪ್ಪ ಗದಾಡಿ ಸಲಹೆ ನೀಡಿದರು. ಮತದಾನದ ಬಟನ್ …

Read More »

ಹೆಣ್ಣು ವೈಜ್ಞಾನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿರಿಸಿ ತನ್ನ ಸಾಮಥ್ರ್ಯವನ್ನು ತೋರಿಸಿದ್ದಾಳೆ – ಭಾರತಿ ಮದಭಾವಿ

ಗೋಕಾಕ: ಹೆಣ್ಣು ವೈಜ್ಞಾನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿರಿಸಿ ತನ್ನ ಸಾಮಥ್ರ್ಯವನ್ನು ತೋರಿಸಿದ್ದಾಳೆ. ಧೈರ್ಯ ಕುಂದದೆ ಮುನ್ನುಗ್ಗಿ ಸಾಧನೆ ಮಾಡಲು ಸ್ಫೂರ್ತಿ ನೀಡುವ ಕೈಗಳು ಸಾಕಷ್ಟು ಇವೆ. ಅದರಲ್ಲೂ ವಿಶೇಷವಾಗಿ ಶಿವಾ ಫೌಂಡೇಶನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಗೋಕಾಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಭಾರತಿ ಮದಭಾವಿ ಹೇಳಿದರು. ಅವರು ಇಲ್ಲಿಯ ಶಿವಾ ಫೌಂಡೇಶನ್ ಸಂಸ್ಥೆ ಮತ್ತು ಬೆಂಗಳೂರ ಸ್ನೇಹಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ …

Read More »

ಪ್ರಜಾಧ್ವನಿ ಸಮಾವೇಶ ಮುಂದೂಡಿಕೆ

ಪ್ರಜಾಧ್ವನಿ ಸಮಾವೇಶ ಮುಂದೂಡಿಕೆ ಮೂಡಲಗಿ: ಪಟ್ಟಣದ ಶ್ರೀ ಬಸವರಂಗ ಮಂಟಪದ ಮೈದಾನದಲ್ಲಿ ಮಾ.15ರಂದು ನಿಗದಿಗೊಂಡ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದ್ರುವನಾರಾಯಣ ನಿಧನದಿಂದಾಗಿ ಮಾ. 17ಕ್ಕೆ ಮುಂದೂಡಲಾಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ನಡೆಯಲಿರುವ ಸ್ಕ್ರೀನಿಂಗ್ ಕಮಿಟಿ ಸಭೆಗೆ ತೆರಳುತ್ತಿರುವ ಹಿನ್ನಲೆಯಲ್ಲಿ ಮಾ.17ರಂದು ಮೂಡಲಗಿಯಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮವು ಮತ್ತೇ ತಾತ್ಕಾಲಿವಾಗಿ ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ತಿಳಿಸಿದ್ದಾರೆ. ಸಮಾವೇಶ …

Read More »

ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಕೆ ಅವರಿಂದ ಸುದ್ದಿಗೋಷ್ಠಿ

ಮೂಡಲಗಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕುಕ್ಕರ, ಗೃಹಬಳಕೆಯ ವಸ್ತುಗಳು, ಬಾಡೂಟ್, ಕೂಪನಗಳನ್ನು ಮತ್ತು ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದರೆ ಕೂಡಲೇ ಚುನಾವಣಾಧಿಕಾರಿಗಳು ಅವುಗಳನ್ನು ಮುಟ್ಟುಗೊಲು ಹಾಕಿಕೊಂಡು ಹಂಚಿಕೆ ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಹಾಗೂ ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಕೆ ಎಚ್ಚರಿಕೆ ನೀಡಿದರು. ಮಂಗಳವಾರದಂದು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ …

Read More »

ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ

ಕೀರ್ತಿ ಮಡಿವಾಳ ಸೈನಿಕ ಶಾಲೆಗೆ ಆಯ್ಕೆ, ಸತ್ಕಾರ ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದ ಸರಸ್ವತಿ ಶಾಲೆಯ ವಿದ್ಯಾರ್ಥಿ ಹಾಗೂ ಮಡಿವಾಳ ಸಮಾಜ ಕೀರ್ತಿ ಹನಮಂತ ಮಡಿವಾಳ ವಿದ್ಯಾರ್ಥಿಯು ವಿಜಯಪುರ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಪ್ರಯುಕ್ತ ಮುನ್ಯಾಳ ಗ್ರಾಮದ ಮಡಿವಾಳ ಸಮಾಜದ ಮುಖಂಡ ಶಿವಾನಂದ ಮಡಿವಾಳ ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಶಿವಾನಂದ ಮಡಿವಾಳರ ಮಾತನಾಡಿ, ಪ್ರತಿಯೋಬ್ಬರು ಪಾಲಕರ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯೆಯನ್ನು ನೀಡಿ ಮಕ್ಕಳನ್ನು ಆಸ್ತಿಯನ್ನಾಗಿಸಬೇಕೆಂದರು. …

Read More »

ಭ್ಯರನಟ್ಟಿಯಲ್ಲಿ ಜಲ ಜೀವನ ಮೀಷನ ಕಾಮಗಾರಿಗೆ ಭೂಮಿ ಪೂಜೆ

ಭೈರನಟ್ಟಿ: ಜೆ.ಜೆ.ಎಂ ಕಾಮಗಾರಿಗೆ ಚಾಲನೆ ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ವಾಯ್ ಗ್ರಾಮ ಪಂಚಾಯತ ವ್ಯಾಪ್ತಿಯ ಭ್ಯರನಟ್ಟಿ ಗ್ರಾಮದ ಬಲಭೀಮ ತೋಟ ವ್ಯಾಪ್ತಿಯಲ್ಲಿ ಕುಡಿಯ ನೀರಿನ ಯೋಜನೆಯಾದ ಜಲ ಜೀವನ ಮೀಷನ ಕಾಮಗಾರಿಗೆ ಭೂಮಿ ಪೂಜೆಯನ್ನು ಜನಪ್ರತಿನೀಧಿಗಳು ಮತ್ತು ಮುಖಂಡರು ನೆರವೇರಿಸಿದರು. ಈ ಸಂಧರ್ಭದಲ್ಲಿ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಭೈರನಟ್ಟಿ ಗ್ರಾಮದ ಬಲಭೀಮ ತೋಟದ ಜನತೆಗೆ ಪ್ರತಿ ಮನೆ ಮನೆ ನೀರಿನ ಸೌಲಭ್ಯ ಒದಗಿಸಲ್ಲಿಕ್ಕೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ …

Read More »

6 ತಿಂಗಳಿಂದ ಕಾರ್ಮಿಕರ ನಿರೀಕ್ಷಕರಿಲ್ಲದೆ, ಕಾರ್ಮಿಕ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳು ಸರಿಯಾಗಿ ಸೌಲಭ್ಯಗಳು ದೊರೆಯುತ್ತಿಲ್ಲ- ಸುಭಾಸ ಗೊಡ್ಯಾಗೋಳ

ಮೂಡಲಗಿ: ಮೂಡಲಗಿ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 7-8 ಸಾವಿರ ಕಾರ್ಮಿಕರಿದ್ದು, ಕಳೆದ 6 ತಿಂಗಳಿಂದ ಕಾರ್ಮಿಕರ ನಿರೀಕ್ಷಕರಿಲ್ಲದೆ, ಕಾರ್ಮಿಕ ಇಲಾಖೆಯಿಂದ ನೀಡುವ ವಿವಿಧ ಸೌಲಭ್ಯಗಳು ಸರಿಯಾಗಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸಮರ್ಥ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿಯ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ಹೇಳಿದರು. ಸೋಮವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸಮರ್ಥ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘ ಮೂಡಲಗಿ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ವಿವಿಧ …

Read More »

ಪುರಾತನ ಕಾಲದಿಂದಲೂ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವ ಒಂದು ಶಕ್ತಿಯಾಗಿದ್ದಾರೆ- ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ

ಮೂಡಲಗಿ : ಮಹಿಳೆ ಮತ್ತು ಪುರುಷ ಪರಸ್ಪರ ಹೊಂದಾಣಿಕೆ ಹಾಗೂ ಜವಾಬ್ದಾರಿಯೊಂದಿಗೆ ಮುನ್ನಡೆದಾಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು. ಪುರಾತನ ಕಾಲದಿಂದಲೂ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುವ ಒಂದು ಶಕ್ತಿಯಾಗಿದ್ದಾರೆ ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು. ಸೋಮವಾರದಂದು ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಬೆಳಗಾವಿಯ ತುಳಿಸಿ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಮಹಿಳಾ …

Read More »

ಮಾ.14ರಿಂದಗೋಸಬಾಳ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ

ಮಾ.14ರಿಂದ ಗೋಸಬಾಳ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಇಲ್ಲಿಯ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.14ರಿಂದ ಮಾ.17ರವರೆಗೆ ನಡೆಯಲಿವೆ. ಮಾ.14ರಂದು ಮುಂಜಾನೆ 9ಗಂಟೆಗೆ ಸುಮಂಗಲೆಯರಿಂದ ಕುಂಭ, ಆರತಿ, ಸಕಲವಾದ್ಯಮೇಳಗಳೊಂದಿಗೆ ಸ್ಥಳೀಯ ಬಸ್ ತಂಗುದಾಣಕ್ಕೆ ಹೋಗುವುದು. ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಶ್ರೀದೇವಿಗೆ ಪೂಜೆ ಸಲ್ಲಿಸುವರು, …

Read More »