ಮೂಡಲಗಿ: ತಾಲ್ಲೂಕಿನ ಅರಭಾವಿಮಠದ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠದ ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಗಳ 2ನೇ ಪುಣ್ಯಸ್ಮರಣೋತ್ಸವ ಹಾಗೂ ಶಿವಾನುಭವ ಕಾರ್ಯಕ್ರಮವು ಸೆ.21ರಂದು ಸಂಜೆ 6ಕ್ಕೆ ಏರ್ಪಡಿಸಿರುವರು. ಸಮಾರಂಭದ ಸಾನ್ನಿಧ್ಯವನ್ನು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ವಹಿಸುವರು. ಕಡಕೋಳದ ವೀರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಬೆಲ್ಲದಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ ಸಮ್ಮುಖವಹಿಸುವರು. ಸೆ. 22ರಂದು ಬೆಳಿಗ್ಗೆ 8ಕ್ಕೆ ಸಿದ್ಧಲಿಂಗ ಸ್ವಾಮೀಜಿಯವರ ಗದ್ದುಗೆಗೆ ಪೂಜೆ, ಅಭಿಷೇಕ ಜರುಗುವುದು. ಬೆಳಿಗ್ಗೆ …
Read More »