ಬೆಟಗೇರಿ:ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್‍ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಗುಲಬುರ್ಗಾ ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ.ನಿಕೀಲ ಜ್ಯೋಶಿ ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸೆ.10ರಂದು ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ಹೈನುಗಾರಿಕೆ ರೈತರ ಬದುಕಿನ …
Read More »Yearly Archives: 2025
ದಿ.14 ರಂದು ಬೃಹತ ಸರ್ವ ಧರ್ಮ ವಧು-ವರರ ಮುಖಾಮುಖಿ ಸಮಾವೇಶ
ಮೂಡಲಗಿ : ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಷನ್ ಗೋಕಾಕ್ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.14ರಂದು ಬೆಳಗಾವಿ ನಗರದಲ್ಲಿ ಉಚಿತವಾಗಿ ಬೃಹತ ಸರ್ವ ಧರ್ಮ ವಧು-ವರರ ಮುಖಾಮುಖಿ ಸಮಾವೇಶ ಏರ್ಪಡಿಸಲಾಗಿದೆ ಎಂದು ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಶನ್ ರಾಜ್ಯಾಧ್ಯಕ್ಷ ಬಾಲಚಂದ್ರ ಬನವಿ ತಿಳಿಸಿದರು. ಮಂಗಳವಾರದಂದು ಪಟ್ಟಣದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಧು-ವರರ ಸಮಾವೇಶವನ್ನು ಬೆಳಿಗ್ಗೆ 10-00 ರಿಂದ ಸಂಜೆ 4-00 ಫಂಟೆಯವರೆಗೆ ಬೆಳಗಾವಿಯ ಶ್ರೀ ಶಿವಬಸವ ಶಿವಾಲಯ …
Read More »ಸೈಕ್ಲಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಸದ್ಗುರು ಯಾಲ್ಲಾಲಿಂಗ ಪಿಯು ಕಾಲೇಜಿನ ಕಲಾ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಕುಮಾರ ಕೆಂಚಪ್ಪ ಮಯತ್ತೆಪ್ಪ ಬೋರಗುಂಡಿ ಇತನು ಮರಡಿಮಠದಲ್ಲಿ ಸೆ.8ರಂದು ನಡೆದ ಜಿಲ್ಲಾ ಮಟ್ಟದ ಸೈಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸೈಕಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ. ಸ್ಥಳೀಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಪ್ರಾಚಾರ್ಯರು ಮತ್ತು ಸಿಬ್ಬಂದಿ ಕಾಲೇಜು ವಿದ್ಯಾರ್ಥಿ ಕೆಂಚಪ್ಪ ಬೋರಗುಂಡಿ ಸಾಧನೆಗೆ ಮೆಚ್ಚುಗೆ …
Read More »ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಿಸಿಕೊಡುವ ದೃಷ್ಟಿಯಿಂದ ಪ್ರಚಾರ ಸಭೆಯನ್ನು ನಡೆಸಿರುವ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅವಿರೋಧ ಆಯ್ಕೆಯ ಸಂಬಂಧ ಅಲ್ಲಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಜರುಗಿದ ಖಾನಾಪೂರ ತಾಲ್ಲೂಕು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಅಲ್ಲಿನ ಶಾಸಕ ವಿಠ್ಠಲ ಹಲಗೇಕರ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠಯವರೊಂದಿಗೆ ಸುದೀರ್ಘ ಚರ್ಚೆಯನ್ನು ನಡೆಸಿದರು. ಅಕ್ಟೋಬರ್ …
Read More »*ಬೆಳಗಾವಿಯ ಅರಿಹಂತ ಆಸ್ಪತ್ರೆಯಲ್ಲಿ ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರ*
ಬೆಳಗಾವಿ: ಚಿಕ್ಕಮಕ್ಕಳ ಹೃದಯ ಸಂಬಂಧಿತ ಉಚಿತ ತಪಾಸಣಾ ಶಿಬಿರವನ್ನು ಅರಿಹಂತ ಆಸ್ಪತ್ರೆ, ನೆಹರು ನಗರ, ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸಮಾಲೋಚನೆ ನೀಡಲಾಗುವುದು. ಜೊತೆಗೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಚಿಕಿತ್ಸಾ ಸೌಲಭ್ಯ ಸಹ ಲಭ್ಯವಿರುತ್ತದೆ. ಶಿಬಿರವು 13 ಸೆಪ್ಟೆಂಬರ್ 2025, ಶನಿವಾರ, ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಚಿಕ್ಕಮಕ್ಕಳ ಹೃದಯ ತಜ್ಞ ಡಾ. ಗೋವಿಂದ್ …
Read More »ಶಿಕ್ಷಕರು ರಾಷ್ಟ್ರದ ನಿಜವಾದ ಕಂಬಗಳು-ವೆಂಕಟೇಶ ಪಾಟೀಲ
ಮೂಡಲಗಿ: ಶಿಕ್ಷಕರು ರಾಷ್ಟ್ರದ ನಿಜವಾದ ಕಂಬಗಳು, ಅವರ ಅಮೂಲ್ಯ ಸೇವೆಗಳನ್ನು ಸಮಾಜವೇ ಗುರುತಿಸುತ್ತದೆ. ಮಕ್ಕಳಿಗೆ ಮಾಹಿತಿ ಮಾತ್ರ ತರಗತಿಯಲ್ಲಿ ನೀಡುವ ಬದಲು, ಪ್ರೇರಣೆಯನ್ನು ನೀಡಿ, ಅವರ ಮನಸ್ಸಿನಲ್ಲಿ ಸೃಜನಶೀಲತೆ, ವಿಶ್ಲೇಷಣಾ ಮನೋಭಾವವನ್ನು ಹೆಚ್ಚಿಸಿರಿ” ಎಂದು ಶ್ರೀ ಶ್ರೀನಿವಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ್‍ಎಚ್.ಪಾಟೀಲ ಹೇಳಿದರು. ಅವರ ಪಟ್ಟಣದ ಶ್ರೀ ಶ್ರೀನಿವಾಸ ಶಾಲೆಯಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಈ …
Read More »ಗೋಕಾಕದಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ನಿಮಿತ್ತ ಜಿಲ್ಲೆಯ ಇತರೇ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*
ಗೋಕಾಕ: ದೇವರು ಮತ್ತು ಸಹಕಾರ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯುವುದಾಗಿ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಾಸ ವ್ಯಕ್ತಪಡಿಸಿದರು. ಸೋಮವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಬ್ಯಾಂಕಿನ ಪ್ರಚಾರಾರ್ಥವಾಗಿ ಜಿಲ್ಲೆಯ ಇತರೇ ಸಹಕಾರ ಸಂಘಗಳ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಇತರೇ ಸ್ಥಾನವು ನಮ್ಮ ಗುಂಪಿಗೆ ದೊರಕಲಿದೆ ಎಂದವರು ಹೇಳಿದರು. ಜಿಲ್ಲೆಯ 853 ಇತರೇ …
Read More »ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವವ ಅರ್ಥ ಪೂರ್ಣವಾಗಿ ಆಚರಣೆ
ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸಹಯೋಗದಲ್ಲಿ ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವವನ್ನು ಘಟಪ್ರಭಾದ ಶ್ರೀ ಹನುಮಾನ ಮಂದಿರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಇಂದಿನ ಪ್ರಸ್ತುತ ಸಮಾಜದಲ್ಲಿ ದೇವರು, ಭಕ್ತಿ, ಆಧ್ಯಾತ್ಮಿಕ ಪ್ರಧಾನ ಸಮುದಾಯಕ್ಕೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದೆ. ಹೂಗಾರಮಾದಯ್ಯನವರ ವಿನಯ, ಸಭ್ಯತೆ ಹಾಗೂ ನಿಸ್ವಾರ್ಥ ಕಾಯಕವನ್ನು ಎಲ್ಲರೂ ಬೆಳೆಸಿಕೊಂಡು ಹೋಗಬೇಕೆಂದು ಸಾನಿಧ್ಯ ವಹಿಸಿದ್ದ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು. …
Read More »ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಓ ಅಜೀತ ಮನ್ನಿಕೇರಿ ಅವರ ಪಾತ್ರ ಗಣನೀಯವಾಗಿದ್ದು, – ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮೂಡಲಗಿ ವಲಯವು ಶೈಕ್ಷಣಿಕವಾಗಿ ಸುಧಾರಿಸುವಲ್ಲಿ ನಿರ್ಗಮಿತ ಬಿಇಓ ಅಜೀತ ಮನ್ನಿಕೇರಿ ಅವರ ಪಾತ್ರ ಗಣನೀಯವಾಗಿದ್ದು, ಈಗಿರುವ ಗುಣಮಟ್ಟದ ಶಿಕ್ಷಣವನ್ನು ಮುಂದುವರೆಸಿಕೊಂಡು ಹೋಗಲು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ನೂತನ ಬಿಇಓ ಅವರಿಗೆ ಸಲಹೆ ಮಾಡಿದರು. ಶನಿವಾರದಂದು ತಾಲ್ಲೂಕಿನ ತಿಗಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಜರುಗಿದ ಮೂಡಲಗಿ ತಾಲ್ಲೂಕು ಮಟ್ಟದ ಗುರುಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ …
Read More »ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಸಂಧಾನ ಯಶಸ್ವಿ
ಯರಗಟ್ಟಿ: ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಯರಗಟ್ಟಿ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣಾ ಅಭ್ಯರ್ಥಿ ಆಯ್ಕೆಯು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಂಧಾನದ ಫಲದಿಂದ ಸುಸೂತ್ರವಾಗಿ ನಡೆದಿದ್ದು, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಯರಗಟ್ಟಿ ಕ್ಷೇತ್ರ ಮತ್ತು ಸವದತ್ತಿ ಕ್ಷೇತ್ರಕ್ಕೆ ವಿರುಪಾಕ್ಷಿ ಮಾಮನಿಯವರು ಅಭ್ಯರ್ಥಿಗಳಾಗಲಿದ್ದಾರೆ ಎಂದು ಅವರು ಪ್ರಕಟಿಸಿದರು. ಯರಗಟ್ಟಿಯ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಯರಗಟ್ಟಿ ಭಾಗದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿಯವರು …
Read More »
IN MUDALGI Latest Kannada News