ಹೊಸ ವರ್ಷದ ನಿಮಿತ್ಯ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ
ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್ ಪ್ರೌಢಶಾಲೆಯಲ್ಲಿ ಹೊಸ ವರ್ಷದ ನಿಮಿತ್ಯ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ರಂಗೋಲಿ ಚಿತ್ರ ಬೀಡಿಸುವ ಸ್ಪರ್ಧೆಗಳು ಜರುಗಿದವು.
ಪ್ರೌಢ ಶಾಲೆಯ ಉಪಪ್ರಾಚಾರ್ಯ ಕೆಎಸ್ ಹೊಸಟ್ಟಿ, ಶಿಕ್ಷಕರಾದ ಆರ್.ಕೆ.ಕಳಸಣ್ಣವರ, ಸಿ.ಎಂ ಹಂಜಿ ಕಾರ್ಯನಿರ್ವಹಿಸಿದರು. ಚಿತ್ರ ಕಲಾ ಶಿಕ್ಷಕ ಎಸ್ ಎಸ್ ಕುರಣೆ ನಿರ್ವಹಣೆ ಮಾಡಿದರು.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಚಿತ್ರಗಳನ್ನು ಬಿಡಿಸುವಲ್ಲಿ ಸ್ವಾತಿ ಬೀಸನಕೊಪ್ಪ, ಐಶ್ವರ್ಯ ಗಡಾದ್, ಸಾನಿಯಾ ನದಾಫ್, ನಾಗಮ್ಮ ಮಾನೆ. ಸುಶ್ಮಿತಾ ಹಳ್ಳುರ ಬಹುಮಾನಗಳನ್ನು ಪಡೆದುಕೊಂಡರು.
ಈ ಸಮಯದಲ್ಲಿ ಶಿಕ್ಷಕರಾದ ಬಿ.ಕೆ.ಕಡಪ್ಪಗೊಳ್, ಆರ್.ಬಿ.ಗಂಗಾರಡ್ಡಿ, ಆರ್.ಎಂ.ಕಾಂಬಳೆ, ಆರ್.ಕೆ ಕಳಸಣ್ಣವರ , ರವಿ ಹೊಸಟ್ಟಿ ಮತ್ತಿತರರು ಉಪಸ್ಥಿತರಿದ್ದರು.