Breaking News

Daily Archives: ಸೆಪ್ಟೆಂಬರ್ 30, 2025

ಪ್ರಥಮವಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿದ ಶಿಕ್ಷಕನಿಗೆ ತಾಲೂಕಾಡಳಿದಿಂದ ಸನ್ಮಾನ

ಮೂಡಲಗಿ:ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಕರ್ತವ್ಯವನ್ನು ಕೇವಲ 8 ದಿನಗಳಲ್ಲಿ ಪ್ರ ಪ್ರಥಮವಾಗಿ ಪೂರ್ಣಗೊಳಿಸಿದ ಶಿಕ್ಷಕ ಅಶೋಕ ಬಸಳಿಗುಂದಿ ಅವರನ್ನು ತಾಲೂಕಾ ಆಡಳಿತದಿಂದ ತಹಸೀಲ್ದಾರ ಶ್ರೀಶೈಲ ಗುಡುಮೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಬಿ ಹಿರೇಮಠ ಅವರು ಸತ್ಕರಿಸಿ ಅಭಿನಂದಿಸಿದರು. ಮೂಡಲಗಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರಿಗೆ ಹನ್ನೊಂದನೇ ವಾರ್ಡಿನ …

Read More »

ಅ.2ರಂದು ಬೆಟಗೇರಿ ಗ್ರಾಮದಲ್ಲಿ ಲೋಡೊ ಕಿಂಗ್ ಆಟದ ಸ್ಪರ್ಧೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಮಹಾನವಮಿ ಪ್ರಯುಕ್ತ ಪ್ರಪ್ರಥಮ ಭಾರಿಗೆ ಗುರುವಾರ ಅ.2ರಂದು ಮುಂಜಾನೆ 11:30 ಗಂಟೆಗೆ ಸ್ಥಳೀಯ ಶ್ರೀ ಯಲ್ಲಾಲಿಂಗ ಮಠದಲ್ಲಿ ಲೋಡೊ ಕಿಂಗ್ ಆಟದ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಲವಾರು ಜನ ಪ್ರಾಯೋಜಕರು ಆಕರ್ಷಕ ನಗದು ಬಹುಮಾನ ನೀಡಲಿದ್ದಾರೆ. ತಮ್ಮ ಹೆಸರು ನೊಂದಾಯಿಸಲು ಮತ್ತು ಮಾಹಿತಿಗಾಗಿ ಮೊಬೈಲ್ ನಂ:6362934612, 9535324957, 6360215701 ಸಂಪರ್ಕಿಸಬೇಕು ಎಂದು ಸ್ಫರ್ಧೆ ಆಯೀಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Read More »

ಕಲ್ಲೋಳಿ: ಜಗನ್ಮಾತೆಗೆ ವಿಶೇಷ ಪೂಜೆ  

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ಯ ಪ್ರತಿಷ್ಠಾಪಿಸಿದ ಶ್ರೀ ದುರ್ಗಾ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಚಕ್ರ ರುದ್ರಾಭಿಷೇಕ ಕಾರ್ಯಕ್ರಮ ಮಂಗಳವಾರ ನೆರವೇರಿತು,  ಶ್ರೀ ಮತ್ಯುಂಜಯ ಈರಯ್ಯ ಹಿರೇಮಠ ಹಾಗೂ ಶ್ರೀ ಗುರುಸಿದ್ದಯ್ಯ ಸಿದ್ದಲಿಂಗಯ್ಯ ಹಿರೇಮಠ ಮತ್ತು ಶ್ರೀ ಮಹಾಂತೇಶ ಮಹಾದೇವ ಗೋರೋಶಿ ಅವರು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಿಸಿದರು ಹಾಗೂ ಮುತೈದೆಯರಿಂದ ಗ್ರಾಮದ ಆದಿದೇವತೆ  ಮಹಾಲಕ್ಷ್ಮೀ …

Read More »

*ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ*

ಗೋಕಾಕ- ಬೌದ್ಧ ಧರ್ಮವು ಜಾತಿ ಪದ್ಧತಿ ವ್ಯವಸ್ಥೆಯನ್ನು‌ ತಿರಸ್ಕರಿಸಿ ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ‌ಹೇಳಿದರು. ಇಲ್ಲಿನ ಎಸ್ಎಸ್ಎಫ್ ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಜರುಗಿದ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನವಯಾನ ಬೌದ್ಧ ಧರ್ಮದ ಆವೃತ್ತಿಯಾಗಿದೆ ಎಂದು ತಿಳಿಸಿದರು. ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಡಾ. ಅಂಬೇಡ್ಕರ್ ಅವರು ಪ್ರಜಾ ಪ್ರಭುತ್ವ ದೇಶವಾಗಲು ಅನೇಕ ಕೊಡುಗೆಗಳನ್ನು …

Read More »