Breaking News
Home / Recent Posts / ತಂಬಾಕು ಹಲ್ಲುಗಳ ಆರೋಗ್ಯ ಹಾಳು ಮಾಡುತ್ತದೆ

ತಂಬಾಕು ಹಲ್ಲುಗಳ ಆರೋಗ್ಯ ಹಾಳು ಮಾಡುತ್ತದೆ

Spread the love

ತಂಬಾಕು ಹಲ್ಲುಗಳ ಆರೋಗ್ಯ ಹಾಳು ಮಾಡುತ್ತದೆ

ಮೂಡಲಗಿ: ‘ಸಿಗರೇಟು ಮತ್ತು ತಂಬಾಕು ಸೇವನೆಯು ಹಲ್ಲುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಹಲ್ಲುಗಳ ಆಯುಷ್ಯ ವೃದ್ಧಿಗಾಗಿ ತಂಬಾಕು ಸೇವಿಸಬಾರದು’ ಎಂದು ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ಶ್ರೀರಂಗ ದಂತ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ತಂಬಾಕು ಸೇವನೆಯು ವಸಡು ಕ್ಯಾನ್ಸರ್ ಕಾಯಿಲೆಗೂ ದಾರಿಮಾಡಿಕೊಡುತ್ತದೆ. ತಂಬಾಕು, ಧೂಮಪಾನದಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಲಯನ್ಸ್ ಕ್ಲಬ್‍ವು ತಿಂಗಳಿಗೊಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಲಿದೆ. ಮಧುಮೇಹ, ಕಣ್ಣು ತಪಾಸಣೆ, ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ, ರಕ್ತವೊತ್ತಡ ಸೇರಿದಂತೆ ಹಲವಾರು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಜನರು ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ 60ಕ್ಕೂ ಅಧಿಕ ಜನರ ಹಲ್ಲುಗಳ ತಪಾಸಣೆಯನ್ನು ಮಾಡಿದರು.
ಲಯನ್ಸ್ ಕ್ಲಬ್ ಸದಸ್ಯರಾದ ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಅಪ್ಪಣ್ಣ ಬಡಿಗೇರ, ದುಂಡಪ್ಪ ಕಂಕಣವಾಡಿ, ಮಲ್ಲಿಕಾರ್ಜುನ ಸಸಾಲಟ್ಟಿ, ಸೋಮಶೇಖರ ಹಿರೇಮಠ, ಸುರೇಂದ್ರ ಆದಪ್ಪಗೋಳ, ಸಂಜಯ ಮಂದ್ರೋಳಿ ಭಾಗವಹಿಸಿದ್ದರು.


Spread the love

About inmudalgi

Check Also

ಫೆ. 19ರಿಂದ ಹೊನಕುಪ್ಪಿ ಚಂದ್ರಮ್ಮಾದೇವಿ ಜಾತ್ರೆ

Spread the loveಮೂಡಲಗಿ: ‘ಮೂಡಲಗಿ ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮಾದೇವಿ ಜಾತ್ರೆಯು ಫೆ. 19ರಿಂದ ಫೆ. 23ರ ವರೆಗೆ ಜರುಗಲಿದ್ದು, ಜಾತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ