Breaking News
Home / Recent Posts / ಗೋಕಾಕ ನಗರದಲ್ಲಿ ತಾಲೂಕಾ ಮಟ್ಟದ ಪಂಚಮಸಾಲಿಗಳ ಬೃಹತ ಸಮಾವೇಶ

ಗೋಕಾಕ ನಗರದಲ್ಲಿ ತಾಲೂಕಾ ಮಟ್ಟದ ಪಂಚಮಸಾಲಿಗಳ ಬೃಹತ ಸಮಾವೇಶ

Spread the love

ಮೂಡಲಗಿ: ನ.13ರಂದು ಗೋಕಾಕ ನಗರದಲ್ಲಿ ತಾಲೂಕಾ ಮಟ್ಟದ ಪಂಚಮಸಾಲಿಗಳ ಬೃಹತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಆ ಸಮಾವೇಶ ಮುಗಿಯುವುದರೊಳಗಾಗಿ ಸರ್ಕಾರ 2ಎ ಮೀಸಲಾತಿಯನ್ನು ಘೋಷಣೆ ಮಾಡಬೇಕು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸೋಮವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದ ಸಭಾ ಭವನದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಲ್ಲೋಳಿ ಹಾಗೂ ಹುಕ್ಕೇರಿ ಪಟ್ಟಣದಲ್ಲಿ ಬೃಹತ ಸಮಾವೇಶದ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿದ್ದು, ಗೋಕಾಕ ಸಮಾವೇಶದ ಒಳಗಾಗಿ ಸರ್ವ ಪಕ್ಷಗಳ ಸಭೆ ಕರೆದು ಆಯೋಗದ ವರದಿಯಲ್ಲಿ ಪಡೆದುಕೊಳ್ಳದೆ ಹೋದರೇ ಹುಕ್ಕೇರಿಯ ಸಮಾವೇಶದಲ್ಲಿ ಮಾಡಿದ ನಿರ್ಧಾರದ ಹಾಗೆ ಡಿ.12ರಂದು ವಿಧಾನಸೌಧವನ್ನು 25ಲಕ್ಷ್ಮ ಪಂಚಮಸಾಲಿಗಳಿಂದ ಮುತ್ತಿಗೆ ಹಾಕಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದರು.

ಸರ್ಕಾರ ಗೋಕಾಕ ಸಮಾವೇಶದೊಳಗಾಗಿ ಒಂದು ನಿರ್ಧಾರಕ್ಕೆ ಬರಬೇಕು ಇಲ್ಲವಾದರೇ ಬೆಂಗಳೂರಿನಲ್ಲಿ ವಿಧಾನಸೌಧ ಮುಂದೆ ವಿರಾಟ ಪಂಚಮಸಾಲಿ ಸಮಾವೇಶವನ್ನು ಮಾಡಲಾಗುವುದು ಆದರಿಂದ ಜಿಲ್ಲೆಯ ಎಲ್ಲ ಪಂಚಮಸಾಲಿಗಳು ಸಮಾವೇಶದಲ್ಲಿ ಭಾಗವಹಿಸಬೇಕೆಂದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ, ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷ ದೀಪಕ್ ಜುಂಜರವಾಡ, ಮೂಡಲಗಿ ತಾಲೂಕಾ ಯುವ ಘಟಕ ಅಧ್ಯಕ್ಷ ಸಂಗಮೇಶ ಕೌಜಲಗಿ ಮೀಸಲಾತಿ ಹೋರಾಟ ಸಮಿತಿ ತಾಲೂಕಾ ಅಧ್ಯಕ್ಷ ಮಲ್ಲು ಗೋಡಿಗೌಡರ, ರಾಜ್ಯ ಪಂಚಸಮಾಲಿ ರಕ್ಷಕದಳ ಅಧ್ಯಕ್ಷ ಬಾಳೇಶ ಶಿವಾಪೂರ, ಮೂಡಲಗಿ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ, ಬಸವಶ್ರೀ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ