Breaking News

Daily Archives: ಜನವರಿ 15, 2025

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಗೆ  ತಾಲೂಕಿನ  ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಗೊಡ್ಯಾಗೋಳ ಅವರು ಆಯ್ಕೆ

ಮೂಡಲಗಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಗೆ  ತಾಲೂಕಿನ  ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಗೊಡ್ಯಾಗೋಳ ಅವರು ಆಯ್ಕೆಯಾಗಿದ್ದಾರೆ.  ಅವರು ಕಳೆದ 12 ವರ್ಷಗಳಿಂದ ಕ್ರೀಡೆ, ಕಲೆ, ಸಾಹಿತ್ಯ, ಪರಿಸರ ಸಂರಕ್ಷಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಂತರ ಯುವ ಸಂಘಟನೆ, ಜನ ಜಾಗೃತಿಯಂತಹ ಸಮಾಜ ಸೇವಾ ಕಾರ್ಯವನ್ನು ಪರಿಗಣಿಸಿ  2024 – 25ನೇ …

Read More »

ಸುಣಧೋಳಿ ಕಾಲೇಜುದಲ್ಲಿ ಸುಗ್ಗಿ ಹಬ್ಬದ ಸಂಭ್ರಮ

ಮೂಡಲಗಿ ತಾಲ್ಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂಕ್ರಮಣದ ಸುಗ್ಗಿ ಹಬ್ಬವನ್ನು ಶಿವಾನಂದ ಸ್ವಾಮಿಗಳು ಉದ್ಘಾಟಿಸಿದರು. ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮತ್ತು ಸಿಬ್ಬಂದಿಯವರು ಚಿತ್ರದಲ್ಲಿರುವರು.  ಮೂಡಲಗಿ: ‘ಹಳ್ಳಿಯ ಬದುಕಿನಲ್ಲಿ ವೈಶಿಷ್ಟ್ಯವಾಗಿರುವ ಬುತ್ತಿ ಊಟದಂತೆ ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲಿ ಜ್ಞಾನದ ಬುತ್ತಿ ಕಟ್ಟಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲಿ ಏರ್ಪಡಿಸಿದ್ದ ಸಂಕ್ರಮಣದ …

Read More »