Breaking News
Home / Recent Posts / *ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ* *ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ*

*ಕೆಎಂಎಫ್ ಮದರ್ ಡೈರಿಗೆ ಕೇಂದ್ರ ಸಚಿವ ಅಮೀತ್ ಶಾ ಭೇಟಿ* *ಕೆಎಂಎಫ್ ರೈತ ಸ್ನೇಹಿ ಕಾರ್ಯ ಯೋಜನೆಗಳಿಗೆ ಸಚಿವ ಶಾ ಹರ್ಷ*

Spread the love

ಬೆಂಗಳೂರು:  ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ರವರು ಉಪಸ್ಥಿತರಿದ್ದರು.

ಕಹಾಮದ ಹಿರಿಯ ಅಧಿಕಾರಿಗಳು ಮದರ್ ಡೇರಿಯಲ್ಲಿರುವ ಹಾಲಿನ ಪುಡಿ ಘಟಕ ಮತ್ತು ಇತರೆ ಡೇರಿ ಚಟುವಟಿಕೆಗಳ ಬಗ್ಗೆ ಗಣ್ಯರಿಗೆ ವಿವರಿಸಲಾಯಿತು. ಕೇಂದ್ರ ಸಚಿವ ಅಮೀತ್ ಶಾ ಅವರು ಕಹಾಮ ಮತ್ತು ಡೇರಿ ಚಟುವಟಿಕೆಗಳನ್ನು ಶ್ಲಾಘಿಸಿ ಕೆಎಂಎಫ್ ಮತ್ತು ನಂದಿನಿ ಬ್ರ್ಯಾಂಡ್‍ನ್ನು ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯುವಂತೆ ಆಡಳಿತ ಮಂಡಳಿಯವರಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಆರ್. ಉಮಾಶಂಕರ್ ಮತ್ತು ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ
ಸಲ್ಮಾ ಕೆ ಫಹೀಮ್, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ.ರಾಜೇಂದ್ರ.ಕೆ ಮತ್ತು ಕಹಾಮದ ವ್ಯವಸ್ಥಾಪಕ ನಿರ್ದೇಶಕ ಬಿ ಸಿ ಸತೀಶ್ ಅವರು ಹಾಜರಿದ್ದರು.


Spread the love

About inmudalgi

Check Also

ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಅದರ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆ

Spread the love ಗೋಕಾಕ- ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ