Breaking News

Daily Archives: ನವೆಂಬರ್ 14, 2025

ಸಾಲುಮರದ ತಿಮ್ಮಕ್ಕಳಿಗೆ ಶ್ರದ್ಧಾಂಜಲಿ ಅರ್ಪಣೆ: ಪರಿಸರಕ್ಕೆ ಸಾಲುಮರದ ತಿಮ್ಮಕ್ಕಳ ಕೊಡುಗೆ ಅಪಾರ

ಮೂಡಲಗಿ: ಮೂಡಲಗಿಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕಳ ನಿಧನಕ್ಕೆ ಮೂಡಲಗಿಯ ನಿಸರ್ಗ ಫೌಂಡೇಶನ, ಯುವ ಜೀವನ ಸೇವಾ ಸಂಸ್ಥೆ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತಸಂಘ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮೂಲಕ ಶುಕ್ರವಾರ ಮೊಂಬತ್ತಿಗಳನ್ನು ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಗಳ ಮಳೆಗೈದು ಶ್ರದ್ಧಾಂಜಲಿ ಅರ್ಪಿಸಿದರು. ಸಾಹಿತಿ ಬಾಲಶೇಖರ ಬಂದಿ ನುಡಿ ನಮ್ಮನವನ್ನು ಸಲ್ಲಿಸಿ ಮಾತನಾಡಿದ ಅವರು ‘ಸಾಲುಮರದ ತಿಮ್ಮಕ್ಕಳು ಮಕ್ಕಳಿಲ್ಲ ಎನ್ನುವ ಕೊರಗನ್ನು ರಸ್ತೆ ಬದಿಯಲ್ಲಿ ಸಸಿಗಳನ್ನು …

Read More »

ಬೆಟಗೇರಿ ಕರವೇ ಘಟಕದವರಿಂದ ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಸಂತಾಪ

ಬೆಟಗೇರಿ: ಸಾಲು ಮರದ ತಿಮ್ಮಕ್ಕ ತಮಗೆ ಮಕ್ಕಳಿಲ್ಲದ ಕರಣಕ್ಕೆ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಭಾವಿಸಿ ಪೋಷಿಸಿ ಬೆಳಸಿದಾಕೆ. ಸಾಲು ಮರದ ತಿಮ್ಮಕ್ಕ ಅನಕ್ಷರಸ್ಥೆಯಾಗಿದ್ದರೂ ಸಹ ಪರಿಸರ ಬಗ್ಗೆ ಅಪಾರ ಕಾಳಜಿಯುಳ್ಳ ವೃಕ್ಷ ಮಾತೆಯಾಗಿದ್ದರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಅವರು ನ.14ರಂದು ಸಾಲು …

Read More »

ಮಕ್ಕಳ ಪೋಷಕರ ಮತ್ತು ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವಿರಬೇಕು:ರಮೇಶ ಅಳಗುಂಡಿ

ಬೆಟಗೇರಿ:ಪ್ರತಿ ಮನೆಯಲ್ಲಿ ಶಾಲಾ ಮಕ್ಕಳ ಓದಿನ ಕಡೆ ತಂದೆ, ತಾಯಿ ವಿಶೇಷ ಗಮನ ಹರಿಸಿದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸುವುದರಲ್ಲಿ ಎರಡು ಮಾತಿಲ್ಲ, ಸರಕಾರಿ ಶಾಲೆಯಲ್ಲಿ ದೊರಕುವ ಶೈಕ್ಷಣಿಕ ಸಹಾಯ, ಸೌಲಭ್ಯಗಳು ಯಾವುದೇ ಖಾಸಗಿ ಶಾಲೆಗಳಲ್ಲಿ ದೊರಕುವುದಿಲ್ಲಾ ಎಂದು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ನ.14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ …

Read More »

ಸಾಮಾಜಿಕ ಜೀವನದಲ್ಲಿ ಸಹಕಾರ ಪ್ರಮುಖವಾಗಿದೆ: ಬಸವರಾಜ ಮಾಳೇದ

ಬೆಟಗೇರಿ: ಸಹಕಾರ ತತ್ವದಡಿ ಗ್ರಾಮೀಣ ವಲಯದಲ್ಲಿ ಸಹಕಾರಿ ಸಂಘ, ಸಂಸ್ಥೆಗಳ ನೀಡುತ್ತಿರುವ ಸಹಕಾರದ ಸೇವೆ ಅತ್ಯಂತ ಮಹತ್ವದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿಯಲ್ಲಿ ಶುಕ್ರವಾರ ನ.14 ರಂದು ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಪ್ರಯುಕ್ತ ಸಹಕಾರಿ ಧ್ವಜಾರೋಹಣ ನೆರವೇರಿಸಿ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, …

Read More »

ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’

ಎಂಪಿಎಲ್-2025 ಕ್ರಿಕೆಟ್ ಟೂರ್ನಿ ಉದ್ಘಾಟನೆ ‘ಕ್ರೀಡಾಕೂಟಗಳಿಂದ ಸೌಹಾರ್ದತೆ ಬೆಳೆಯುತ್ತದೆ’  -ಚನ್ನಬಸು ಬಡ್ಡಿ ಮೂಡಲಗಿ: ‘ಕ್ರೀಡಾಕೂಟಗಳಿಂದ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಯುತ್ತದೆ’ ಎಂದು ಶ್ರೀ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಚನ್ನಬಸು ಬಡ್ಡಿ ಹೇಳಿದರು. ಇಲ್ಲಿಯ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಮಾರ್ನಿಂಗ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಹಯೋಗದಲ್ಲಿ ಏರ್ಪಡಿಸಿರುವ ‘ಎಂಪಿಎಲ್-2025’ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ …

Read More »