Breaking News
Home / ಬೆಳಗಾವಿ / ಮಂಜು ಬೀಳುತ್ತಿರುವದು ಇಲ್ಲಿಯ ವಾಹನ ಸವಾರರು ಮತ್ತು ರೈತರು ಆತಂಕದಲಿ.!

ಮಂಜು ಬೀಳುತ್ತಿರುವದು ಇಲ್ಲಿಯ ವಾಹನ ಸವಾರರು ಮತ್ತು ರೈತರು ಆತಂಕದಲಿ.!

Spread the love

ಮಂಜು ಬೀಳುತ್ತಿರುವದು ಇಲ್ಲಿಯ ವಾಹನ ಸವಾರರು ಮತ್ತು ರೈತರು ಆತಂಕದಲಿ.!
*ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಿಂದ ಬೆಳಗ್ಗೆ ಸುಮಾರು ಎರಡ್ಮೂರು ಗಂಟೆಗಳ ಕಾಲ ರಸ್ತೆಯ ಅಕ್ಕ-ಪಕ್ಕ, ಎದುರುಗಡೆ ಬರುವ ವಾಹನ, ಪಾದಚಾರಿಗಳು ಕಾಣದ ಹಾಗೇ ಹೊಗೆ ಮಿಶ್ರಿತ ನೀರು ಮಂಜು ಬಿಳುತ್ತಿರುವದರಿಂದ ವಾಹನ ಸವಾರರಿಗೆ ಮತ್ತು ಇಲ್ಲಿಯ ರೈತರಿಗೆ ಆತಂಕ ಎದುರಾಗಿದೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರ ನ.8ರಂದು ಬೆಳಗ್ಗೆ 6ಗಂಟೆಯಿಂದ 8 ಗಂಟೆವರೆಗೆ ಹೊಗೆ ಮಿಶ್ರಿತ ನೀರು ಮಂಜು ಬಿದ್ದಿದ್ದರಿಂದ ಇಲ್ಲಿಯ ಮುಖ್ಯ ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ವಾಹನ ಸೇರಿದಂತೆ ವಿವಿಧ ವಾಹನ ಚಾಲಕರು ಮುಂದೆ ಸಾಗಲು ದಾರಿ ಕಾಣದೇ ಹರಸಾಹಸ ಮಾಡುವಂತಾಗಿತ್ತು.
ಒಂದಡೆ ಇಲ್ಲಿಯ ರಸ್ತೆಗಳ ಮೇಲೆ ವಾಹನ ಸವಾರರು ಜೀವಭಯದಲ್ಲಿ ಓಡಾಡುವ ದುಸ್ಥಿತಿ ಎದುರಾದರೆ, ಇನ್ನೂಂದಡೆ ಮಂಜು ಆವರಿಸುತ್ತಿವುದರಿಂದ ಭೂಮಿಯಲ್ಲಿದ್ದ ಕೆಲವು ಬೆಳೆಗಳು ಹಾಗೂ ಕೆಲವು ತೋಟಗಾರಿಕೆ ಬೆಳೆಗಳು ಹಾಳಾಗುವ ಆತಂಕದ ಪರಿಸ್ಥಿತಿ ಸ್ಥಳೀಯ ರೈತರನ್ನು ಚಿಂತಿತರನ್ನಾಗಿಸಿದೆ.
ಕಳೆದ ಎರಡ್ಮೂರು ವರ್ಷಗಳಿಂದ ಒಂದಿಲ್ಲೊಂದು ಪ್ರಕೃತಿ ವಿಕೂಪಕ್ಕೆ ರೈತರು ತುತ್ತಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಹೊಗೆ ಅಥವಾ ನೀರಿನ ಮಂಜು ನಿತ್ಯ ಹೀಗೆಯೇ ಬೀಳುವುದರಿಂದ ತೋಟಗಾರಿಕೆ ಕೆಲವು ಬೆಳೆಗಳ ಹೂವು ಕಾಯಿ ಹಿಡಿಯದೇ ಕತ್ತರಿಸಿ ನೆಲಕ್ಕೆ ಬಿದ್ದು ಬೆಳೆಗಳು ಪೂರ್ಣ ಹಾಳಾಗುತ್ತವೆ. ಇದಕ್ಕೆ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರಿಗೆ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಅಂಬುವುದು ಸ್ಥಳೀಯರ ಒತ್ತಾಯವಾಗಿದೆ.


Spread the love

About inmudalgi

Check Also

ಶ್ರೀ ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ

Spread the loveಲಕ್ಷ್ಮೀ…ಮಹಾಲಕ್ಷ್ಮೀ ಕಾಪಾಡಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ವಾರದ ದಿನ ಶುಕ್ರವಾರ ಜು.31ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ