Breaking News

Daily Archives: ಆಗಷ್ಟ್ 26, 2025

‘ಅಕ್ಕಮಹಾದೇವಿ ವೈರಾಗ್ಯ, ಭಕ್ತಿಗೆ ಹೊಸ ಭಾಷೆ ಬರೆದ ಶರಣೆ’- ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ

ಮೂಡಲಗಿ: ‘ಅಕ್ಕಮಹಾದೇವಿ 12ನೇ ಶತಮಾನದಲ್ಲಿ ಸ್ತ್ರೀವಾದಿ ಚಳುವಳಿಯ ಪ್ರತಿಪಾದಕಿಯಾಗಿ ಶರಣ ಚಳುವಳಿಯ ದಿಟ್ಟ ಶರಣೆಯಾಗಿ ಗುರುತಿಸಿಕೊಂಡಿದ್ದಳು’ ಎಂದು ಹಿಡಕಲ್‍ದ ಸಾಹಿತಿ ಡಾ. ರತ್ನಾ ಎಫ್. ಬಾಳಪ್ಪನವರ ಹೇಳಿದರು. ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದ ಮಾಸಿಕ ಶಿವಾನುಭವ ಗೋಷ್ಠಿಂiÀಲ್ಲಿ ಅಕ್ಕಮಹಾದೇವಿ ಜೀವನ ಕುರಿತು ಉಪನ್ಯಾಸ ನೀಡಿದ ಅವರು ಲೌಕಿಕ ಜಗತ್ತನ್ನು ದಿಕ್ಕರಿಸಿ ವೈರಾಗ್ಯ ಮತ್ತು ಭಕ್ತಿಗೆ ಹೊಸ ಭಾಷೆ ಬರೆದ ಶರಣೆ ಎಂದರು. .ಸಾನ್ನಿಧ್ಯವಹಿಸಿದ್ದ ಅರಭಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ …

Read More »

ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳು

ಮೂಡಲಗಿ:- ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ2025-26ನೇ ಸಾಲಿನ ಮೂಡಲಗಿ ತಾಲೂಕಾ ಮಟ್ಟದ ದಸರಾ ಕ್ರೀಡಾ ಕೂಟದ ಸ್ಪರ್ಧೆಗಳನ್ನು ಸೆ.29ರಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ಜರುಗಿಸಲು ನಿರ್ಧರಿಸಲಾಗಿದ್ದು, ಭಾಗವಹಿಸುವ ತಾಲೂಕಿನ ಕ್ರೀಡಾಪಟುಗಳು ಸೆ.29ರಂದು ಬೆಳಿಗ್ಗೆ 9.00ಗಂಟೆಗೆ ಹಾಜರಿದ್ದು ವಿವಿದ ಸ್ಪರ್ದೆಯಲ್ಲಿ ಭಾಗವಹಿಸುವವರು ಕ್ಯೂ ಆರ್ ಕೋಡ್ ಅಥವಾ ವೆಬ್ ಸೈಟ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು, ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ ಎಂದು …

Read More »

ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ

ಹಬ್ಬ-ಹರಿದಿನಗಳು ನಾಡಿನ ಸಂಸ್ಕøತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ ಬೆಟಗೇರಿ:ಮನುಷ್ಯನು ತಮಗೆ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಶರಣೆ ಕಸ್ತೂರೆವ್ವ ಸಂಗಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆ.26ರಂದು ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಹಬ್ಬ-ಹರಿದಿನಗಳು, ಜಾತ್ರಾಮಹೋತ್ಸವ, ನಾಡಿನ ಸಂಸ್ಕøತಿ, ಸಂಪ್ರದಾಯದ ಪ್ರತೀಕವಾಗಿವೆ. ಸ್ಥಳೀಯರು ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ …

Read More »

ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳಿವೆ:ಈರಯ್ಯ ಹಿರೇಮಠ

ಬೆಟಗೇರಿ:ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಬೆಟಗೇರಿ ಗ್ರಾಮದ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆ.26ರಂದು ನಡೆದ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಎಲ್ಲ ಜಾತಿಜನಾಂಗದವರು ವೀರಭದ್ರನನ್ನು ಪೂಜಿಸಿದ ಇತಿಹಾಸವಿದೆ. ದೇಶದ ದಶ ದಿಕ್ಕುಗಳಲ್ಲೂ ವೀರಭದ್ರಸ್ವಾಮಿ ದೇವಾಲಯಗಳು ಕಾಣುತ್ತವೆ. ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ ಎಂದರು. ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದ …

Read More »