*ಕೌಜಲಗಿ.* (ತಾ.ಗೋಕಾಕ) ಕೌಜಲಗಿ ಭಾಗದ ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲು ನಾಡ ಕಚೇರಿಯನ್ನು ಸ್ವಂತ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಶುಕ್ರವಾರ, ಇಲ್ಲಿನ ಬಸ್ ನಿಲ್ದಾಣದ ಬಳಿ (ಅಂಬೇಡ್ಕರ್ ವೃತ್ತ ಹತ್ತಿರ) 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ನಾಡ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಈ ಭಾಗದ ಜನಪ್ರಿಯ ಶಾಸಕರಾದ …
Read More »Daily Archives: ನವೆಂಬರ್ 22, 2025
ಅಕ್ಷತಾ ಖಣದಾಳೆ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮೂಡಲಗಿ : ಮೂಡಲಗಿಯ ವಿಬಿಎಸ್‍ಎಂ ಶಾಲೆಯಲ್ಲಿ ಜರುಗಿದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗದಲ್ಲಿ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಅಕ್ಷತಾ ಖಣದಾಳೆ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ವಿದ್ಯಾರ್ಥಿನಿಯನ್ನು ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ಮುಖ್ಯೋಪಾದ್ಯರಾದ ಸಂಗಮೇಶ ಹಳ್ಳೂರ ಮಾರ್ಗದರ್ಶಕರಾದ ಪ್ರಕಾಶ ಹುಣಶೀಗಿಡದ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Read More »
IN MUDALGI Latest Kannada News