Breaking News

Daily Archives: ಜುಲೈ 24, 2025

ಸಾಲಹಳ್ಳಿಯಲ್ಲಿ ನಾಗನೂರ ಸಹಕಾರಿಯ ೧೫ನೇ ಶಾಖೆ ಉದ್ಘಾಟನೆ 

  ರಾಮದುರ್ಗ: ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ನಾಗನೂರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ೧೫ನೇ ಶಾಖೆಯ ಉದ್ಘಾಟನಾ ಸಮಾರಂಭ ತಾಲೂಕಿನ ಸಾಲಹಳ್ಳಿ ಗ್ರಾಮದ ಮಹಾಂತೇಶ ನಗರದ ಶ್ರೀರಾಮ್ ಕಟ್ಟಡದಲ್ಲಿ ಶುಕ್ರವಾರ ಜು.೨೫ ರಂದು ಮುಂ.೧೧ ಗಂಟೆಗೆ ಜರುಗಲಿದೆ. ಸಮಾರಂಭದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿಪ್ಪಲಕಟ್ಟಿಯ ಶ್ರೀ ಅಭಿನವ ಶಿದ್ಧಲಿಂಗ ಶಿವಾಚಾರ್ಯರು, ಕುಳ್ಳೂರದ ಶ್ರೀ ಬಸವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಶಾಸಕ ಅಶೋಕ ಪಟ್ಟಣ ಮತ್ತು …

Read More »

ಹಣಮಂತ ಗುರಪ್ಪ ತಿಪ್ಪಿಮನಿ ನಿಧನ

ಹಣಮಂತ ಗುರಪ್ಪ ತಿಪ್ಪಿಮನಿ ನಿಧನ ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡದ ನಿವಾಸಿ ಶ್ರೀ ಹಣಮಂತ ಗುರಪ್ಪ ತಿಪ್ಪಿಮನಿ (60) ಅನಾರೋಗ್ಯದಿಂದ ಗುರುವಾರ ಸಂಜೆ 5 ಕ್ಕೆ ನಿಧನರಾಗಿದ್ದಾರೆ. ಇವರು ಘಟಪ್ರಭಾ ಜಗದ್ಗುರು ಗುರುಸಿದ್ದೇಶ್ವರ ಸಹಕಾರಿ ಆಸ್ಪತ್ರೆಯ ರಕ್ತ ತಪಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ.ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ರೈತರು ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ ಕಛೇರಿಗೆ ಭೇಟಿ ನೀಡಿ.!

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಾರ್ವಜನಿಕರು ಮತ್ತು ರೈತರು ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿ ಕಛೇರಿಗೆ ಭೇಟಿ.   ನಿಮ್ಮ ಕೃಷಿ ಜಮೀನು ಮಾಲೀಕ ಮರಣ ಹೊಂದಿದ್ದರೆ, ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಬೆಟಗೇರಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಗೌಡಪ್ಪ ಸಸಾಲಟ್ಟಿ ತಿಳಿಸಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ಕಂದಾಯ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಇ-ಪೌತಿ/ವಾರಸಾ ಖಾತೆ ಆಂದೋಲನದಡಿಯಲ್ಲಿ ತಮ್ಮ ಕೃಷಿ ಜಮೀನನ ಮಾಲೀಕರು ನಿಧನರಾಗಿದ್ದರೆ, ತಮ್ಮ ಕುಟುಂಬದ …

Read More »

ಮಸಗುಪ್ಪಿ ಗ್ರಾಮದಲ್ಲಿ ಜರುಗಿದ ಮಹರ್ಷಿ ಭಗೀರಥ ಮಹಾರಾಜರ ಪ್ರವಚನದ ಸಮಾರೋಪ

ಮಸಗುಪ್ಪಿ- ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ಧಿಗೆ ಬದ್ಧನಿರುವೆ. ಬೆಮುಲ್ ನಲ್ಲಿ ಎರಡು ಸ್ಥಾನಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದ್ದು, ಅದರಲ್ಲಿ ಒಂದನ್ನು ಮೂಡಲಗಿ- ಗೋಕಾಕ ತಾಲ್ಲೂಕಿಗೆ ಸೇರಿರುವ ಭಗೀರಥ- ಉಪ್ಪಾರ ಸಮಾಜಕ್ಕೆ ಸೇರಿರುವ ರೈತಪರ ಕಾಳಜಿಯುಳ್ಳ ವ್ಯಕ್ತಿಯೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭರವಸೆಯನ್ನು ನೀಡಿದರು. ಮೂಡಲಗಿ ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಬುಧವಾರದಂದು ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು …

Read More »