ಗೋಕಾಕ ತಾಪಂ ಸಂಪನ್ಮೂಲ ವ್ಯಕ್ತಿ ಉಮೇಶ ವಗ್ಗರ ಅವರು ಬೆಟಗೇರಿ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ
ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಮೇ.27ರಂದು ಗೋಕಾಕ ತಾಲೂಕಾ ಪಂಚಾಯತಿ ಸಂಪನ್ಮೂಲ ವ್ಯಕ್ತಿ ಉಮೇಶ ವಗ್ಗರ ಅವರು ಭೇಟಿ ನೀಡಿ, ಸ್ಥಳೀಯ ಗ್ರಂಥಾಲಯದ ವಸ್ತು ಸ್ಥಿತಿ ಮತ್ತು ಪ್ರಗತಿ ನೋಟದ ಮಾಹಿತಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿಯ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಅವರು ಮಾತನಾಡಿ, ಬೆಟಗೇರಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಪಂ ಈಗಿನ ಮತ್ತು ಹಿಂದಿನ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಇಲ್ಲಿಯ ಗ್ರಾಪಂ ಗ್ರಂಥಾಲಯ ಅಭಿವೃದ್ಧಿಗೆ ನೀಡುತ್ತಿರುವ ಸಹಾಯ, ಸಹಕಾರವನ್ನು ಶ್ಲಾಘಿಸಿದರು. ಬೆಟಗೇರಿ ಗ್ರಾಮದ ಗಣ್ಯರು, ಮುಖಂಡರು, ಗ್ರಂಥಾಲಯ ಓದುಗರು, ಸ್ಥಳೀಯರು ಇದ್ದರು.
IN MUDALGI Latest Kannada News