Breaking News
Home / 2024 / ಆಗಷ್ಟ್ (page 2)

Monthly Archives: ಆಗಷ್ಟ್ 2024

ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರ

ಗೋಕಾಕ: ಬರುವ ಸೆಪ್ಟಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳತನಕ ನಡೆಯುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಮ್ಮ ಅರಭಾವಿ ಕ್ಷೇತ್ರದಿಂದಲೇ ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆಯಲು ಅಗತ್ಯವಿರುವ ಸಿದ್ಧತೆಗಳನ್ನು ನಡೆಸುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ಎನ್‌ಎಸ್‌ಎಫ್ ಕಾರ್ಯಾಲಯದ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರವನ್ನು …

Read More »

ಶಾಂತವ್ವಾ ಮುತ್ತಪ್ಪ ಸಂಕನ್ನವರ ನಿಧನ

*ನಿಧನ ವಾರ್ತೆ* ಮೂಡಲಗಿ : ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಶಾಂತವ್ವಾ ಮುತ್ತಪ್ಪ ಸಂಕನ್ನವರ (46 )ಮಾಜಿ ಉಪಾಧ್ಯಕ್ಷರು ತಾಲೂಕ ಪಂಚಾಯತ್ ಗೋಕಾಕ, ಬುಧವಾರ ನಿಧನರಾದರು. ಮೃತರು ಪತಿ , ಓರ್ವ ಪುತ್ರ , ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಹಣಬರ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ವ್ಯವಸ್ಥಿತ ಸಂಘಟನೆ ಮುಖ್ಯವಾಗಿದೆ- ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ವ್ಯವಸ್ಥಿತ ಸಂಘಟನೆ ಮುಖ್ಯವಾಗಿದೆ. ಈ ದಿಸೆಯಲ್ಲಿ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧ. ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಮೂಲಕ ಸಮಾಜವು ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಬುಧವಾರದಂದು ನಗರದ ಮಹಾಲಕ್ಷ್ಮೀ ಸಭಾ ಭವನದಲ್ಲಿ ಹಣಬರ (ಯಾದವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ …

Read More »

ಇಂದು ‘ಸುವರ್ಣದೀಪ’ ಕೃತಿ ಬಿಡುಗಡೆ

ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ ಆಶ್ರಯದಲ್ಲಿ ಆ. 28ರಂದು ಸಂಜೆ 5ಕ್ಕೆ ಡಾ. ಮಹಾದೇವ ಪೋತರಾಜ ರಚಿಸಿರುವ ‘ಸುವರ್ಣದೀಪ’ ವಚನ ಸಂಕಲನ ಬಿಡುಗಡೆ ಮತ್ತು ವಿಶ್ವ ಜಾನಪದ ಸಂಸ್ಥಾಪನಾ ದಿನಾಚರಣೆಯನ್ನು  ಮೂಡಲಗಿ ನೀಲಕಂಠೇಶ್ವರ ಮಠದಲ್ಲಿ ಏರ್ಪಡಿಸಿರುವರು. ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ವಹಿಸುವರು. ಉದ್ಘಾಟನೆಯನ್ನು ಡಾ. ರವಿ ಕೊಟನೂರ, ಗ್ರಂಥ ಪಬಿಡುಗಡೆಯನ್ನು ಡಾ. ಚೇತನ ಡಾಗಾ, ಗ್ರಂಥ …

Read More »

ಸತೀಶ ಶುಗರ್ಸ್‌ ಕಾರ್ಖಾನೆಗೆ ‘ಅತ್ಯುತ್ತಮ ಸಕ್ಕರೆ ಕಾರ್ಖಾನೆ ಪ್ರಶಸ್ತಿ’

ಸತೀಶ ಶುಗರ್ಸ್‌ ಕಾರ್ಖಾನೆಗೆ ‘ಅತ್ಯುತ್ತಮ ಸಕ್ಕರೆ ಕಾರ್ಖಾನೆ ಪ್ರಶಸ್ತಿ’ ಮೂಡಲಗಿ: ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿಜಿಯ ಬಳಿಯ ಸತೀಶ ಶುಗರ್ಸ್ ಸಕ್ಕರೆ ಕಾರ್ಖಾನೆಯು 2024ನೇ ಸಾಲಿನ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಾರ್ಖಾನೆಯ ಸಕ್ಕರೆ ಘಟಕ, ಸಹ-ವಿದ್ಯುತ್ ಮತ್ತು ಡಿಸ್ಟಿಲರಿ ಘಟಕಗಳ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮರ್ಥ್ಯದ ಬಳಕೆ, ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ ಪುಣೆಯ ದಿ. ಡೆಕ್ಕನ್ ಶುಗರ್ ಟೆಲ್ನೋಲೊಜಿಸ್ಟ್ ಅಸೋಸಿಯೇಶನ್ ಸಂಸ್ಥೆಯ 69 ನೇ …

Read More »

ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ.

ಮೂಡಲಗಿ: ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪಪಂ ನೂತನ ಆಧ್ಯಕ್ಷ- ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು. ಕಲ್ಲೊಳ್ಳಿ ಪಟ್ಟಣ ಪಂಚಾಯತಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಅವರು, ನಾಗರಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪಂಚಾಯತಿ ಕಮೀಟಿಯವರು ಶ್ರಮಿಸುವಂತೆ …

Read More »

ಭಗವಂತಪ್ಪ ಪಾಂಡಪ್ಪ ಅಂಗಡಿ (96) ನಿಧನ

ನಿಧನ ವಾರ್ತೆ ಮೂಡಲಗಿ: ತಾಲೂಕಿನ ವೆಂಕಟಾಪುರ ಗ್ರಾಮದ ಭಗವಂತಪ್ಪ ಪಾಂಡಪ್ಪ ಅಂಗಡಿ (96) ಮಂಗಳವಾರ ರಂದು ನಿಧನರಾಗಿದ್ದಾರೆ.ಮೃತರ ಅಂತಿಮ ಇಚ್ಛೆಯಂತೆ ಅವರ ದೇಹವನ್ನು ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಗಾವಿ ಕೆಎಲ್ಇ ಜವಾಹರಲಾಲ ನೆಹರು ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ದೇಹದಾನ ನೀಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ಮೃತರಿಗೆ ನಾಲ್ವರು ಪುತ್ರರರು, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ

ಮೂಡಲಗಿ:ತಾಲೂಕಿನ ಕಲ್ಲೋಳಿ ಪಟ್ಟಣದ ಕಾಂಗ್ರೇಸ್ ಮುಖಂಡ ಬಾಳಪ್ಪ ಬೆಳಕೂಡ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭೇಟಿ ನೀಡಿ ಸನ್ಮಾನ ಸ್ವೀಕರಿಸುತ್ತಿರುವುದು.ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ,ಸತೀಶ ಜಾರಕಿಹೊಳಿ,ಬಾಳಪ್ಪ ಬೆಳಕೂಡ,ಬಸವರಾಜ ಕಡಾಡಿ,ರಾವಸಾಹೇಬ ಬೆಳಕೂಡ,ಬಸವರಾಜ ಬೆಳಕೂಡ,ಮಹಾಂತೇಶ ಕಡಾಡಿ,ಪ್ರಭು ಕಡಾಡಿ ಸೇರಿದಂತೆ ಅನೇಕರಿದ್ದರು.

Read More »

ಕಲ್ಲೋಳಿ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರದಂದು ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಹಿಂದುಳಿದ “ಅ”ವರ್ಗ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು …

Read More »