Breaking News

Daily Archives: ಸೆಪ್ಟೆಂಬರ್ 4, 2025

ಶಿಕ್ಷಕ ಮಾರುತಿ ದೇಸಾಯಿಗೆ ರಾಜ್ಯಮಟ್ಟದ ಪ್ರಶಸ್ತಿ

ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಶಾಲೆಯ ಹಿಂದಿ ಶಿಕ್ಷಕ ಮಾರುತಿ ದೇಸಾಯಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ 2025 ಪ್ರಶಸ್ತಿಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 14 ರಂದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆಯುವ ರಾಜ್ಯ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಮಾರುತಿ ದೇಸಾಯಿಯವರು ಮೂಲತ ಗೋಕಾಕ ಗ್ರಾಮದವರಾಗಿದ್ದು ರಾಜ್ಯ …

Read More »

ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ “ಕಬ್ಬಿನಲ್ಲಿ ಗೊಣ್ಣೆಹುಳು ನಿರ್ವಹಣೆಕುರಿತು ವಿಚಾರ ಸಂಕೀರಣ”

  ಮೂಡಲಗಿ: ಕಬ್ಬಿನಲ್ಲಿ ಬೆಳೆಯಲ್ಲಿನ ಗೊಣ್ಣೆಹುಳು ನಿರ್ವಹಣೆಯನ್ನು ರೈತರು ಕೃಷಿ ತಜ್ಞ ಹಾಗೂ ಬೆಳೆಗಳ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಬೆಳೆಗಳ ನಿರ್ವಹಣೆಯ ಮಾಹಿತಿ ಪಡೆದುಕೊಂಡು ಬೆಳೆಗಳಿಗೆ ಕೀಟ ಭಾದೆ ಬರದಂತೆ ತಡೆದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ಬೆಳಗಾವಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಚ್.ಡಿ.ಕೋಳೆಕರ ಹೇಳಿದರು ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಸತೀಶ ಶುಗರ್ಸ್ ಕಾರ್ಖಾನೆಯ …

Read More »

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಆಡಳಿತದ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕ – ಜಿ. ಎಸ್. ಮನ್ನಾಪೂರ

ಮೂಡಲಗಿ : ನಮ್ಮ ಭಾರತ ದೇಶದ ಪ್ರಜಾಪ್ರಭುತ್ವದ ಆಡಳಿತ ಪ್ರಕ್ರಿಯೆಯಲ್ಲಿ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು ನಮ್ಮ ದೇಶ ವಿಶ್ವದಲ್ಲೇ ಬಲಾಡ್ಯವಾದ ಸಂವಿದಾನ ಹೊಂದಿದ್ದು ಸಂವಿದಾನದ ಅಡಿಯಲ್ಲಿ ರಾಜಕೀಯ ಆಡಳಿತ ಚಟುವಟಿಕೆಗಳು ಜರಗುತ್ತಿದ್ದು ಆಡಳಿತ ದೇಶದ ಸಮಗ್ರತೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವದರಿಂದ ಆಡಳಿತದ ಮಹತ್ವ ರಾಜಕೀಯ ವಾಸ್ತವಿಕ ರೂಪರೇಷಗಳನ್ನು ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವದು ಇಂದಿನ ಅಗತ್ಯವಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ …

Read More »

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

ಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ ತಾಯಿಗಳ ನೋವು, ಕಷ್ಟ, ಶ್ರಮ ಅರ್ಥೈಸಿಕೊಂಡು ಗುರುಗಳ ಸನ್ಮಾರ್ಗದಲ್ಲಿ ನಡೆದಾಗ ಜೀವನ ಎಂಬ ಬದುಕಿಗೆ ಒಂದು ಅರ್ಥ ಒದಗಿಸಲು ಸಾಧ್ಯವಿದೆ. ಬದುಕು ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ ಇಂದಿನ ದಿನದಲ್ಲಿ ಎಷ್ಟೇ ಪ್ರಯತ್ನಿಸಿದರೂ ನೌಕರಿ ಎಂಬ ಕನಸ್ಸುಗಳನ್ನು ಸಾಕಾರಗೊಳಿಸಿಕೊಳ್ಳಲು ಆಗುತ್ತಿಲ್ಲ ಪ್ರಯತ್ನ ನಿರಂತರವಾಗಿದ್ದರೆ ಮಾತ್ರ ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಯವಿದೆ ಎಂದು …

Read More »

ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿ: ಎಮ್.ಪನೀಶಾಯಣ್ಣ

ಬೆಟಗೇರಿ:ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ಗ್ರಾಮೀಣ ವಲಯದ ಕೆನರಾ ಬ್ಯಾಂಕನಿಂದ ದೊರಕುವ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಕ್ಕೋಡಿ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‍ನ ಎಜಿಎಮ್ ಎಮ್.ಪನೀಶಾಯಣ್ಣ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಇತ್ತೀಚೆಗೆ ನಡೆದ ಸಾಲ ಮರುಪಾವತಿ ಮತ್ತು ಸ್ವ ಸಹಾಯ ಸಂಘಗಳ ಮೇಳ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬ್ಯಾಂಕಿನಿಂದ ಪಡೆದ ಸಾಲವನ್ನು …

Read More »

ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಗುಂಪಿಗೆ ಅಧಿಕಾರ ಚುಕ್ಕಾಣಿ,

ಹುಕ್ಕೇರಿ: ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ಅಧಿಕಾರಕ್ಕೆ ಬರಲಿದ್ದು, ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ನಾವೇ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು. ಗುರುವಾರದಂದು ಹುಕ್ಜೇರಿ ಪಟ್ಟಣದ ರವದಿ ಫಾರ್ಮ್ ಹೌಸ್ ನಲ್ಲಿ ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ ಜರುಗಿದ ಹುಕ್ಕೇರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, …

Read More »