Breaking News

Daily Archives: ಆಗಷ್ಟ್ 31, 2024

ಮೂಡಲಗಿ ಪುರಸಭೆ ಅಧ್ಯಕ್ಷೆಗೆ ಸತ್ಕಾರ

  ಮೂಡಲಗಿ ಪುರಸಭೆ ನೂತನ ಅಧ್ಯಕ್ಷೆ ಖುರ್ಷಾದಾ ನದಾಫ ಅವರನ್ನು ಸರಕಾರಿ ಉರ್ದು ಪ್ರೌಢ ಶಾಲೆಯ ಎಸ್‍ಡಿಎಮ್‍ಸಿ ವತಿಯಿಂದ ಸನ್ಮಾನಿಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಅಜೀಜ ಡಾಂಗೆ, ಅನ್ವರ ನದಾಫ, ಹುಸೇನ ಥರಥರಿ, ಅಬ್ದುಲಗಫಾರ ಡಾಂಗೆ, ಶಬ್ಬಿರ ಡಾಂಗೆ ಮುಖ್ಯೋಪಾದಿ ಎನ್.ಕೆ.ಬೋವಿ, ಎ.ಎಲ್. ತಾಹವಿಲ್ದಾರ, ಇದ್ರೀಶ ಕಲಾರಕೊಪ್ಪ, ಪಾಂಡು ಬಂಗೆನ್ನವರ ಉಪಸ್ಥಿತರಿದ್ದರು.  

Read More »

ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ವಿಶೇಷ ತರಬೇತಿ ಶಿಬಿರ

ಪಟ್ಟಣ ಬಸವೇಶ್ವರ ಸೋಸೈಟಿಯ ಸಭಾ ಭವನದಲ್ಲಿ ಪತ್ತಿನ (ಕ್ರೆಡಿಟ್) ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಏರ್ಪಡಿಸಿದ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮತ್ತಿತರರು ಉದ್ಘಾಟಿಸಿದರು. ಮೂಡಲಗಿ: ಸಹಕಾರ ಸಂಘಗಳು ಜನರಿಂದ ಠೇವಣಿ ಸಂಗ್ರಹಿಸಿ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿದ್ದು, ಎಂದಿಗೂ ಠೇವಣಿದಾರರ ವಿಶ್ವಾಸ ಕಳೆದುಕೊಳ್ಳಬಾರದು ಮತ್ತು ಪತ್ತಿನ ಸಹಕಾರ ಸಂಘಗಳು ಪ್ರಸ್ತುತ ದಿನಗಳಲ್ಲಿ ಬಹಳ ಜಾಗೃತದಿಂದ ಕಾರ್ಯನಿರ್ವಹಿಸ ಬೇಕಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ …

Read More »

ಸ.2 ಮತ್ತು3 ರಂದು ಪ್ರವಚನ ಮಂಗಲೋತ್ಸವ

ಸ.2 ಮತ್ತು3 ರಂದು ಪ್ರವಚನ ಮಂಗಲೋತ್ಸವ ಮೂಡಲಗಿ: ತಾಲೂಕಿನ ಅಳಿಮಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಒಂದು ತಿಂಗಳ ಕಾಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಳೆದ 24 ವರ್ಷಗಳಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಜರಗುತ್ತಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮ ಸ.2 ಮತ್ತು 3 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಮಂಡಳಿಯ ಮುರಿಗೆಪ್ಪ ಹುಬ್ಬಳ್ಳಿ ತಿಳಿಸಿದ್ದಾರೆ. ಸೋಮವಾರ ಸ.2 ರಂದು ರಾತ್ರಿ 10 ಗಂಟೆಗೆ ಭಜನಾ …

Read More »

ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ

ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ ಕುಲಗೋಡ: ಇತ್ತಿಚ್ಚಿಗೆ ಮರಣ ಹೊಂದಿದ್ದ ಪರಿಶಿಷ್ಟ ಜಾತಿಯ ಯಲ್ಲವ್ವ ಯಲ್ಲಪ್ಪ ಸಮಗಾರ ಇವರು ಬುಧವಾರ ನಿಧನರಾಗಿದ್ದು ಇವರ ಶವ ಸಂಸ್ಕಾರಕ್ಕೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯಿಂದ ಇಂದು ಸಹಾಯಧನ ಚಕ್ ನೀಡಲಾಯಿತು. ನಿಧನರಾದ ಯಲ್ಲವ್ವ ಅವರ ಪುತ್ರ ಕಲ್ಲಪ್ಪÀ್ಪ ಸಮಗಾರ ಅವರಿಗೆ ಸಹಾಯ ಧನದ 5 ಸಾವಿರ ರೂಗಳ ಚೆಕ್‍ನ್ನು ಕುಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ದೇವರ ಹಾಗೂ ಗ್ರಾಪಂ …

Read More »

ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕ -ರಾಜೇಂದ್ರ ಸಣ್ಣಕ್ಕಿ

ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕ -ರಾಜೇಂದ್ರ ಸಣ್ಣಕ್ಕಿ ಬೆಟಗೇರಿ: ನಾಡಿನ ಭವ್ಯ ಪ್ರತಿಮೆಗಳು ವೀರ ತ್ಯಾಗ ಆದರ್ಶಗಳ ಸಂಕೇತಗಳಾಗಿದ್ದು, ಇಂತಹ ಭವ್ಯ ಶಿಲ್ಪಗಳನ್ನು ತಯಾರಿಸುವಲ್ಲಿ ಹಲವಾರು ಶ್ರಮಜೀವಿಗಳು ಎಲೆಯ ಮರೆಯ ಕಾಯಿಯಂತೆ ದುಡಿದಿರುತ್ತಾರೆ. ಈ ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕವಾಗಿದೆ ಎಂದು ಕೌಜಲಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು. ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಆಶ್ರಯದಲ್ಲಿ …

Read More »