Breaking News

Daily Archives: ಆಗಷ್ಟ್ 18, 2025

ಬೆಟಗೇರಿ ಗ್ರಾಮದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮನ್ನಿಕೇರಿ ಹಾದಿಗೆ ಹೊಂದಿಕೊಂಡಿರುವ ಬೆಟಗೇರಿ ತೋಟದ ಮಡ್ಡಿ ಬೀರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ, ಟಗರಿನ ಕಾಳಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆ.23ರಿಂದ ಆ.24ರವರೆಗೆ ಜರುಗಲಿವೆ. ಆ.23ರಂದು ಮುಂಜಾನೆ 6 ಗಂಟೆಗೆ ಮಡ್ಡಿ ಬೀರಸಿದ್ಧೇಶ್ವರ ದೇವರ ದೇವಸ್ಥಾನದ ಗದ್ಗುಗೆ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಸಾಯಂಕಾಲ 6 ಗಂಟೆಗೆ ಪುರ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು, ಅದೇ ದಿನ ಪರಸ್ಥಳದಿಂದ ವಾಲಗ ಕೂಡುವುದು. ರಾತ್ರಿ …

Read More »

ಬೆಟಗೇರಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ದೇವಸ್ಥಾನದಲ್ಲಿ ಕೃಷ್ಣ ಜನ್ನಾಷ್ಟಮಿಯನ್ನು ಶನಿವಾರ ಆ.16 ರಂದು ಸಂಭ್ರಮದಿಂದ ಆಚರಿಸಲಾಯಿತು. ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ಗದ್ಗುಗೆ ಮಹಾಪೂಜೆ, ನೈವೇದ್ಯ ಸಮರ್ಪಿಸಿದ ಬಳಿಕ ಸ್ಥಳೀಯ ಪುಟ್ಟ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ತೊಟ್ಟಿಲಲ್ಲಿ ಶ್ರೀಕೃಷ್ಣನ ಭಾವಚಿತ್ರದ ಮೂರ್ತಿ ಇಟ್ಟು ತೊಟ್ಟಿಲು ತೂಗುವ ಕಾರ್ಯಕ್ರಮ ಸಡಗರದಿಂದ ನಡೆಯಿತು. ಕೊಳಲು ಹಿಡಿದು ತಲೆಯ ಮೇಲೆ …

Read More »

ಕಲ್ಲೋಳಿ ಪಿಕೆಪಿಎಸ್‍ದಿಂದ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟನೆ

ಮೂಡಲಗಿ: ಕಲ್ಲೋಳಿ ಪಿಕೆಪಿಎಸ್ ದಲ್ಲಿ ಆರಂಭಗೊಂಡ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೀ ಯೋಜನೆಯಾದ ಸಾಮಾನ್ಯ ಸೇವಾ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಬಸಪ್ಪ ಕಪ್ಪಲಗುದ್ದಿ ಹೇಳಿದರು. ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಪೂರೈಸಿದ ಪ್ರತಿಷ್ಠಿತ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಭೀಮಪ್ಪ ಹಣಮಂತ ವ್ಯಾಪಾರಿ ನಿರ್ದೇಶಕರಾದ ಬಸವರಾಜ  …

Read More »

“ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ” ಸತೀಶ ಶುಗರ್ಸ 25 ವರ್ಷಗಳನ್ನು ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ- ತಳವಾರ

ಮೂಡಲಗಿ: ರೈತಬಾಂಧವರ ನಿರಂತರ ಸಹಕಾರ ಮತ್ತು ಕಾರ್ಮಿಕರ ಮತ್ತು ಸಿಬ್ಬಂದಿಯವರ ಅವಿರತ ಸೇವೆಯಿಂದಾಗಿ ಸತೀಶ ಶುಗರ್ಸ ಕಾರ್ಖಾನೆಯು 25 ವರ್ಷಗಳನ್ನು ಪೂರೈಸಿ ಯಶಸ್ಸಿನತ್ತ ಸಾಗುತ್ತಿದೆ ಎಂದು ಸತೀಶ ಶುಗರ್ಸ ಕಾರ್ಖಾನೆಯ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ವೀರು ತಳವಾರ ಹೇಳಿದರು. ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯ ಜರುಗಿದ 79ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡಿ, ಸ್ವಾತಂತ್ರಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಮಹಾನ್ ವ್ಯಕ್ತಿಗಳನ್ನು ಪ್ರತಿಯೋಬ್ಬರು ಸ್ಮರಿಸಬೇಕು, ದೇಶ …

Read More »

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ* *10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

*ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ* *10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ* *ಹಾಲು ಉತ್ಪಾದಕ ಸಹಕಾರಿ ಸಂಘಗಳ ರೈತರಿಗೆ 6 ಕೋಟಿ ರೂಪಾಯಿ ವೆಚ್ಚದ ರಬ್ಬರ್ ಮ್ಯಾಟ್, ವಿದ್ಯುತ್ ಚಾಲಿತ 2 ಹೆಚ್.ಪಿ. ಮೇವು ಕತ್ತರಿಸುವ ಯಂತ್ರಗಳು, ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* ಬೆಳಗಾವಿ: ಜಿಲ್ಲಾ ಹಾಲು ಒಕ್ಕೂಟಕ್ಕೆ …

Read More »

ಹಬ್ಬದಲ್ಲಿ ನಿಯಮ ಪಾಲಿಸಿ – ಸಿಪಿಐ ಶ್ರೀಶೈಲ ಬ್ಯಾಕೂಡ

ಮೂಡಲಗಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಜರುಗಿದ ಶಾಂತಿ ಸಭೆಯಲ್ಲಿ ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿದರು.  ಮೂಡಲಗಿ: ಗಣೇಶೋತ್ಸವ ಮತ್ತು ಈದ್ ಮಿಲಾದ್ ವೇಳೆ ನಿಯಮ ಮೀರಿ ಯಾರೇ ನಡೆದುಕೊಂಡರೆ ನಿರ್ಧಾಕ್ಷಿನಿವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸಬೇಕು. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಹಿಂದೂ-ಮುಸ್ಲಿಂ ಭಾಂದವರು ಶಾಂತಿ ಸೌರ್ಹಾದದಿಂದ ಆಚರಿಸಬೇಕು ಎಂದು ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು. …

Read More »