ಚಲವಾದಿ ಅವರಿಗೆ ಪಿ.ಎಚ್.ಡಿ ಪದವಿ
ಮೂಡಲಗಿ: ತಾಲೂಕಿನ ಯಾದವಾಡದ ಜಿ.ಎನ್.ಎಸ್.ಸಂ.ಪ.ಪೂ ಕಾಲೇಜನ ಇತಿಹಾಸ ಉಪನ್ಯಾಸಕ ವಾಯ್.ಎಚ್.ಚಲವಾದಿ ಅವರು ಮಂಡಿಸಿದ ಕೃಷ್ಣ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳ
ಎಂಬ ವಿಷಯದ ಮಹಾಪ್ರಬಂದಕ್ಕೆ ಹಂಪಿ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಡಾ.ಆರ್.ಎಚ್.ಸಜ್ಜನವರ ಮಾರ್ಗದರ್ಶನದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಸಾಧಕ ಬಾಧಕಗಳ ಪ್ರಬಂದವನ್ನು ಸಿದ್ಧಪಡಿಸಿದ್ದರು. ವಾಯ್.ಎಚ್.ಚಲವಾದಿ ಅವರಿಗೆ ಪಿಎಚ್‍ಡಿ ಪದವಿ ದೊರೆತ್ತಿರುವದಕ್ಕೆ ವಿ.ವಿ.ಸಂಘದ ಅಧ್ಯಕ್ಷ ಎಸ್.ಬಿ.ನ್ಯಾಮಗೌಡರ ಉಪಾಧ್ಯಕ ಎಂ.ಎ.ರೂಡಗಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಎಸ್.ಎಸ್.ಕಣಬೂರ ವಿ.ವಿ.ಸಂಘದ ಅಂಗ ಸಂಸ್ಥೆಗಳ ಉಪನ್ಯಾಸಕ ವೃಂದದವರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.