ಮೂಡಲಗಿ ಶ್ರೀ ವೇಮನ್ ಕೋ.ಆಪ್ ಕ್ರಡಿಟ್ ಸೊಸೈಟಿಗೆ ರೂ. 1.72 ಕೋಟಿ ಲಾಭ
ಮೂಡಲಗಿ: ಇಲ್ಲಿಯ ಶ್ರೀ ವೇಮನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು 2022ರ ಮಾರ್ಚ ಅಂತ್ಯಕ್ಕೆ ರೂ.1.72 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಸಂತೋಷ ಕೆ. ಸೋನವಾಲಕರ ಅವರು ತಿಳಿಸಿದರು.
ಶನಿವಾರ ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸೊಸೈಟಿಯು ಸದ್ಯ ರೂ. 2.69 ಕೋಟಿ ಶೇರು ಬಂಡವಾಳ, ರೂ. 6.16 ಕೋಟಿ ನಿಧಿಗಳು, ರೂ. 99.10 ಠೇವುಗಳು, ರೂ. 41.56 ಕೋಟಿ ವಿವಿಧ ಬ್ಯಾಂಕ್‍ಗಳಲ್ಲಿ ಗುಂತಾವಣಿಗಳು ಮತ್ತು ರೂ. 7.07 ಕೋಟಿ ವಿವಿಧ ಬ್ಯಾಂಕ್‍ಗಳ ಖಾತೆಗಳಲ್ಲಿ ಠೇವು ಇರುವವು. ರೂ. 114.22 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು ರೂ.391.90 ಕೋಟಿ ವಾರ್ಷಿಕ ವಹಿವಾಟು ಮಾಡಿದ್ದು, ಅಡಿಟ್‍ದಲ್ಲಿ ‘ಅ’ ಶ್ರೇಯಾಂಕವನ್ನು ಪಡೆದುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಶೇ.13ರಷ್ಟು ಲಾಭಾಂಶವನ್ನು ವಿತರಿಸಿದೆ ಎಂದು ತಿಳಿಸಿದರು.
‘ಬಂಗಾರ ಭದ್ರತಾ ನಗದು ಪತ್ತಿನ ಸಾಲ’ ಯೋಜನೆಯನ್ನು ಸೊಸೈಟಿಯು ಪ್ರಾರಂಭಿಸುವ ಮೂಲಕ ಬಂಗಾರದ ಮೇಲೆ ಸುಲಭವಾಗಿ ಸಾಲ ದೊರೆಯುವಂತ ವಿನೂತನವಾದ ಯೋಜನೆಯನ್ನು ಸಹಕಾರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಾಡಿರುವ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ ಎಂದರು. ಸೊಸೈಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಒಟ್ಟು 161 ಜನರಿಗೆ ಪ್ರತಿಯೊಬ್ಬರಿಗೆ ರೂ. 5 ಲಕ್ಷ ಮೌಲ್ಯದ ಆರೋಗ್ಯ ವಿಮೆ ಮಾಡಿಸಿದ್ದು, ಈಗಾಗಲೇ ಸಾಕಷ್ಟು ಸಿಬ್ಬಂದಿಯವರು ವಿಮೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದರು.
ಸೊಸೈಟಿಯ ಉಪಾಧ್ಯಕ್ಷ ಹಣಮಂತ ಆರ್. ಪ್ಯಾಟಿಗೌಡರ ಮಾತನಾಡಿ ಸೊಸೈಟಿಯು ಸದ್ಯ 6 ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಪ್ರಗತಿಯಲ್ಲಿವೆ. ಇನ್ನು ನಾಲ್ಕು ಶಾಖೆಗಳನ್ನು ತೆರೆಯುವ ಮೂಲಕ ಸೊಸೈಟಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಿಜಯಕುಮಾರ ಸೋನವಾಲ್ಕರ, ಪಾಂಡಪ್ಪ ಸೋನವಾಲ್ಕರ್, ಯಮನಪ್ಪ ಮಂಟನವರ, ತಮ್ಮಣ್ಣ ಝಂಡೇಕುರಬರ, ಹಣಮಂತ ದಂಡಪ್ಪನವರ, ಸಿದ್ದಪ್ಪ ಪೂಜೇರಿ, ಸಚಿನ ಸೋನವಾಲ್ಕರ್, ಲಕ್ಷ್ಮೀಬಾಯಿ ಸಂತಿ, ಲತಾ ಸತರಡ್ಡಿ, ರಾಮಪ್ಪ ಹಾದಿಮನಿ ಹಾಗೂ ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ, ಸಹಾಯಕ ಕಾರ್ಯದರ್ಶಿ ಬಾಹುಬಲಿ ಜೋಕಿ ಇದ್ದರು.