Breaking News
Home / 2023 / ಮಾರ್ಚ್ (page 6)

Monthly Archives: ಮಾರ್ಚ್ 2023

ಗ್ರಾಮೀಣ ಬಡ ರೈತರಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಲಿ- ಅರವಿಂದ ದಳವಾಯಿ.

  ಗ್ರಾಮೀಣ ಬಡ ರೈತರಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಲಿ- ಅರವಿಂದ ದಳವಾಯಿ. ಮೂಡಲಗಿ: ಗ್ರಾಮೀಣ ಭಾಗದ ಬಡವರಿಗೆ, ರೈತರಿಗೆ ಕೂಲಿಕರ್ಮಿಗಳಿಗೆ, ಮಹಿಳೆಯರು ಮಕ್ಕಳಿಗೆ ದುಡ್ಡು ಕೊಟ್ಟು ಆರೋಗ್ಯವನ್ನು ತಪಾಸಿಸಿಕೊಂಡು ಚಿಕಿತ್ಸೆ ಪಡೆಯುವುದು ತುಂಬಾ ಕಷ್ಟದ ಕೆಲಸ. ಬಡವರ ರೈತರ ಮಹಿಳೆಯರ ಮಕ್ಕಳ ಅನುಕೂಲಕ್ಕಾಗಿ ಕೆಎಲ್‍ಇ ಯವರು ಉಚಿತ ಆರೋಗ್ಯ ಚಿಕಿತ್ಸಾ ಶಿಬಿರವನ್ನು ಕೌಜಲಗಿಯಲ್ಲಿ ಹಮ್ಮಿಕೊಂಡಿದ್ದು, ಈ ಭಾಗದ ಜನರಿಗೆ ಉಚಿತ ಆರೋಗ್ಯ ಚಿಕಿತ್ಸೆ ದೊರೆಯಲು ಅನುಕೂಲವಾಗುತ್ತದೆ ಎಂದು ಸಿಂಧುತಾಯಿ …

Read More »

ಪೂರ್ಣಿಮಾಗೆ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ

ಪೂರ್ಣಿಮಾಗೆ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಮೂಡಲಗಿ: ಇಲ್ಲಿಯ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪೂರ್ಣಿಮಾ ಯಾಲಿಗಾರ ಅವರಿಗೆ ಪುತ್ತೂರಿನ ಖಿದ್ಮ ಫೌಂಡೇಶನದವರು ಕೊಡಮಾಡುವ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾ. 5ರಂದು ಧಾರವಾಡದ ರಂಗಾಯಣದಲ್ಲಿ ಜರುಗಲಿರುವ ಖಿದ್ಮ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ಪೂರ್ಣಿಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Read More »

2ಎ ಮೀಸಲಾತಿಗಾಗಿ ಬೆಟಗೇರಿ ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ

2ಎ ಮೀಸಲಾತಿಗಾಗಿ ಬೆಟಗೇರಿ ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎಲ್ಲಾ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು. ಬೆಟಗೇರಿ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡ, ನ್ಯಾಯವಾದಿ ಎಂ.ಐ,ನೀಲನ್ನವರ ಮಾತನಾಡಿ, ಕೂಡಲಸಂಗಮ ಧರ್ಮಕ್ಷೇತ್ರದ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಶಿಕ್ಷಣ ಮತ್ತು ಉದ್ಯೋಗ ಹಿತದೃಷ್ಠಿಯಿಂದ ಪಂಚಮಸಾಲಿ ಲಿಂಗಾಯತರನ್ನು 2ಎ …

Read More »

ಪಾಲಕರು ಮಕ್ಕಳಿಗೆ ಪುಸ್ತಕ ಓದುವ ಅಭಿರುಚಿ ಬೆಳಸಬೇಕು- ಬಾಲಶೇಖರ ಬಂದಿ

 ಪಾಲಕರು ಮಕ್ಕಳಿಗೆ ಪುಸ್ತಕ ಓದುವ ಅಭಿರುಚಿ ಬೆಳಸಬೇಕು ಮೂಡಲಗಿ: ‘ಪಾಲಕರು ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸ್ತಕಗಳನ್ನು ನೀಡಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು. ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಮೆಳವಂಕಿ ಸಿದ್ಧಾರೂಢಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪುಸ್ತಕಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಹಾಗೂ ಸಾಧನೆಯತ್ತ ನಡೆಸುವಲ್ಲಿ ಜ್ಞಾನ ದೀಪಗಳಾಗಿವೆ ಎಂದರು. …

Read More »

ಮಾರ್ಚ್ 15 ರ ಗಡುವಿನ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಅ ಮೀಸಲಾತಿ ನೀಡಬೇಕು

ಮಾರ್ಚ್ 15 ರ ಗಡುವಿನ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಅ ಮೀಸಲಾತಿ ನೀಡಬೇಕು  ಕುಲಗೋಡ: ಮಾರ್ಚ್ 15 ರ ಗಡುವಿನ ಒಳಗೆ ಪಂಚಮಸಾಲಿ ಸಮಾಜಕ್ಕೆ 2ಅ ಮೀಸಲಾತಿ ನೀಡಿದೆ ಹೋದರೆ ಮುಂಬರುವ ವಿಧಾನಸಭೆ ಚುನಾವಣೆಯ ಮತಯಂತ್ರದಲಿ ಹಾಲಿ ಸರ್ಕಾರಕ್ಕೆ ನಮ್ಮ ಪಂಚಮಸಾಲಿ ಶಕ್ತಿ ತೋರಿಸುತ್ತೆವೆ. ಎಂದು ರಸ್ತೆ ತಡೆ ಪ್ರತಿಭಟನೆ ಉದ್ದೇಶಿಸಿ ರಮೇಶ ಲವಪ್ಪ ಕೌಜಲಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇವರು ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಭಗೀರಥ (ಕಲ್ಲು …

Read More »

ಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ ಮೂಡಲಗಿ:ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಅವರ ಸಲಹೆಯಂತೆ 2ಎ ಮೀಸಲಾತಿ ಒತ್ತಾಯಿಸಿ ಶನಿವಾರ ಕಲ್ಲೋಳಿ ಪಟ್ಟಣದ ಬಸವೇಶ್ವರ ಸರ್ಕಲ್‍ದಲ್ಲಿ ರಸ್ತೆ ಬಂದ ಮಾಡಿ,ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಯಿತು. ಸಮಾಜದ ಪ್ರಮುಖರಾದ ಬಸವರಾಜ ಕಡಾಡಿ,ರಾವಸಾಹೇಬ ಬೆಳಕೂಡ,ಶಂಕರ ಬೆಳಕೂಡ,ಪ್ರಭು ಕಡಾಡಿ,ಅಜೀತ ಬೆಳಕೂಡ,ಪಂಚಕ್ಷರಿ ಹೆಬ್ಬಾಳ,ಗಿರಮಲ್ಲಪ್ಪ ಸವಸುದ್ದಿ,ಶಂಭೂಲಿಂಗ ಖಾನಾಪೂರ,ಹಣಮಂತ …

Read More »

ಮೂಡಲಗಿ ಸಮೀಪದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ

ಮೂಡಲಗಿ : ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಪ್ರತಿಭಟನೆಗೆ ಕರೆ ನೀಡಿದ ಹಿನ್ನಲೆ ನೂರಾರು ಪಂಚಮಸಾಲಿ ಸಮಾಜದ ಜನರು ಹಾಗೂ ತಾಲೂಕಿನ ವಿವಿಧ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ಮೂಡಲಗಿ ಸಮೀಪದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯನ್ನು ಗುರ್ಲಾಪೂರ ಕ್ರಾಸ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಸಮಾಜದ ಸಂಘಟನೆಯ ಬೆಳಗಾವಿ …

Read More »

ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಮಾ.5ರಂದು

ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಮಾ.5ರಂದು ಮೂಡಲಗಿ : ಪಟ್ಟಣದ ಶ್ರೀ ಸತ್ಯ ಸಾಯಿಬಾಬಾ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀ ಸತ್ಯ ಸಾಯಿಬಾಬಾರ 16ನೇ ವಾರ್ಷಿಕೋತ್ಸವ ಸಮಾರಂಭವು ಮಾ.5 ರಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಡೆಯಲಿದೆ. ಸಮಾರಂಭದ ಸಾನಿದ್ಯವನ್ನು ಸ್ಥಳೀಯ ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ, ಶ್ರೀ ಶ್ರೀಧರಬೋಧಬೋಧ ಸ್ವಾಮೀಜಿಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು, ಶಿರೂಂಜದ ಶ್ರೀ ಬಸವ ಸಮರ್ಥ …

Read More »

ಉದಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ಬೋಧನೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಹೊಸ ಯರಗುದ್ರಿಯ ಶ್ರೀ ಇರಾಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ಧ ಪ್ರಭು ಶಿವಾಚಾರ್ಯ ಮಹಾ ಸ್ವಾಮೀಜಿಗಳು ಹೇಳಿದರು. ಅವರು ತಾಲೂಕಿನ ಅವರಾದಿಯ ಉದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡಿ ಯಶಸ್ಸು …

Read More »

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ.

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ. ಗೋಕಾಕ: 19.50 ಕೋಟಿ ರೂಪಾಯಿ ವೆಚ್ಚದಲ್ಲಿ ತಪಸಿ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಅತೀ ಶೀಘ್ರವಾಗಿ ಉದ್ಘಾಟನೆ ನೆರವೇರಿಸುವುದಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ತಪಸಿ-ಕೆಮ್ಮನಕೋಲ ಗ್ರಾಮದಲ್ಲಿ ಇತ್ತೀಚೆಗೆ ಕರಣೆ ಮಲಕಾರಿ ಸಿದ್ಧೇಶ್ವರ ಜಾತ್ರೆಯ ನಿಮಿತ್ತವಾಗಿ ಜರುಗಿದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ …

Read More »