ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕಾ ಘಟಕ ಹಾಗೂ ಸ್ನೇಹ ಸಂಕುಲ ಮೂಡಲಗಿ ಸಹಯೋಗದಲ್ಲಿ ಡಾ.ಮಹಾದೇವ ಜಿ.ಜಿಡ್ಡಿಮನಿ ಅವರ “ಗುರುಶಿಷ್ಯರ ಆತ್ಮಸಖ್ಯ” ಮತ್ತು “ಮಿತ್ರಸಂಮಿತ” ಎರಡು ಕೃತಿಗಳ ಬಿಡುಗಡೆ ಸಮಾರಂಭ ಶುಕ್ರವಾರ ಮೇ.16 ಮುಂಜಾನೆ 10 ಗಂಟೆಗೆ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸೈಟಿ ಸಭಾ ಭವನದಲ್ಲಿ ಜರುಗಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಕುರುಹಿನಶೆಟ್ಟಿ ಸೊಸೈಟಿಯ ಅಧ್ಯಕ್ಷ ಸುಭಾಸ ಬೆಳಕೂಡ ವಹಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ …
Read More »Daily Archives: ಮೇ 15, 2025
ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ
ಗೋಕಾಕ – ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ. ಜೂನ್ , ಜುಲೈ ತಿಂಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ಈಗಲೇ ಅಗತ್ಯವಿರುವ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಳ್ಳಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರದಂದು ಸಂಜೆ ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ಕರೆದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ …
Read More »ಹೇಮರಡ್ಡಿ ಮಲ್ಲಮ್ಮಳ ತ್ಯಾಗ, ದೈವಭಕ್ತಿಯು ಸಮಾಜಕ್ಕೆ ದೊಡ್ಡ ಸಂದೇಶವಾಗಿದೆ’- ಸಚಿವ ರಾಮಲಿಂಗಾರಡ್ಡಿ
ಮೂಡಲಗಿ: ‘ಸಮಾಜಕ್ಕೆ ಆದರ್ಶಪ್ರಾಯವಾಗಿರುವ ಮತ್ತು ಸ್ತ್ರೀಲೋಕದ ಕೀರ್ತಿಯನ್ನು ಹೆಚ್ಚಿಸಿರುವ ಮಹಾ ಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಶ್ಲಾಘನೀಯವಾಗಿದೆ’ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ತಾಲ್ಲೂಕಿನ ಯಾದವಾಡದ ಬಳಿಯ ಕಾಮನಕಟ್ಟಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಮೂರ್ತಿ ಅನಾವರಣಗೊಳಿಸಿ ಮುತ್ತು ವೃತ್ತವನ್ನು ಉದ್ಘಾಟಿಸಿ ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಮಾನವ ಕುಲಕ್ಕೆ ಆದರ್ಶನೀಯವಾಗಿರುವ ಶರಣೆ ಮಲ್ಲಮ್ಮಳ ಮೂರ್ತಿ ಅನಾವರಣ ಮಾಡುವ ಭಾಗ್ಯ …
Read More »