Breaking News
Home / Recent Posts / ‘ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’

‘ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’

Spread the love

 

‘ಮನುಷ್ಯ ಮನುಷ್ಯರಂತೆ ಬದುಕುವುದನ್ನು ಕಲಿಯಬೇಕು’

ಮೂಡಲಗಿ: ‘ವಿದ್ಯೆ, ದಾನ, ಧರ್ಮ, ಧ್ಯಾನ, ಉತ್ತಮ ಆಚಾಚರಗಳಿಲ್ಲದ ಮನುಷ್ಯನ ಬದುಕು ವ್ಯರ್ಥವಾದದ್ದು’ ಎಂದು ಬೀದರದ ಚಿದಂಬರಾಶ್ರಮದ ಸಿದ್ಧಾರೂಢ ಮಠದ ಡಾ. ಶಿವಕುಮಾರ ಸ್ವಾಮೀಜಿಗಳು ಹೇಳಿದರು.
ಇಲ್ಲಿಯ ವಿ.ಬಿ. ಸೋನವಾಲಕರ ಶಾಲೆಯ ಆವರಣದಲ್ಲಿ ವಿಶ್ವಶಾಂತಿಗಾಗಿ ಜರುಗುತ್ತಿರುವ 14ನೇ ಸತ್ಸಂಗ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ಮ ಮತ್ತು ಧರ್ಮದ ದಾರಿಯಲ್ಲಿ ನಡೆದು ಮನುಷ್ಯ ತನ್ನ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.
ಯಾವ ಮನುಷ್ಯನು ಧರ್ಮ, ನೀತಿ, ನಿಯಮಗಳ ಕಟ್ಟಳೆಗಳಲ್ಲಿ ನಡೆಯುವುದಿಲ್ಲ ಆತ ಮೃಗಗಳಿಗಿಂತ ಕೀಳು ಎನಿಸುವನು. ಮನುಷ್ಯ ಮನುಷ್ಯನಾಗಿ ಬದುಕುವುದನ್ನು ಕಲಿಯಬೇಕು ಎಂದರು.
ಮನುಷ್ಯನು ದೇವರಿಗೆ, ಮಹಾತ್ಮರಿಗೆ, ಸತ್ಪುರುಷರಿಗೆ ಪ್ರೀಯರಾಗಿ ಬದುಕುವುದನ್ನು ಕಲಿಯಬೇಕು. ಮನುಷ್ಯನ ನಡೆ, ನುಡಿಗಳು ಮಹಾತ್ಮರನ್ನು ಪ್ರಸನ್ನರನ್ನಾಗಿಸಬೇಕು. ನಿತ್ಯ ಸತ್ಸಂಗದಲ್ಲಿ ಭಾಗಿಯಾಗಿ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಕಲಬುರ್ಗಿಯ ಪೂರ್ಣಪ್ರಜ್ಞಾ ಯೋಗಾಶ್ರಮದ ಮಾತೋಶ್ರೀ ಲಕ್ಷ್ಮೀತಾಯಿ ಹಾಗೂ ಇಟ್ನಾಳದ ಸಿದ್ದೇಶ್ವರ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ‘ಶಾಂತ ರೊಸೆದು ಬಣ್ಣಿಸುವ ವರ್ತನವನು’ ವಿಷಯ ಕುರಿತು ಪ್ರವಚನ ಮಾಡಿದರು.
ಸತ್ಸಂಗದ ಮೊದಲ ದಿನದ ಅನ್ನದಾಸೋಹಿ ಶರಣ ಈರಪ್ಪಾ ಬಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸತ್ಸಂಗ ಸಮಿತಿಯ ವೀರಣ್ಣ ಹೊಸೂರ, ಶಂಕರಯ್ಯ ಹಿರೇಮಠ, ಬಿ.ವೈ. ಶಿವಾಪುರ, ಈಶ್ವರ ಸತರಡ್ಡಿ, ವಿಲಾಸ ನಾಸಿ, ನೇಮೂ ಬೇವಿನಕಟ್ಟಿ, ಅಜ್ಜಪ್ಪ ಬಳಿಗಾರ ಮತ್ತಿತರರು ಇದ್ದರು.

ಸತ್ಸಂಗ: ವಿಶ್ವಶಾಂತಿಗಾಗಿ ನಡೆಯುತ್ತಿರುವ ಸಂತ್ಸಂಗ ಸಮ್ಮೇಳನವು ಜ. 18ನೇ ವರೆಗೆ ಮೂಡಲಗಿಯ ಬಿ.ವಿ. ಸೋನವಾಲಕರ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರುಗುತ್ತದೆ. ಹಲವಾರು ಮಹಾತ್ಮರು, ಪೂಜ್ಯರು ಭಾಗವಹಿಸಿ ಪ್ರವಚನ ಮಾಡಲಿದ್ದಾರೆ. ಪ್ರತಿ ದಿನ ಪ್ರವಚನ ನಂತರ ಅನ್ನಪ್ರಸಾದ ಇರುವುದು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ