ಮೂಡಲಗಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನಾಳೆ ಬುಧವಾರ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶಿಸಿದ್ದಾರೆ.
Read More »Daily Archives: ಆಗಷ್ಟ್ 19, 2025
ಬೆಟಗೇರಿ ಸುತ್ತಮುತ್ತ ಸುರಿದ ಮಳೆ, ಬೆಳೆ ನಾಶವಾಗುವ ಆತಂಕದಲ್ಲಿ ರೈತರು.!
ಬೆಟಗೇರಿ ಸುತ್ತಮುತ್ತ ಸುರಿದ ಮಳೆ, ಬೆಳೆ ನಾಶವಾಗುವ ಆತಂಕದಲ್ಲಿ ರೈತರು.! *ಅಡಿವೇಶ ಮುಧೋಳ.ಬೆಟಗೇರಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಹಲವು ದಿನಗಳಿಂದ ಹಗಲು-ರಾತ್ರಿ ಆಗಾಗ ಮಳೆ ಸುರಿದು, ಇಲ್ಲಿಯ ಭೂಮಿಯನ್ನು ತಂಪಾಗಿಸಿದೆ. ಒಂದಡೆ ಇಲ್ಲಿಯ ರೈತರಿಗೆ ಮಾಳೆಯಾಗಿ ಸಂತಸವಾದರೆ ಇನ್ನೂಂದಡೆ ಭೂಮಿಯಲ್ಲಿರುವ ಕೆಲವು ಬೆಳೆ ಹಾಳಾಗುವ ಆತಂಕ ಎದುರಾಗಿದೆ. ಈಗ ಮತ್ತೇ ನಾಲ್ಕೈದು ದಿನಗಳಿಂದ ಬೆಟಗೇರಿ ಗ್ರಾಮದ ಸುತ್ತ-ಮುತ್ತ ಹಗಲಿರುಳು ಆಗಾಗ ಮಳೆ ಧರೆಗಿಳಿಯುತ್ತಿದೆ. …
Read More »ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ
ಗೋಕಾಕ- ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳು ಬಾರದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮಂಗಳವಾರ ಸಂಜೆ ನಗರದ ನಾಕಾ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಗೋಕಾಕ ಮತ್ತು ಮೂಡಲಗಿ …
Read More »ಬಸ್ ಚಾಲಕನ ಮೊಬೈಲ್ ಗೀಳು! ಪ್ರಯಾಣಿಕರ ಜೀವಕ್ಕೆ ಹೊಣೆ ಯಾರು…?
ಬಸ್ ಚಾಲಕನ ಮೊಬೈಲ್ ಗೀಳು! ಪ್ರಯಾಣಿಕರ ಜೀವಕ್ಕೆ ಹೊಣೆ ಯಾರು…? ಮೂಡಲಗಿ : ಕರ್ನಾಟಕರಸ್ತೆ ಸಾರಿಗೆ ಸಂಸ್ಥೆಯ ಗೋಕಾಕ ಘಟಕದ ಚಾಲಕರೊಬ್ಬರು ಮೊಬೈಲ್ ಬಳಕೆ ಮಾಡುತ್ತ ಚಾಲನೆ ಮಾಡಿದ್ದು, ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.ದಿನೇ ದಿನೇ ಅಪಘಾತ ಹೆಚ್ಚುತ್ತಿದು ಕಾರಣ ಮೊಬೈಲ್ ಬಳಕೆ ಒಂದು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಪ್ರಯಾಣಿಕರು. ಗೋಕಾಕ ಘಟಕದ ಚಾಲಕರೊಬ್ಬರು(ಅ, 18)ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿದ್ದು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಶ್ರಾವಣ ಮಾಸದ …
Read More »ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ
ಮೂಡಲಗಿ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮೂಡಲಗಿ ತಾಲೂಕಾ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ಮೂಡಲಗಿ ಶೈಕ್ಷಣಿಕ ತಾಲ್ಲೂಕು ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು ಮಂಗಳವಾರ ರಜೆ ಇರಲಿದೆ ಎಂದು ತಹಸೀಲ್ದಾರ್ ಅವರು ಆದೇಶಿಸಿದ್ದಾರೆ.
Read More »