Breaking News
Home / Recent Posts / ಹೆಸ್ಕಾಂ ಜಾಗೃತಿ ಸಭೆ

ಹೆಸ್ಕಾಂ ಜಾಗೃತಿ ಸಭೆ

Spread the love

 ಹೆಸ್ಕಾಂ ಜಾಗೃತಿ ಸಭೆ

ಮೂಡಲಗಿ: ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್‍ಇಡಿ ಬಳಕೆಯ ಪ್ರಯೋಜನಗಳು, ಕೇಂದ್ರ ಸರಕಾರದ ಸೌರ ಚಾವಣಿ ಯೋಜನೆ ಹಂತ-2, ಪ್ರಧಾನ ಮಂತ್ರಿ ಕಿಸಾನ ಉರ್ಜಾ ಸುರಕ್ಷಾ ಉತ್ಥಾನ ಮಹಾಭಿಯಾನ (ಪಿಎಂ ಕುಸುಮ) ಇವಿ ಚಾರ್ಜಿಂಗ ಸೆಂಟರ್ ಇತ್ಯಾದಿಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಮೂಡಲಗಿ ಹೆಸ್ಕಾಂ ಉಪ ವಿಭಾಗದ ವತಿಯಿಂದ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಡಿ.19 ರಂದು ಮೂಡಲಗಿ-2 ಗುಜನಟ್ಟಿಯಲ್ಲಿ ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ, ಡಿ.20 ರಂದು ಯಾದವಾಡ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ, ಡಿ.21 ರಂದು ಕುಲಗೋಡ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ, ಡಿ.22 ರಂದು ಮೂಡಲಗಿ ಪಟ್ಟಣದಲ್ಲಿ ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ, ಡಿ.23ರಂದು ಹಳ್ಳೂರ- ರಂಗಾಪೂರ ಗ್ರಾಮದಲ್ಲಿ ಬೆಳಿಗ್ಗೆ 10 ರಿಂದ 1-00 ಗಂಟೆಯವರೆಗೆ ಜನ ಜಾಗೃತಿ ಸಭೆಗಳನ್ನು ಹಮ್ಮಿಕೊಂಡಿರುವ ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಬೇಕು ಎಂದು ಮೂಡಲಗಿ ಹೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ.ಎಸ್.ನಾಗನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ