Breaking News
Home / 2025 / ಸೆಪ್ಟೆಂಬರ್

Monthly Archives: ಸೆಪ್ಟೆಂಬರ್ 2025

ಪ್ರಥಮವಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ ಶಿಕ್ಷಕನಿಗೆ ತಾಲೂಕಾಡಳಿದಿಂದ ಸನ್ಮಾನ

ಮೂಡಲಗಿ:ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಕರ್ತವ್ಯವನ್ನು ಕೇವಲ 8 ದಿನಗಳಲ್ಲಿ ಪ್ರ ಪ್ರಥಮವಾಗಿ ಪೂರ್ಣಗೊಳಿಸಿದ ಶಿಕ್ಷಕ ಅಶೋಕ ಬಸಳಿಗುಂದಿ ಅವರನ್ನು ತಾಲೂಕಾ ಆಡಳಿತದಿಂದ ತಹಸೀಲ್ದಾರ ಶ್ರೀಶೈಲ ಗುಡುಮೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಬಿ ಹಿರೇಮಠ ಅವರು ಸತ್ಕರಿಸಿ ಅಭಿನಂದಿಸಿದರು. ಮೂಡಲಗಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರಿಗೆ ಹನ್ನೊಂದನೇ ವಾರ್ಡಿನ …

Read More »

ಅ.2ರಂದು ಬೆಟಗೇರಿ ಗ್ರಾಮದಲ್ಲಿ ಲೋಡೊ ಕಿಂಗ್ ಆಟದ ಸ್ಪರ್ಧೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಮಹಾನವಮಿ ಪ್ರಯುಕ್ತ ಪ್ರಪ್ರಥಮ ಭಾರಿಗೆ ಗುರುವಾರ ಅ.2ರಂದು ಮುಂಜಾನೆ 11:30 ಗಂಟೆಗೆ ಸ್ಥಳೀಯ ಶ್ರೀ ಯಲ್ಲಾಲಿಂಗ ಮಠದಲ್ಲಿ ಲೋಡೊ ಕಿಂಗ್ ಆಟದ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಲವಾರು ಜನ ಪ್ರಾಯೋಜಕರು ಆಕರ್ಷಕ ನಗದು ಬಹುಮಾನ ನೀಡಲಿದ್ದಾರೆ. ತಮ್ಮ ಹೆಸರು ನೊಂದಾಯಿಸಲು ಮತ್ತು ಮಾಹಿತಿಗಾಗಿ ಮೊಬೈಲ್ ನಂ:6362934612, 9535324957, 6360215701 ಸಂಪರ್ಕಿಸಬೇಕು ಎಂದು ಸ್ಫರ್ಧೆ ಆಯೀಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Read More »

ಕಲ್ಲೋಳಿ: ಜಗನ್ಮಾತೆಗೆ ವಿಶೇಷ ಪೂಜೆ  

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ಯ ಪ್ರತಿಷ್ಠಾಪಿಸಿದ ಶ್ರೀ ದುರ್ಗಾ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಚಕ್ರ ರುದ್ರಾಭಿಷೇಕ ಕಾರ್ಯಕ್ರಮ ಮಂಗಳವಾರ ನೆರವೇರಿತು,  ಶ್ರೀ ಮತ್ಯುಂಜಯ ಈರಯ್ಯ ಹಿರೇಮಠ ಹಾಗೂ ಶ್ರೀ ಗುರುಸಿದ್ದಯ್ಯ ಸಿದ್ದಲಿಂಗಯ್ಯ ಹಿರೇಮಠ ಮತ್ತು ಶ್ರೀ ಮಹಾಂತೇಶ ಮಹಾದೇವ ಗೋರೋಶಿ ಅವರು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಿಸಿದರು ಹಾಗೂ ಮುತೈದೆಯರಿಂದ ಗ್ರಾಮದ ಆದಿದೇವತೆ  ಮಹಾಲಕ್ಷ್ಮೀ …

Read More »

*ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ- ಬೌದ್ಧ ಧರ್ಮವು ಜಾತಿ ಪದ್ಧತಿ ವ್ಯವಸ್ಥೆಯನ್ನು‌ ತಿರಸ್ಕರಿಸಿ ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ‌ಹೇಳಿದರು. ಇಲ್ಲಿನ ಎಸ್ಎಸ್ಎಫ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಜರುಗಿದ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನವಯಾನ ಬೌದ್ಧ ಧರ್ಮದ ಆವೃತ್ತಿಯಾಗಿದೆ ಎಂದು ತಿಳಿಸಿದರು. ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಡಾ. ಅಂಬೇಡ್ಕರ್ ಅವರು ಪ್ರಜಾ ಪ್ರಭುತ್ವ ದೇಶವಾಗಲು ಅನೇಕ ಕೊಡುಗೆಗಳನ್ನು …

Read More »

*ನಿಪ್ಪಾಣಿ ಕ್ಷೇತ್ರದಿಂದ ಅಣ್ಣಾಸಾಹೇಬ ಜೊಲ್ಲೆಯವರ ಆಯ್ಕೆ ಖಚಿತ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

ಬೆಳಗಾವಿ:  ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ನಿಯೋಜಿತ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರ ಆಯ್ಕೆ ನಿಶ್ಚಿತವೆಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಸೋಮವಾರದಂದು ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಆಯೋಜಿತಗೊಂಡಿರುವ ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಲು ಈಗಾಗಲೇ ರಣತಂತ್ರಗಳನ್ನು ರೂಪಿಸಿದ್ದೇವೆ ಎಂದು …

Read More »

ಬೆಟಗೇರಿಯಲ್ಲಿ ನವರಾತ್ರಿ ಮಹಾಸಡಗರ

*ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆ.22 ರಿಂದ ಸ್ಥಳೀಯ ಮಹಿಳೆಯರಿಂದ ಶ್ರೀದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ. ಸೆ.22 ರಿಂದ 9 ದಿನಗಳ ಕಾಲ ಸ್ಥಳೀಯ ಮಹಿಳೆಯರು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ದಿನಕ್ಕೂಂದು ಬಣ್ಣದ ಸೀರೆಯುಟ್ಟು ನವೋಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. ದಿನ ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಶುಭ ಗಳಿಗೆಯಲ್ಲಿ ಪೂಜೆ, ಪುನಸ್ಕಾರ, ಗಿಡಕ್ಕೆ …

Read More »

ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆ

ಮೂಡಲಗಿ: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಸಾಯಿ ಸೇವಾ ಸಮಿತಿಯಿಂದ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಿಕ್ಕಮಕ್ಕಳ ತಜ್ಞ ಡಾ|| ವಿಶಾಲ ಪಾಟೀಲ ಚಾಲನೆ ನೀಡಿ ಮಾತನಾಡಿದ ಅವರು ಆಹಾರದಲ್ಲಿ ಮಿತವಾಗಿ ಎಣ್ಣೆ ಬಳಸಿ, ಕರೆದ ಪದಾರ್ಥಗಳಿಂದ ಹಾಗೂ ದುಶ್ಚಟಗಳಿಂದ ದೂರವಿರಿ, ನಿತ್ಯ ನಗೆ, ನಡಿಗೆ, ಪ್ರಾಣಾಯಾಮ ಯೋಗ ದೊಂದಿಗೆ ಸಾಯಿ ಧ್ಯಾನ ಮಾಡುತ್ತ ಉಲ್ಲಾಸ ಉತ್ಸಾಹದ ಜೀವನ ಸಾಗಿಸಿ …

Read More »

‘ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪ್ರಯೋಜನ ಪಡೆಯಿರಿ’- ಆನಂದ ಹಂಜ್ಯಾಗೋಳ

ಮೂಡಲಗಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್‍ಎಸ್)ಯು ಬರುವ ಅ.1ರಿಂದ ಜಾರಿಗೆ ಬರಲಿದೆ. ಜಿಲ್ಲೆಯ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಬೇಕು ಎಂದು ಸಂಘದ ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಜ್ಯಾಗೋಳ ಹೇಳಿದ್ದಾರೆ. ಈ ಯೋಜನೆಯ ಸೌಲಭ್ಯ ಪಡೆಯಲು ಪ್ರತಿ ತಿಂಗಳು ಸರ್ಕಾರ ನಿಗದಿಪಡಿಸಿದ ವಂತಿಗೆಯನ್ನು ಮುಂದಿನ ತಿಂಗಳಿನಿಂದ ಪಾವತಿಸಬೇಕು. ಪತಿ-ಪತ್ನಿ ಇಬ್ಬರೂ …

Read More »

ಬೆಟಗೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಧಾರಾಕಾರ ಮಳೆ

ಬೆಟಗೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಧಾರಾಕಾರ ಮಳೆ *ಅಡಿವೇಶ ಮುಧೋಳ. ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಸೆ.26 ಮತ್ತು ಸೆ.27ರಂದು ಹಗಲುರಾತ್ರಿ ಧಾರಾಕಾರ ಸುರಿದ ಮಳೆಯಿಂದ ಇಲ್ಲಿಯ ಭೂಮಿಯನ್ನು ತಂಪಾಗಿಸಿದೆ. ಒಂದಡೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರಿಗೆ ಮಾಳೆಯಾಗಿ ಸಂತಸವಾದರೆ ಇನ್ನೂದಡೆ ಭೂಮಿಯಲ್ಲಿದ್ದ ಕೇಲವು ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಇಲ್ಲಿಯ ರೈತರಿಗೆ ಎದುರಾಗಿದೆ. ಈ ಮಳೆ ಹಗಲಿರುಳು ಬಿಡದೆ ಸುರಿದು ಗ್ರಾಮದ ಹಾಗೂ ಸುತ್ತಲಿನ …

Read More »

ನಾವು ನಮ್ಮ ಲೆಕ್ಕವನ್ನು ತೋರಿಸಲು ಸಿದ್ಧರಿದ್ದೇವೆ. ನೀವೂ ಕೂಡ ಲೆಕ್ಕವನ್ನು ನೀಡಲು ಸಿದ್ಧರಿರಬೇಕು-ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಹುಕ್ಕೇರಿ: ನಾವು ನಮ್ಮ ಲೆಕ್ಕವನ್ನು ತೋರಿಸಲು ಸಿದ್ಧರಿದ್ದೇವೆ. ನೀವೂ ಕೂಡ ಲೆಕ್ಕವನ್ನು ನೀಡಲು ಸಿದ್ಧರಿರಬೇಕು.‌ ಈ ಚುನಾವಣೆಯೊಳಗೆ ಅಥವಾ ಚುನಾವಣೆ ಮುಗಿದ ಬಳಿಕ ನಾವುಗಳು ಮಾಡಿರುವ ಸಹಕಾರಿ ಸಂಸ್ಥೆಗಳ ಖರ್ಚು- ವೆಚ್ಚಗಳ ಕುರಿತು ಲೆಕ್ಕಪತ್ರ ನೀಡಲು ಯಾವಾಗ ಬೇಕಾದರೂ ನೀಡುತ್ತೇವೆ. ನೀವೂಗಳು ಸಹ ಲೆಕ್ಕಗಳನ್ನು ಸಾರ್ವಜನಿಕರ ಬಳಿ ಮುಂದಿಡುವಂತೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿರೋಧಿಗಳಿಗೆ ಸವಾಲು ಹಾಕಿದರು. ಗುರುವಾರದಂದು ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಹುಕ್ಕೇರಿ ಗ್ರಾಮೀಣ …

Read More »