Breaking News

Daily Archives: ಡಿಸೆಂಬರ್ 2, 2024

ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಗೊಳಿಸಲು ರಾಜ್ಯಕ್ಕೆ 326.02 ಕೋಟಿ ಅನುದಾನ

ಮೂಡಲಗಿ: ಕರ್ನಾಟಕದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಆರ್ಥಿಕ ವರ್ಷ 2024-25 ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅನುಷ್ಠಾನಗೊಳಿಸಲು ರಾಜ್ಯಕ್ಕೆ 326.02 ಕೋಟಿ ರೂಪಾಯಿ ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ …

Read More »

ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ

ಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ ಜೊತೆಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತಮ್ಮ ಕುಟುಂಬಗಳ ಸಂರ್ವಾಂಗೀಣ ಬೆಳವಣಿಗೆ ಮಾಡಿಕೊಳ್ಳುವದರೊಂದಿಗೆ ದೇಶದ ಆರ್ಥಿಕತೆಯನ್ನು ಸುಧಾರಿಸುತ್ತಾರೆ ಎಂದು ಮೂಡಲಗಿಯ ಆರ್.ಡಿ.ಎಸ್. ಪಿಯು ಕಾಲೇಜಿನ ಉಪನ್ಯಾಸಕರಾದ ಸಂಗಪ್ಪ ಕುಂಬಾರ ಹೇಳಿದರು. ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಘಟಕದಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಎಂಬ …

Read More »

ತಾಲೂಕಾ ಮಟ್ಟದ ಎನ್.ಎಮ್.ಎಮ್.ಎಸ್ ಶಿಷ್ಯವೇತನ ಅರ್ಹತಾ ಪರೀಕ್ಷೆಯ ಪೂರ್ವಭಾವಿ ತಯಾರಿ ಕಾರ್ಯಾಗಾರ ಕಾರ್ಯಕ್ರಮ

ಮೂಡಲಗಿ : ಬಡತನ, ಅನಕ್ಷರತೆ ನಿರ್ಮೂಲನೆಗೆ ಶಿಕ್ಷಣವೊಂದೇ ಅಸ್ತ್ರ ಎಂದು ದಿವಾಣಿ ಹಾಗೂ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಹೊರವಲಯದಲ್ಲಿರುವ ಮಡ್ಡಿ ಈರಣ್ಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ,ತಾಲೂಕಾ ಮಟ್ಟದ ಎನ್.ಎಮ್.ಎಮ್.ಎಸ್ ಶಿಷ್ಯವೇತನ ಅರ್ಹತಾ ಪರೀಕ್ಷೆಯ ಪೂರ್ವಭಾವಿ ತಯಾರಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು, ನಾವು ಹಳ್ಳಿಯ ಮಕ್ಕಳು ಪಟ್ಟಣದ ಮಕ್ಕಳ ಜೊತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಯಾರಲ್ಲಿಯೂ ಬರಬಾರದು. ಜಗತ್ತಿನಲ್ಲಿ ಹಲವಾರು ಮಹಾನ್‌ …

Read More »

ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ

ಬೀದರ ಡಾ|| ಶಿವಕುಮಾರ ಸ್ವಾಮೀಜಿಗಳಿಂದ ಡಿ.3ರಿಂದ 15ನೇ ಸತ್ಸಂಗ ಸಮ್ಮೇಳನ –ವೇ.ಶಂಕರಯ್ಯಾ ಹಿರೇಮಠ ಮೂಡಲಗಿ: ಪಟ್ಟಣದ ಆರ್.ಡಿ.ಸಂಸ್ಥೆಯ ಆವರಣದಲ್ಲಿ ಮಂಗಳವಾರ ಡಿ.3 ರಿಂದ ಡಿ.9 ರವರಿಗೆ ಏಳು ದಿನಗಳ ಕಾಲ ಬೀದರ ಚಿದಂಬರಾಶ್ರಮ ಸಿದ್ಧಾರೂಢ ಮಠದ ಸದ್ಗುರು ಶ್ರೀ ಡಾ|| ಶಿವಕುಮಾರ ಸ್ವಾಮೀಜಿಗಳಿಂದ 15ನೇ ಸತ್ಸಂಗ ಸಮ್ಮೇಳನ ಜರುಗಲಿದೆ ವೇದಮೂರ್ತಿ ಶ್ರೀ ಶಂಕರಯ್ಯಾ ಹಿರೇಮಠ ಸ್ವಾಮೀಜಿ ತಿಳಿಸಿದರು. ಅವರು ಪಟ್ಟಣದಲ್ಲಿ ಗುರು ಮಠದಲ್ಲಿ 15ನೇ ಸತ್ಸಂಗ ಸಮ್ಮೇಳನದ ಪ್ರಚಾರ ಪತ್ರಿಕೆಯನ್ನು …

Read More »