Breaking News
Home / Recent Posts / ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡಿದೆ – ಬಸವರಾಜ ಪಣದಿ

ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡಿದೆ – ಬಸವರಾಜ ಪಣದಿ

Spread the love

ಬೆಟಗೇರಿ:ಪಹಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಿಂಚಣಿ ಸೇರಿದಂತೆ ಕಂದಾಯ ಇಲಾಖೆ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಬೆಟಗೇರಿ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಗೋಕಾಕ ಕಂದಾಯ ಇಲಾಖೆ ಹಾಗೂ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಬೆಟಗೇರಿ ಗ್ರಾಮದಲ್ಲಿ ಮಾ.12ರಂದು ನಡೆದ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ, ಕಂದಾಯ ಇಲಾಖೆಯ ದಾಖಲೆಗಳಿಗೆ ಕಾಲಹರಣ ಮಾಡಿ ಅಲೆದಾಟ ಮಾಡಬೇಕಿಲ್ಲಾ, ಸರ್ಕಾರ ಈಗ ರೈತರ ಮನೆಗೆ ದಾಖಲೆ ತಲುಪಿಸುವ ಕಾರ್ಯ ಕೈಗೊಂಡಿದೆ ಎಂದರು.


ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ ಮಾತನಾಡಿ, ಕಂದಾಯ ಇಲಾಖೆ ದಾಖಲೆ ರೈತರ ಮನೆ ಬಾಗಿಲಿಗೆ ಯೋಜನೆಯ ಸದುಪಯೋಗವನ್ನು ಸ್ಥಳೀಯರು ಪಡೆದುಕೊಳ್ಳಬೇಕು ಎಂದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ ಹಾಗೂ ಸಿಬ್ಬಂದಿ ಬೆಟಗೇರಿ ಗ್ರಾಮದ ರೈತರ ಮನೆ ಮನೆಗೆ ತೆರಳಿ ಕಂದಾಯ ಇಲಾಖೆ ದಾಖಲೆ ನೀಡಿದರು.
ಈರಯ್ಯ ಹಿರೇಮಠ, ಸುಭಾಷ ಜಂಬಗಿ, ಮನೋಹರ ಕತ್ತಿ, ಬಸಪ್ಪ ಮೇಳೆಣ್ಣವರ, ಅಶೋಕ ಕೋಣಿ, ಮಂಜು ಹಳಬರ, ಸಂಜು ಪೂಜೇರಿ, ಮಂಜು ಕಂಬಿ, ಸತ್ತೆಪ್ಪ ಮಾಳೇದ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ ಸಿಬ್ಬಂದಿ, ಗಣ್ಯರು, ಸ್ಥಳೀಯರು ಇದ್ದರು.


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ