Breaking News
Home / 2023 / ಜೂನ್ (page 2)

Monthly Archives: ಜೂನ್ 2023

ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡಿ, ಮರಗಳನ್ನು ಬೆಳೆಸಬೇಕಿದೆ- ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ

ಮೂಡಲಗಿ : ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಅವಶ್ಯಕಗಳು ಸಿಗುವುದೇ ಪರಿಸರದಿಂದ ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರವನ್ನು ಸಂಕ್ಷಿಸುವುದು ಅಗತ್ಯ. ಪರಿಸರ ಸಂರಕ್ಷಣೆ ಎನ್ನುವುದು ಸಾಮೂಹಿಕ ಜವಾಬ್ದಾರಿ ಮಾತ್ರವಲ್ಲದದೇ ಪ್ರತಿಯೋರ್ವರ ಹೊಣೆಗಾರಿಕೆಯೂ ಆಗಿದೆ ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು. ಶುಕ್ರವಾರದಂದು ಪಟ್ಟಣದ ಗಂಗಾನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೆಲ್ ಆವರಣದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ನಿರ್ಮಿಸಲಾದ ಕಾವೇರಿ ಉದ್ಯಾನವ ಹಾಗೂ …

Read More »

‘ಸಂಗೀತಕ್ಕೆ ಬಾಷೆ, ಜಾತಿಯ, ಗಡಿಗಳ ಸೀಮೆ ಇಲ್ಲ’ – ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ

ಮೂಡಲಗಿಯ ಬಸವ ರಂಗ ಮಂಟಪದಲ್ಲಿ ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮವನ್ನು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.   ‘ಸಂಗೀತಕ್ಕೆ ಬಾಷೆ, ಜಾತಿಯ, ಗಡಿಗಳ ಸೀಮೆ ಇಲ್ಲ’ ಮೂಡಲಗಿ: ‘ಸಂಗೀತಕ್ಕೆ ಯಾವುದೇ ಭಾಷೆ, ಜಾತಿ, ಧರ್ಮ ಮತ್ತು ಗಡಿಗಳ ಸೀಮೆ ಇಲ್ಲ, ಸಂಗೀತವು ಜನರ ಮನಸ್ಸುಗಳನ್ನು ಕೂಡಿಸುತ್ತದೆ, ಬಾಂಧವ್ಯವನ್ನು ಬೆಳೆಸುತ್ತದೆ’ ಎಂದು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಮಠದ ಪೀಠಾಧಿಪತಿ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು. ಇಲ್ಲಿಯ …

Read More »

ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಶ್ವ ಯೋಗ ದಿನಾಚರಣೆ

ಮೂಡಲಗಿ : ಯೋಗಾಸನದಿಂದ ಶಾರೀರಿಕ ಮಾನಸಿಕ ಸಮತೋಲನದ ಜೊತೆಗೆ ಬೌದ್ಧಿಕವಾಗಿ ಮನುಷ್ಯನ ಸರ್ವೋತೋಮುಖ ಬೆಳವಣಿಗೆಗೆ ಸಹಾಯಕವಾಗಿ ಉಲ್ಲಾಸಮಯ ಜೀವನ ನಮ್ಮದಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಶಿವರಾಜ ಕಾಂಬಳೆ ಹೇಳಿದರು. ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರುಗಿದ ೯ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಮಾನಸಿಕ ದೈಹಿಕ ಒತ್ತಡಗಳಿಂದಾಗಿ ಅನೇಕ ರೋಗ ರುಜನುಗಳಿಗೆ ಆಹ್ವಾನ ನೀಡುವಂತಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಸರಳ …

Read More »

ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ವಿಶ್ವ ಯೋಗ ದಿನಾಚರಣೆ

*ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ವಿಶ್ವ ಯೋಗ ದಿನಾಚರಣೆ * ಮೂಡಲಗಿ: ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿದಿನ ಮಾಡಲು ಕಾರ್ಖಾನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಯಾದವಾಡ ದಾಲ್ಮಿಯಾ ಸಿಮೆಂಟ ಕಾರ್ಖಾನೆ ಘಟಕದ ಮುಖ್ಯಸ್ಥ ಪ್ರಭಾತ್ ಕುಮಾರ್ ಸಿಂಗ್ ಹೇಳಿದರು. ಬುಧವಾರದಂದು ತಾಲೂಕಿನ ಯಾದವಾಡದಲ್ಲಿ ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಆವರಣದಲ್ಲಿ ಏರ್ಪಡಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ …

Read More »

ಬೆಟಗೇರಿಯಲ್ಲಿ ಇನ್ನೂ 4 ಮಂಗಳವಾರ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ

ಬೆಟಗೇರಿಯಲ್ಲಿ ಇನ್ನೂ 4 ಮಂಗಳವಾರ ಕಟ್ಟಾ ವಾರ ಹಿಡಿಯಲಾಗಿದೆ : ಮಾಯಪ್ಪ ಬಾಣಸಿ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ಪ್ರಥಮ ಮಂಗಳವಾರ ವಾರದ ದಿನ ಜೂ.20 ರಂದು ಸಂಜೆ6 ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವ ಕಾರ್ಯಕ್ರಮ ನಡೆಯಿತು. ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ …

Read More »

ಐದು ಮಂಗಳವಾರ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..!

ಐದು ಮಂಗಳವಾರ ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..! *ವರದಿ ಅಡಿವೇಶ ಮುಧೋಳ. ಬೆಟಗೇರಿ: ಬಾಗಿಲು ಹಾಕಿದ ಅಂಗಡಿ-ಮುಂಗಟ್ಟುಗಳು… ಬಿಕೋ ಎನ್ನುತ್ತೀರುವ ಓಣಿಯ ಬೀದಿಗಳು… ಗ್ರಾಮದಲ್ಲಿ ಮೌನ ವಾತಾವರಣ… ಇದ್ಯಾವ ಬಂದ್ ಆಚರಣೆ.! ಎಲ್ಲಿ ಅನ್ನುತ್ತೀರಾ..? ಇದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮಸ್ಥರು ಕಟ್ಟಾ ವಾರ ಹಿಡಿದ ಆಚರಣೆ ಹಿನ್ನಲೆಯಲ್ಲಿ ಇದೇ ಮಂಗಳವಾರ ಜೂ.20 ಸೇರಿದಂತೆ ವಾರದ ಐದು ಮಂಗಳವಾರ ಗ್ರಾಮದಲ್ಲೆಡೆ ಗೋಚರಿಸಲಿರುವ ದೃಶ್ಯವಿದು..!! ಗ್ರಾಮದ …

Read More »

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ಪ್ರಮುಖವಾಗಿ ಕಲಿಕಾಸಕ್ತಿ, ಪ್ರೇರಣೆ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ- ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ

ಮೂಡಲಗಿ: ಉನ್ನತ ಹಂತದ ವ್ಯಾಸಂಗ ಪಡೆಯಲು ಪ್ರಮುಖವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ರಾಷ್ಟ್ರ ವ್ಯಾಪ್ತಿಯಲ್ಲಿ ಆಯ್ಕೆಗಳು ನಡೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ಪ್ರಮುಖವಾಗಿ ಕಲಿಕಾಸಕ್ತಿ, ಪ್ರೇರಣೆ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಪಟ್ಟಣದ ಬಿಇಒ ಕಾರ್ಯಾಲಯಲ್ಲಿ ಜರುಗಿದ ಐಐಟಿ ಮತ್ತು ಕೆಸಿಇಟಿಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ …

Read More »

ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ

*ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ* ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಹಾಲು ಉತ್ಪಾದರಕ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಜೂ. 25ರಂದು ನಡೆಯಬೇಕಿದ ಚುನಾವಣೆಯಲ್ಲಿ ನಾಮಪತ್ರ ವಾಪಸ ಪಡೆಯುವ ದಿನವಾದ ಸೋಮವಾರದಂದು ಸಂಘದ 12 ಜನ ನಿರ್ದೇಶಕರು ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಪಟ್ಟಣದ ಮುಖಂಡರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ …

Read More »

ಐಐಟಿ ಮತ್ತು ಕೆಸಿಇಟಿಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಸತ್ಕಾರ

  ಮೂಡಲಗಿ: ಉನ್ನತ ಹಂತದ ವ್ಯಾಸಂಗ ಪಡೆಯಲು ಪ್ರಮುಖವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ರಾಷ್ಟ್ರ ವ್ಯಾಪ್ತಿಯಲ್ಲಿ ಆಯ್ಕೆಗಳು ನಡೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ಪ್ರಮುಖವಾಗಿ ಕಲಿಕಾಸಕ್ತಿ, ಪ್ರೇರಣೆ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಪಟ್ಟಣದ ಬಿಇಒ ಕಾರ್ಯಾಲಯಲ್ಲಿ ಜರುಗಿದ ಐಐಟಿ ಮತ್ತು ಕೆಸಿಇಟಿಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ …

Read More »

ಪ್ರಧಾನಿ ಮೋದಿಯವರಿಂದ ಭಾರತಕ್ಕೆ ವಿಶ್ವ ಮನ್ನಣೆ : ಚಂದ್ರಶೇಖರ ಕವಟಗಿ

ಪ್ರಧಾನಿ ಮೋದಿಯವರಿಂದ ಭಾರತಕ್ಕೆ ವಿಶ್ವ ಮನ್ನಣೆ : ಚಂದ್ರಶೇಖರ ಕವಟಗಿ ಗೋಕಾಕ : ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಲು ಕಾರ್ಯಕರ್ತರು ಈಗಿಂದಲೇ ಸನ್ನದ್ಧರಾಗಿ ಕೆಲಸಗಳನ್ನು ಮಾಡುವಂತೆ ಬೆಳಗಾವಿ ಬಿಜೆಪಿ ವಿಭಾಗೀಯ ಪ್ರಭಾರಿ ಚಂದ್ರಶೇಖರ ಕವಟಗಿ ಕಾರ್ಯಕರ್ತರಿಗೆ ಕರೆ ನೀಡಿದರು. ಸೋಮವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಜರುಗಿದ ಅರಭಾವಿ ಬಿಜೆಪಿ ಮಂಡಲದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು …

Read More »