Breaking News
Home / ಬೆಳಗಾವಿ / ಬೆಟಗೇರಿ ಪಿಕೆಪಿಎಸ್‍ಗೆ 26.99ಲಕ್ಷ ರೂಪಾಯಿ ಲಾಭ

ಬೆಟಗೇರಿ ಪಿಕೆಪಿಎಸ್‍ಗೆ 26.99ಲಕ್ಷ ರೂಪಾಯಿ ಲಾಭ

Spread the love

ಬೆಟಗೇರಿ ಪಿಕೆಪಿಎಸ್‍ಗೆ 26.99ಲಕ್ಷ ರೂಪಾಯಿ ಲಾಭ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ
ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸನ್2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆ
ಸೆ.5ರಂದು ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕ ಮಹಾದೇವ ಕೋಣಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು, ಸಂಘವು ಸನ್2025-26ನೇ ಸಾಲಿ ನಲ್ಲಿ ಸಂಘವು ಒಟ್ಟು 26,99,396/-ರೂ.ಗಳ ನಿವ್ವಳ ಲಾಭ ಗಳಿಸಿದೆ. ಸಂಘದ ಶೇರು ಸದಸ್ಯರಿಗೆ ಶೇ6ರಷ್ಟು ಡಿವ್ಹಿಡೆಂಡ್ ವಿತರಿಸಲಾಗುವದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಸವಂತ ಕೋಣಿ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿ, ಸಂಘದಿಂದ ದೊರಕುವ ವಿವಿಧ ಸಾಲ ಸೌಲಭ್ಯ, ಪ್ರಯೋಜನಗಳ ಕುರಿತು ಹೇಳಿದರು. ಸಂಘದ ಶೇರ ಸದಸ್ಯರು, ಗ್ರಾಹಕರು, ನಾಗರಿಕರ ಜೊತೆ ಆಡಳಿತ ಮಂಡಳಿ ಸದಸ್ಯರು ಸಂಘದ ಸಮಗ್ರ ಪ್ರಗತಿ, ಸಂಘದಿಂದ ದೊರಕುವ ವಿವಿಧ ಸಾಲ, ಸೌಲಭ್ಯಗಳ ಕುರಿತು ಚರ್ಚಿಸಿದರು.
ಈ ವೇಳೆ ಈರಯ್ಯ ಹಿರೇಮಠ, ಪತ್ರೆಪ್ಪ ನೀಲಣ್ಣವರ, ಶ್ರೀಶೈಲ ಗಾಣಗಿ, ಲಕ್ಷ್ಮಣ ನೀಲಣ್ಣವರ, ಮೆಳೆಪ್ಪ ಮೇಳೆಣ್ಣವರ, ಅಡಿವೆಪ್ಪ ಮುರಗೋಡ, ಹನುಮಂತ ವಡೇರ, ಮಾಯಪ್ಪ ಬಾಣಸಿ, ಬಸನಪ್ಪ ದೇಯಣ್ಣವರ ಸೇರಿದಂತೆ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ರೇವಣಸಿದ್ಧ ಸವತಿಕಾಯಿ, ಮುತ್ತೆಪ್ಪ ದೇಯಣ್ಣವರ, ಚನ್ನಬಸಪ್ಪ ಭಾಗೋಜಿ, ಹಾಗೂ ಸದಸ್ಯರು, ಶೇರ ಸದಸ್ಯರು, ಗ್ರಾಹಕರು, ಸಂಘದ ಸಿಬ್ಬಂದಿ ವರ್ಗ, ಇತರರು ಇದ್ದರು.


Spread the love

About inmudalgi

Check Also

ಬಾಲಕಿ ಇಂದುಶ್ರೀ ರಾಧೆ ವೇಷ- ಭೂಷಣದಲ್ಲಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ದೇವಸ್ಥಾನದಲ್ಲಿ ನಡೆದ ಶ್ರೀ ಕೃಷ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ