Breaking News
Home / 2024 / ಸೆಪ್ಟೆಂಬರ್

Monthly Archives: ಸೆಪ್ಟೆಂಬರ್ 2024

ಅ.3ರಂದು ಲಿಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಮತ್ತು ಗದ್ದುಗೆ ಉದ್ಘಾಟನೆ

ಅ.3ರಂದು ಲಿಂ. ಸಿದ್ಧಲಿಂಗ ಶ್ರೀಗಳ ಪುಣ್ಯಸ್ಮರಣೆ ಮತ್ತು ಗದ್ದುಗೆ ಉದ್ಘಾಟನೆ ಮೂಡಲಗಿ: ಹಲವು ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಿನ ಅರಭಾವಿಯ ಜಗದ್ಗುರು ಶ್ರೀ ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ ಹನ್ನೊಂದನೆಯ ಪೀಠಾಧಿಪತಿಗಳಾಗಿದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭ ಗುರುವಾರ ಅ.3ರಂದು ಮುಂಜಾನೆ 10=30 ಗಂಟೆಗೆ ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ …

Read More »

ಸಮಾಜದ ಕೆಲವು ಮುಖಂಡರು ತಮ್ಮ ಲಾಭಕ್ಕಾಗಿ ಸಮಾಜದ ಸಂಘಟನೆ ತೆರೆದು ಸಮಾಜದ ಜನರ ದಾರಿ ತಪ್ಪಿಸುತಿದ್ಧಾರೆ- ಸಂಗಮೇಶ ಮಡಿವಾಳರ

ಮೂಡಲಗಿ: ಮಡಿವಾಳ ಸಮಾಜದ ಎಸ್ಸಿ ಮೀಸಲಾತಿಗಾಗಿ ಸಾಕಷ್ಟು ಜನರು ರಾಜ್ಯ ಸರ್ಕಾರದ ಬಾಗಿಲು ತಟ್ಟುವಂತ ಕಾರ್ಯವನ್ನು ಮಾಡಿದ್ದಾರೆ ವಿನಃ ಸಮಾಜದ ಗುರುಗಳಾದ ಬಸವಾಚಿದೇವ ಸ್ವಾಮೀಜಿಯವರಿಂದ ಮಾತ್ರ ಸಮಾಜದ ಏಳಿಗೆಗಾಗಿ ಯಾವುದೇ ಕೊಡುಗೆ ಇಲ್ಲ ಎಂದು ಮಡಿವಾಳ ಸಮಾಜದ ಹಿರಿಯ ಮುಖಂಡ ಹಣಮಂತ ಮಡಿವಾಳರ(ತಲ್ಲೂರ) ಬೇಸರ ವಕ್ತಪಡಿಸಿದರು. ರವಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಸುಮಾರು 18 ಲಕ್ಷ ಮಡಿವಾಳ ಸಮಾಜದ ಜನರು ಇರುವುದರಿಂದ …

Read More »

ಒಂದು ಪುಸ್ತಕ ಹೊರ ತರುವದು ಎಂದರೆ ಅದು ಗಜಪ್ರಸವ ಇದ್ದಂತೆ- ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ : ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ಮಡಿವಾಳ ಪ್ರಕಾಶನ ಕೊಣ್ಣೂರ ಇವರ ಸಹಯೋಗದಲ್ಲಿ ಚೈತನ್ಯ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ   ಮೂಡಲಗಿಯಲ್ಲಿ ಅನಿಲ ಮಡಿವಾಳರ ರವರ “ಭೂಮಿ ನಂಬಿ ಬದುಕೇವು!” ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿತು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿಗಳಾದ ಸಂಗಮೇಶ ಗುಜಗೊಂಡ ರವರು ಒಂದು ಪುಸ್ತಕ ಹೊರ ತರುವದು ಎಂದರೆ ಅದು ಗಜಪ್ರಸವ ಇದ್ದಂತೆ ಎಂದು ಹೇಳುತ್ತಾ ಕವಿಯ …

Read More »

ಭೈರನಟ್ಟಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮೂಡಲಗಿ: ಸಮುದಾಯ ಭವನಗಳು ಜನ ಸಮುದಾಯದ ಪ್ರಗತಿಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು. ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ಬಲಭೀಮ ತೋಟದ ಮಾರುತಿ ದೇವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ …

Read More »

ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ – ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ

ಗೋಕಾಕ- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆಯ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ ೨೦೨೩-೨೪ ನೇ ಸಾಲಿನ ವ್ಯಾಸಂಗ ಮಾಡಿ ಉನ್ನತ ವೃತ್ತಿಪರ ಕೋರ್ಸಗಳಿಗೆ ಆಯ್ಕೆಗೊಂಡ ೫೫ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು, ಈ …

Read More »

ಸಿದ್ಧೇಶ್ವರ ಸ್ವಾಮಿಗಳು ಯುಗ ಕಂಡ ಮಹಾನ ಸಂತ – ಪೂಜ್ಯ ಡಾ. ಶ್ರದ್ಧಾನಂದ ಸ್ವಾಮಿಗಳು

ಮೂಡಲಗಿಯ ಶಿಕ್ಷಣ ಸಂಸ್ಥೆಯ ಕಲ್ಮೇಶ್ವರ ಸಭಾಭವನದಲ್ಲಿ ಲೇಖಕ ಬಾಲಶೇಖರ ಬಂದಿ ಸಂಪಾದಿಸಿದ ಜ್ಞಾನಗಂಧ ಗ್ರಂಥವನ್ನು ಸಾಹಿತಿ ಪ್ರೊ. ಜಯವಂತ ಕಾಡದೇವರ ಲೋಕಾರ್ಪಣೆಗೊಳಿಸಿದರು. ಸದಲಗಾದ ಶ್ರದ್ಧಾನಂದ ಸ್ವಾಮಿಗಳು ಮತ್ತಿತರರು ಚಿತ್ರದಲ್ಲಿ ಇರುವರು. ‘ಜ್ಞಾನಗಂಧ’ ಗ್ರಂಥ ಬಿಡುಗಡೆ ಸಿದ್ಧೇಶ್ವರ ಸ್ವಾಮಿಗಳು ಯುಗ ಕಂಡ ಮಹಾನ ಸಂತ ಮೂಡಲಗಿ: ‘ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮಿಗಳು ಈ ಯುಗ ಕಂಡ ಮಹಾನ ಸಂತರಾಗಿದ್ದರು’ ಎಂದು ಸದಲಗಾದ ಶ್ರೀ ಶಿವಾನಂದ ಗೀತಾಶ್ರಮದ ಪೂಜ್ಯ ಡಾ. ಶ್ರದ್ಧಾನಂದ ಸ್ವಾಮಿಗಳು ಹೇಳಿದರು. …

Read More »

ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ- ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ- ಪುನಸ್ಕಾರವಿರಲಿ. ಮೊದಲು ಗಣೇಶನಿಗೆ ಪೂಜೆ ಸಲ್ಲಿಸುವ ವಾಡಿಕೆಯು ನಮ್ಮ ಪ್ರಾಚಿನ ಕಾಲದಿಂದಲೂ ರೂಢಿಯಲ್ಲಿದೆ. ಅದು ಯಾವುದೇ ಕೆಲಸವಿರಲಿ. ಶುಭ ಕೆಲಸವಿದ್ದಾಗ ಗಣೇಶನನ್ನು ಪೂಜಿಸಿ ಆರಾಧಿಸಿದರೆ ಕಷ್ಟ- ಕಾರ್ಪಣ್ಯಗಳು ದೂರವಾಗಲಿವೆ ಎಂಬ ನಂಬಿಕೆಯು ಈಗಲೂ ನಮ್ಮ ಪೂರ್ವಜರಲ್ಲಿದೆ ಎಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರದಂದು ಪಟ್ಟಣದ ಬಸವ ಮಂಟಪದಲ್ಲಿ ಏಕದಂತ ಉತ್ಸವ ಸಮೀತಿಯಿಂದ ಜರುಗಿದ ಮೂಡಲಗಿ ಮಹಾರಾಜ ಗಣೇಶನ …

Read More »

ಬೈರನಟ್ಟಿ-ಸುಣಧೋಳಿ ರಸ್ತೆಗೆ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮೂಡಲಗಿ: ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿದಾಗ ಅವರು ತೋರುವ ಪ್ರೀತಿ, ವಿಶ್ವಾಸ ಅತ್ಯಂತ ಅಮೂಲ್ಯವಾದದ್ದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ದುರ್ಗಾ ದೇವಿ ದೇವಸ್ಥಾನದ ಎದುರುಗಡೆ ನಿರ್ಮಿಸಲಾದ ಶೆಲ್ಟರ ಕಾಮಗಾರಿಯ ಉದ್ಗಾಟನೆ ನೇರವೇರಿಸಿ ಪರಿಶಿಷ್ಠ ಸಮುದಾಯ ಬಂಧುಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಮಾಜಿಕ, ಸಾಂಸ್ಕøತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡಕುಟುಂಬಗಳಿಗೆ ಅನುಕೂಲವಾಗುವಂತೆ …

Read More »

ಕುಲಗೋಡದಲ್ಲಿ ಸ್ವಚ್ಛಯಡೆಗೆ ದಿಟ್ಟ ಹೆಜ್ಜೆ ಕಾರ್ಯಕ್ರಮದಡಿ ಆರೋಗ್ಯ ಶಿಬಿರ ಉದ್ಘಾಟನೆ

  ಮೂಡಲಗಿ: ಇಂದಿನ ದಿನಗಳಲ್ಲಿ 35 ವರ್ಷದೊಳಗೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಡೆಗಟ್ಟು ನಿಟ್ಟಿನಲ್ಲಿ ಉತ್ತಮ ಆಹಾರ, ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಮೂಡಲಗಿ ತಾಲೂಕಾ ಪಂಚಾಯತ ಇಒ ಎಫ್.ಜಿ.ಚಿನ್ನನವರ ಅವರು ತಿಳಿಸಿದರು. ತಾಲೂಕಿನ ಕುಲಗೋಡ ಗ್ರಾಮದಲ್ಲಿ ಶುಕ್ರವಾರ ಮನರೇಗಾ ಯೋಜನೆಯಡಿ ಸ್ವಚ್ಛಯಡೆಗೆ ದಿಟ್ಟ ಹೆಜ್ಜೆ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಆರೋಗ್ಯದಿಂದ ಇರಬೇಕಾದರೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. …

Read More »

ಲಕ್ಷ್ಮೀ ಮಠಪತಿ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

  ಮೂಡಲಗಿ: ತಾಲೂಕಿನ ರಾಜಾಪುರ ಗ್ರಾಮದ ಜ್ಞಾನಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ 65 ಕೆಜಿ ಬಾಲಕೀಯರ ವಿಭಾಗದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲಿ ್ಲಲಕಿ ್ಷ್ಮಮಠಪತಿ ಪ್ರಥಮ ಸ್ಥಾನ ಪಡೆದು ರಾಜ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಆಶ್ರಯದಲ್ಲಿ ಚಿಕ್ಕೋಡಿ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 2024-25ನೇ ಸಾಲಿನ ಇಲಾಖಾ ಕ್ರೀಡಾಕೂಟಗಳ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕುಸ್ತಿಯಲ್ಲಿ ಈ ವಿದ್ಯಾರ್ಥಿನಿ …

Read More »