Breaking News
Home / 2025 / ಆಗಷ್ಟ್ (page 6)

Monthly Archives: ಆಗಷ್ಟ್ 2025

*ಮೂಡಲಗಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

ಮೂಡಲಗಿ: ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು. ಗುರುವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ತೆರೆಯಲಾದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದ ಅವರು, ಬಡ ಬಗ್ಗರಿಗೆ ಇದು ಉಪಯುಕ್ತವಾಗಿದೆ ಎಂದು ತಿಳಿಸಿದರು. ಕಡಿಮೆ ದರದಲ್ಲಿ ಬೆಳಗಿನ ಉಪಹಾರ ಮತ್ತು …

Read More »

ಎಸ್.ಎಸ್. ಢವಣ, ರಾಮದುರ್ಗ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಅಭ್ಯರ್ಥಿ

ಬೆಳಗಾವಿ: ಅಕ್ಟೋಬರ್ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಮ್ಮ ಫೆನಲ್ ದಿಂದ ಹಾಲಿ ನಿರ್ದೇಶಕ ಶ್ರೀಕಾಂತ ಢವಣ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರದಂದು ಜರುಗಿದ ರಾಮದುರ್ಗ ತಾಲ್ಲೂಕಿನ ಪಿಕೆಪಿಎಸ್ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, …

Read More »

ಆರ್.ಡಿ.ಎಸ್. ಕಾಲೇಜಿನಲ್ಲಿ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ಸ್ವೀಕಾರ

ಮೂಡಲಗಿ : ಮಾದಕ ವಸ್ತು ಸೇವೆನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದಲ್ಲದೆ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಇಂದಿನ ಯುವಕರು ಡ್ರಗ್ಸ್ ತಂಬಾಕು ಗಾಂಜಾ ಹಾಗೂ ಮಧ್ಯಪಾನಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಅವುಗಳನ್ನು ಸೇವನೆ ಮಾಡುವದರಿಂದ ದೂರ ಇರುವ ಯುವ ಸಮುದಾಯ ಸೃಷ್ಟಿಯಾಗುವುದು ಅವಶ್ಯಕವಿದೆ ಎಂದು ಆರ್.ಡಿ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಂತೋಷ ಪಾರ್ಶಿ ಹೇಳಿದರು. ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ …

Read More »

ಚಂದ್ರಪ್ಪ ರುದ್ರಪ್ಪ ಸಿದ್ನಾಳ ನಿಧನ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ ಚಂದ್ರಪ್ಪ ರುದ್ರಪ್ಪ ಸಿದ್ನಾಳ(60)ಇವರು ಸೋಮವಾರ ಆ.11ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ. ಸಂತಾಪ:ಬೆಟಗೇರಿ ಗ್ರಾಮದ ನಿವಾಸಿ ಚಂದ್ರಪ್ಪ ರುದ್ರಪ್ಪ ಸಿದ್ನಾಳ ಅವರ ನಿಧನಕ್ಕೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಗಣ್ಯರು, ರಾಜಕೀಯ ಮುಖಂಡರು, ಸ್ಥಳೀಯರು ಸಂತಾಪ ಶೋಕ ವ್ಯಕ್ತಪಡಿಸಿದ್ದಾರೆ.

Read More »

90% ಹಾಗೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ

ಮೂಡಲಗಿ : ಪ್ರತಿ ವರ್ಷದಂತೆ ಈ ವರ್ಷವು ಸಹ ನಮ್ಮ ಸಂಸ್ಥೆಯ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿ.ಯು.ಸಿ. ಯಲ್ಲಿ 90% ಹಾಗೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಇದೆ ಆಗಷ್ಟ 17 ರಂದು ಬೆಳಿಗ್ಗೆ 9.00 ಗಂಟೆಗೆ ರವಿವಾರ ಗೋಕಾಕ ನಗರದ ಬ್ಯಾಳಿಕಾಟಾ ಹತ್ತಿರ ಇರುವ ಶೂನ್ಯ ಸಂಪಾನಮಠದ ಸಿದ್ದಲಿಂಗೇಶ್ವರ ಬಿ.ಸಿ.ಎ. ಕಾಲೇಜು …

Read More »

ಕುರಿಗಾಯಿ ಜನರ ಹಿತರಕ್ಷಣೆ ಕಾಯ್ದೆ ಜಾರಿಗಾಗಿ ಒತ್ತಾಯ: ಆ.19ರಂದು ಬೆಂಗಳೂರಿನಲ್ಲಿ ಕುರಿಗಾಹಿಗಳ ಬೃಹತ್ ಪ್ರತಿಭಟನೆ- ಮಾರುತಿ ಮರ್ಡಿ

ಮೂಡಲಗಿ: ರಾಜ್ಯದಲ್ಲಿರುವ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯಗಳ ತಡೆಗಾಗಿ ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸುವ ಸಲುವಾಗಿ ಇದೇ ಆ. 19ರಂದು ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ರಾಜ್ಯದ ಎಲ್ಲ ಕುರಿಗಾಹಿಗಳ ಬೃಹತ್ ಪ್ರತಿಭಟನೆ ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ತಾಲೂಕಿನ ಕಲ್ಲೋಳಿಯ ಮಾರುತಿ ಮರ್ಡಿ ತಿಳಿಸಿದ್ದಾರೆ. ರಾಜ್ಯದಲ್ಲಿರುವ ಕುರಿಗಾರ ಮೇಲೆ ನಿರಂತವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಹಲ್ಲೆ, ಜೀವ ಬೇದರಿಕೆ, …

Read More »

ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ

ಮೂಡಲಗಿ: ಭಾರತದ ಧಾರ್ಮಿಕ ಪರಂಪರೆಯಲ್ಲಿ ಶ್ರೀ ರಾಘವೇಂದ್ರತೀರ್ಥರು ಅಜರಾಮರು, ರಾಯರು ತಪೆÇೀಶಕ್ತಿ, ಭಕ್ತಿ, ಶ್ರದ್ಧಾ, ಮತ್ತು ಮಾನವೀಯ ಮೌಲ್ಯಗಳ ಪ್ರತೀಕ. ಆರಾಧನಾ ದಿನವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಶ್ರದ್ಧೆ, ಶಾಂತಿಮತ್ತು ಧರ್ಮದ ಬೆಳಕನ್ನು ಹರಡುವ ಪವಿತ್ರ ದಿನವಾಗಿದೆ ಸದ್ಬಕ್ತರು ರಾಯರ ತತ್ವಾದರ್ಶಗಳನ್ನು ಅನುಸರಿಸಿ ಬೇಕೆಂದು ಪಟ್ಟಣದ ಸಂಸ್ಕø ತ ವಿದ್ವಾನ್ ಪಂಡಿತ್ ರಾಘವೇಂದ್ರ ಆಚಾರ್ಯ ತೆಗ್ಗಿ ಹೇಳಿದರು. ಸೋಮವಾರದಂದು ಪಟ್ಟಣದ ಲಕ್ಷ್ಮೀನಗರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಜರುಗಿದ …

Read More »

ಶ್ರೀ ಸಾಯಿ ಬಾಬಾರ ಮೂರ್ತಿಗಳ ಮೆರವಣಿಗೆ

ಮೂಡಲಗಿಯಲ್ಲಿ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಕುಂಭಮೇಳ, ಆರತಿ ಸಕಲ ವಾಧ್ಯಗಳೊಂದಿಗೆ ಮೂರ್ತಿ ಹಾಗೂ ಕಳಸದ ಮೆರವಣಿಗೆಯು ಧ್ರೋಣ ಕ್ಯಾಮರಾದಲ್ಲಿ ಸೇರೆಯಾಗಿರುವದು. ಮೂಡಲಗಿ: ಪಟ್ಟಣದ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಲಕ್ಷ್ಮೀ ನಗರದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಸಾಯಿ ಮಂದಿರದ ಉದ್ಘಾಟನೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಶ್ರೀ ಶಿವಬೋಧರಂಗ ಮಠದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಪುಟಪುರ್ತಿ ಸಾಯಿಬಾಬಾರ ಮೂರ್ತಿಗಳಿಗೆ …

Read More »

ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು:ರಮೇಶ ಅಳಗುಂಡಿ

ಬೆಟಗೇರಿ:ವಿಶ್ವಗುರು ಬಸವಣ್ಣನವರ ಮಾತನ್ನು ಚಾಚು ತಪ್ಪದೇ ಪಾಲಿಸಿ ನಡೆದ ನುಲಿ ಚಂದಯ್ಯ ಸಮಾಜ ಸುಧಾರಣೆಗೆಗಾಗಿ ದುಡಿದವರು ಎಂದು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಆ.9ರಂದು ನಡೆದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ ಆದ ಅನುಭವದ ಮುಂದೆ ಯಾವ ಪದವಿಯೂ ದೊಡ್ಡದಲ್ಲ, ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ …

Read More »

‘ನಮ್ಮಲ್ಲಿಯ ಕೊರತೆಯನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು’

ಮೂಡಲಗಿ: ಮೇಲೇಷಿಯಾದಲ್ಲಿ ಜರುಗಿದ ಏಷಿಯಿನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನ್‍ಷಿಪ್‍ದಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಅವರನ್ನು ಮೂಡಲಗಿಯ ಬಣಜಿಗ ಸಮಾಜದ ಮಹಿಳಾ ಘಟಕದಿಂದ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಲಕ್ಷ್ಮೀ ರಡರಟ್ಟಿ ಮಾತನಾಡಿ ‘ನಮ್ಮಲ್ಲಿಯ ಕೊರತೆಯನ್ನು ಋಣಾತ್ಮಕವಾಗಿ ಪರಿಗಣಿಸಿದೆ ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಪ್ರಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ’ ಎಂದಳು. ಬಲಗೈ ಇಲ್ಲದೆ ನಾನು ಜನನವಾಗಿರುವೆ. ನನಗೆ ಕೈ ಇಲ್ಲದರ ಕೊರತೆಯನ್ನು ಧನಾತ್ಮಕವಾಗಿ ತೆಗೆದುಕೊಂಡು ಟೇಕ್ವಾಂಡೋ ಕ್ರೀಡೆಯಲ್ಲಿ …

Read More »